ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗೋಶಾಲೆ ನಿರ್ಮಾಣ / ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಕ್ರಮ ಸಚಿವ ಡಾ.ಕೆ. ಸುಧಾಕರ್

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಲಸಿಕಾಕರಣದ ವೇಗವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ವಾರಕ್ಕೊಮ್ಮೆ ಲಸಿಕಾ ಉತ್ಸವವನ್ನು ಆಯೋಜಿಸಲು ನಿರ್ಧರಿಸಿದ್ದು, ಆ ಲಸಿಕಾ ಉತ್ಸವದ ದಿನದಂದು 15 ರಿಂದ 20 ಲಕ್ಷ ಡೋಸ್ ಲಸಿಕೆ ಗುರಿ ಸಾಧಿಸಲಾಗುವುದು. ಲಸಿಕಾ ಉತ್ಸವಕ್ಕೆ ಮುಖ್ಯಮಂತ್ರಿಗಳು ಶೀಘ್ರವೇ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು‌ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿ ಕೇಂದ್ರದಲ್ಲಿ ಕಂದಾಯ ಇಲಾಖೆ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನಾಡಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಲಸಿಕಾಕರಣದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ‌ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವಾರಕ್ಕೊಮ್ಮೆ ಲಸಿಕಾ ಉತ್ಸವ ಆಯೋಜಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಲಸಿಕಾ ಉತ್ಸವದ ದಿನದಂದು 15 ರಿಂದ 20 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ನಿನ್ನೆ ಒಂದೇ ದಿನ ಲಸಿಕಾ ಮೇಳದಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಒಂದೇ ದಿನದಲ್ಲಿ ಆಗಿದೆ.

ಲಸಿಕಾ ಉತ್ಸವದಲ್ಲಿ‌ ಮುಖ್ಯವಾಗಿ ಬೆಂಗಳೂರಿನ ಕೊಳಗೇರಿ ಪ್ರದೇಶಗಳನ್ನುತಲುಪುವ ಗುರಿ ಹೊಂದಲಾಗಿದೆ. ಕೊಳಗೇರಿಗಳಲ್ಲಿನ ಕಡು ಬಡಜನರಿಗೆ ಲಸಿಕೆ ಹಾಕುವ ಕಾರ್ಯವನ್ನು‌ ಒಂದು ಆಂದೋಲನದ ರೀತಿಯಲ್ಲಿ ಮಾಡಲಾಗುವುದು. ನೆನ್ನೆ ಯ ವೇಳೆಗೆ ಬೆಂಗಳೂರು ಮಹಾ ನಗರದಲ್ಲಿ ಒಟ್ಟು 1 ಕೋಟಿ ಜನರಿಗೆ ಲಸಿಕೆ ನೀಡಲಾಗಿದ್ದು, ಇಡೀ ಬೆಂಗಳೂರಿನ ಒಟ್ಟು ಜನಸಂಖ್ಯೆ 1 ಕೋಟಿ 10 ಲಕ್ಷ ಇದೆ.  ಇದರಲ್ಲಿ ಮಕ್ಕಳನ್ನು ಹೊರತುಪಡಿಸಿದರೆ  18 ವರ್ಷ ಮೇಲ್ಪಟ್ಟವರು  ಸುಮಾರು 80 ಲಕ್ಷ ಇದ್ದಾರೆ. ಇನ್ನು ಎರಡು ತಿಂಗಳ ಒಳಗಾಗಿ ಬೆಂಗಳೂರಿನ ಎಲ್ಲಾ ವಯಸ್ಕರಿಗೂ ಎರಡೂ ಡೋಸ್ ಲಸಿಕೆ ನೀಡಿ ಶೇ.100 ರಷ್ಟು ಗುರಿ ಸಾಧಿಸಲಾಗುವುದು. ಇನ್ನೆರಡು ತಿಂಗಳಲ್ಲಿ ಬೆಂಗಳೂರು ಮಹಾನಗರ ಇಡೀ ದೇಶದಲ್ಲಿ ಮೊದಲು ಶೇ.100 ರಷ್ಟು ಲಸಿಕೆ ನೀಡಿದ ಮಹಾನಗರವಾಗಿ ಹೊರಹೊಮ್ಮಲಿದೆ.

ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಬೆಂಗಳೂರು ಮಹಾನಗರ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿತ್ತು. ಬೆಂಗಳೂರಿಗೆ ದೇಶದ ಹೊರರಾಜ್ಯಗಳಿಂದ ಮತ್ತು  ವಿದೇಶಗಳಿಂದ  ಜನರು ಬರುತ್ತಾರೆ ಆದ್ದರಿಂದ ಬೆಂಗಳೂರಿನ ಜನರಿಗೆ ಕೋವಿಡ್ ಲಸಿಕೆಯನ್ನು ಕೊಡುವ ಪ್ರಾಮುಖ್ಯತೆ ಇದೆ. ಜೊತೆಗೆ ಮುಖ್ಯಮಂತ್ರಿಗಳೂ ಈ ಬಗ್ಗೆ ಸೂಚನೆ ನೀಡಿರುವ ಕಾರಣ ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಅರೋಗ್ಯ ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ ಪ್ರತಿದಿನ ಐದು ಲಕ್ಷ ಡೋಸ್ ಲಸಿಕೆ ಪೂರೈಸಬೇಕೆಂದು ಮನವಿ ಮಾಡಲಾಗಿದ್ದು, ಈ  ಬಗ್ಗೆ ಕೇಂದ್ರದಿಂದ ಸಕಾರಾತ್ಮಕ ಭರವಸೆ ದೊರೆತಿದೆ. ರಾಜ್ಯಕ್ಕೆ ಪ್ರತಿದಿನ ಐದು ಲಕ್ಷ ಡೋಸ್ ಲಸಿಕೆ  ಬೇಡಿಕೆ ಸಲ್ಲಿಸಿದ್ದು, ಬೇಡಿಕೆಯಂತೆ ಪೂರೈಕೆಯಾದಲ್ಲಿ ರಾಜ್ಯದಲ್ಲಿ ತಿಂಗಳಿಗೆ ಒಂದೂವರೆ ಕೋಟಿ ಡೋಸ್ ಲಸಿಕೆ ನೀಡಲಾಗುವುದು ಎಂದರು.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ದಿನ 30 ಸಾವಿರ ಲಸಿಕೆ ನೀಡಲಾಗಿದೆ. ಇನ್ನು ಮುಂದೆ 50 ಸಾವಿರ ಗುರಿ ನೀಡಲಾಗಿದೆ ಎಂದರು.

ಕೋವಿಡ್ 3 ನೇ ಅಲೆಗೆ ಸಿದ್ಧತೆಯಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ನಿಗಾ ಘಟಕವನ್ನು 60-70 ಹಾಸಿಗೆ ಸಹಿತ ಅಭಿವೃದ್ಧಿಪಡಿಸಲಾಗಿದೆ ಎಂದರು.

