ದೊಡ್ಡಬಳ್ಳಾಪುರ: ಸೆ.3 ರಂದು ನಡೆಯಲಿರುವ ನಗರ ಸಭೆ ಚುನಾವಣೆಯ 31 ಸ್ಥಾನಗಳಿಗಾಗಿ 119 ಮಂದಿ ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಕಾಂಗ್ರೆಸ್-31, ಬಿಜೆಪಿ -30, ಜೆಡಿಎಸ್-28, ಸಿಪಿಐ(ಎಂ)-2, ಬಿಎಸ್‍ಪಿ-3 , ಕನ್ನಡ ಪಕ್ಷ-5, ಕೆ.ಆರ್.ಎಸ್-2, ಉತ್ತಮ ಪ್ರಜಾಕೀಯ ಪಕ್ಷ-1, ಎಸ್.ಡಿ.ಪಿ.ಐ-2, ಹಾಗೂ ಪಕ್ಷೇತರರು -15 ಸೇರಿ 119 ಮಂದಿ ಅಂತಿಮ ಕಣದಲ್ಲಿದ್ದು, ಕಣದಲ್ಲಿ ಮಹಿಳಾ ಮೀಸಲಾತಿ ಅನ್ವಯ 14 ಸ್ಥಾನಗಳು ಮೀಸಲಿರಿಸಲಾಗಿದೆ.
ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಎಲ್ಲಾ 31 ವಾರ್ಡ್‍ಗಳಲ್ಲಿ ಸ್ಪರ್ಧೆಗಿಳಿದಿದೆ. ಬಿಜೆಪಿ-30, ಜೆಡಿಎಸ್-28 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ.
ನಗರದ 2ನೇ ವಾರ್ಡ್‍ನಲ್ಲಿ ನಗರಸಭೆ ಮಾಜಿ ಸದಸ್ಯ ಆರ್.ಕೆಂಪರಾಜ್ ಜೆಡಿಎಸ್‍ನಿಂದ ಸ್ಪರ್ದಿಸುತ್ತಿದ್ದು 26ನೇ ವಾರ್ಡ್‍ನಲ್ಲಿ ಅವರ ಪತ್ನಿ ವಸಂತಕುಮಾರಿ ಜೆಡಿಎಸ್ ನಿಂದ ಸ್ಪರ್ಧೆಗಳಿದಿದ್ದು, ಗಂಡ ಹೆಂಡತಿ ಇಬ್ಬರೂ ಸ್ಪರ್ಧೆಗಿಳಿದಿದ್ದಾರೆ. 13 ಮೇ ವಾರ್ಡಿನಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ 28 ವರ್ಷದ ಶ್ಯಾಮಸುಂದರ ಶಿವ ಸ್ಪರ್ದೆಗಿಳಿದರೆ, ಪತ್ರಕರ್ತರಾದ ಗಂಗಾರಾಜ್ ಶಿರವಾರ 18ನೇ ವಾರ್ಡ್ ನಿಂದ, 22ನೇ ವಾರ್ಡ್ ನಿಂದ ಎಂ.ಜೆ. ರಾಜಶೇಖರ ಶೆಟ್ಟಿ ( ರಾಜೇಂದ್ರ ಕುಮಾರ್) ಸ್ಪರ್ದೆಗಿಳಿದಿರುವುದು ವಿಶೇಷವಾಗಿದೆ.
ಶಾಸಕ ಟಿ.ವೆಂಕಟರಮಣಯ್ಯರಿಂದ ಪ್ರಚಾರ: 31 ವಾರ್ಡ್‍ಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ನಗರಸಭೆಗೆ ಹೆಚ್ಚಿನ ಅಭಿವೃದ್ದಿಗೆ ಅನುವು ಮಾಡಿಕೊಡಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ನಗರದ ವಿವಿಧ ವಾರ್ಡ್‍ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.
ಪಕ್ಷಗಳ ಕಾರ್ಯಕರ್ತರಿಂದ ಪ್ರಚಾರ: ಬಿಜೆಪಿ , ಜೆಡಿಎಸ್, ಕನ್ನಡ ಪಕ್ಷ, ಸಿಪಿಐ(ಎಂ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸಹ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪಕ್ಷೇತರರು ಸಹ ತಾವೂ ಅಖಾಡದಲ್ಲಿದ್ದೇವೆ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..