ಕರ್ನಾಟಕ ಜಾನುವಾರು ಹತ್ಯೆ, ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದಡಿ ರಾಜ್ಯ ಸರ್ಕಾರ ಜಿಲ್ಲೆಗೊಂದರಂತೆ  ಸರ್ಕಾರಿ ಗೋಶಾಲೆಯನ್ನು 50 ಲಕ್ಷ ರೂಪಾಯಿ ವೆಚ್ವದಲ್ಲಿ ನಿರ್ಮಿಸಲು ನಿರ್ಧರಿಸಿದ್ದು, ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಗೋಶಾಲೆಯನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ‌ ನಾಗಿರೆಡ್ಡಿಹಳ್ಳಿಯಲ್ಲಿ  ತಾಲೂಕು ಆಡಳಿತ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಸರ್ಕಾರಿ ಗೋಶಾಲೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 2,13, 800 ವಯಸ್ಸಾದ ಅನುತ್ಪಾದಕ, ರೋಗಗ್ರಸ್ತ ಮತ್ತು ಪ್ರಕೃತಿ ವಿಕೋಪಗಳಿಂದ ಅಂಗವಿಕಲತೆಗೆ ಒಳಗಾದ  ಹಾಗೂ ಬೀಡಾಡಿ ದನಗಳ ಪುನರ್ವಸತಿಗಾಗಿ ರಾಜ್ಯ ಸರ್ಕಾರ ಗೋಶಾಲೆಗಳನ್ನು ಆರಂಭಿಸುತ್ತಿದೆ. ಗೋಶಾಲೆಗಳನ್ನು ಅಕ್ಟೋಬರ್  2 ರ ಒಳಗಾಗಿ ಆರಂಭಿಸಲು ಉದ್ದೇಶಿಸಲಾಗಿದೆ. 2019 ರ ಜಾನುವಾರು ಗಣತಿಯಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 2, 13, 815 ದನಗಳು ಹಾಗೂ 26,  397 ಎಮ್ಮೆಗಳಿವೆ. ಗೋಶಾಲೆ ನಿರ್ವಹಣಾ ವೆಚ್ಚವಾಗಿ  ಪ್ರತಿದಿನಕ್ಕೆ ಪ್ರತಿ ಜಾನುವಾರಿಗೆ 17 ರಿಂದ 30 ರೂಗಳನ್ನು ನಿಗಧಿ  ಮಾಡಿದ್ದು, ಕನಿಷ್ಟ ನೂರು ಜಾನುವಾರುಗಳನ್ನು ಹೊಂದಿರುವ ಮತ್ತು ಐದು ವರ್ಷಗಳ ಅನುಭವ ಹೊಂದಿದ ಪ್ರತಿಷ್ಠಿತ  ಟ್ರಸ್ಟ್ ಅಥವಾ ಸರ್ಕಾರ ಈ ಗೋಶಾಲೆಗಳ ನಿರ್ವಹಣೆಯನ್ನು ಮಾಡಲಿದೆ. ಗೋಸಂಪತ್ತಿನ ರಕ್ಷಣೆಯಲ್ಲಿ ಹೊಸದಾಗಿ ಆರಂಭವಾಗಲಿರುವ ಗೋಶಾಲೆಗಳು ಸಹಕಾರಿಯಾಗಲಿವೆ ಎಂದರು.

ನಂತರ ಶಿಡ್ಲಘಟ್ಟದ ಬಾಲಾಜಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶಿಡ್ಲಘಟ್ಟದಲ್ಲಿ 9-10 ಕೆರೆಗಳಿಗೆ ಎಚ್ ಎನ್ ವ್ಯಾಲಿಯಿಂದ ನೀರು ತುಂಬಿಸುವ ಯೋಜನೆ ಬಂದಿದೆ. ಪ್ರತಿ ಕೆರೆಗೆ ಈ ಭಾಗದಲ್ಲಿ ನೀರು ತುಂಬಿಸುವ ಯೋಜನೆ ಮಾಡಬೇಕಿದೆ. ಜೊತೆಗೆ ಶಿಡ್ಲಘಟ್ಟದಲ್ಲಿ ಕೈಗಾರಿಕಾ ವಲಯಗಳನ್ನು ನಿರ್ಮಿಸಲಾಗುವುದು ಎಂದರು.

ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಸಹಕಾರಿ ಸಂಘ ಮಾಡಬೇಕೆಂದು ಕೇಂದ್ರಕ್ಕೆ ಕೋರಲಾಗಿತ್ತು. ಒಂದು ತಿಂಗಳೊಳಗೆ ಪ್ರತ್ಯೇಕ ಹಾಲು  ಸಹಕಾರಿ  ಸಹಕಾರಿ  ಸಂಘದ  ರೂಪುರೇಷೆ  ಸಿದ್ದವಾಗಲಿದೆ. ಹೈನುಗಾರಿಕೆ, ಕೈಮಗ್ಗ ಮತ್ತು ಪವರ್ ಲೂಮ್, ರೇಷ್ಮೆ ಸೇರಿದಂತೆ ಸಣ್ಣ ಸಂಘಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಎಂದರು.

ಎತ್ತಿನಹೊಳೆ ಯೋಜನೆಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಅವರಿಗೂ ನೀರಾವರಿ ಬಗ್ಗೆ ಆಳ ಜ್ಞಾನವಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ನೀರು ದೊರೆಯಲಿದೆ. ಕೃಷ್ಣಾ ಮೇಲ್ದಂಡೆಯಿಂದ  156 ಟಿಎಂಸಿ ನೀರು ಪಡೆಯಬೇಕಿದೆ. ಇದಕ್ಕೆ ತಕರಾರು ನಡೆಯುತ್ತಿದ್ದು, ವಕೀಲರೊಂದಿಗೆ ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆ. ಶೀಘ್ರ ತಡೆಯಾಜ್ಞೆ ತೆರವುಗೊಳಿಸಿ ನೀರು ಕೊಡಿಸುವ ಕೆಲಸವಾಗಬೇಕು ಎಂದು ಸಿಎಂ ಸೂಚಿಸಿದ್ದಾರೆ ಎಂದರು.

ಸಚಿವರ ಕಾರ್ಯಕ್ರಮ ಇಂದು ಎಲ್ಲೆಲ್ಲಿ ಏನೇನು: ಶಿಡ್ಲಘಟ್ಟ ತಾಲೂಕಿನ ಸಾದಲಿ ನಾಡ ಕಚೇರಿಯನ್ನು ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ನಂತರ ಬಶೆಟ್ಟಿಹಳ್ಳಿ ಬಳಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ವಸತಿ ಶಾಲೆ ಕಾಮಗಾರಿಗೆ ಚಾಲನೆ.

ನಗರೋತ್ಥಾನದಡಿ 4.60 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಕಾಮಗಾರಿ, 2 ಕೋಟಿ ರೂ. ವೆಚ್ಚದ ವಿದ್ಯಾರ್ಥಿನಿಲಯ ಕಟ್ಟಡ ಉದ್ಘಾಟನೆ ಮಾಡಿದರು. ಇದೇ ವೇಳೆ ಗುಡಿಹಳ್ಳಿಯ ಅಬ್ಲೂಡು ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ, ಸಚಿವರು ಕೆರೆಗೆ ಬಾಗಿನ ಸಮರ್ಪಿಸಿದರು.

99 ಲಕ್ಷ ರೂಗಳ ವೆಚ್ಚದಲ್ಲಿ ಶ್ರೀ ದೇವರಾಜ ಅರಸು ಭವನ  ನಿರ್ಮಾಣಕ್ಕೆ ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯಲ್ಲಿ  ಭೂಮಿ ಪೂಜೆ ಮಾಡಲಾಯಿತು.

ಶಿಡ್ಲಘಟ್ಟದ ನಗರ ಆರೋಗ್ಯ ಕೇಂದ್ರದಲ್ಲಿ 50 ಲಕ್ಷ  ರೂ. ವೆಚ್ಚದಲ್ಲಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.

15ಕೋಟಿ ವೆಚ್ಚದಲ್ಲಿ ಜಂಗಮಕೋಟೆ ಹೋಬಳಿಯ ಸುಂಡ್ರಹಳ್ಳಿಯ ಇಂದಿರಾ ವಸತಿ ಶಾಲೆಯ  ನೂತನ  ಕಟ್ಟಡ  ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತಹಸೀಲ್ದಾರ್ ರಾಜೀವ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ ಆಯ್ಕೆ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ

ನಗರಸಭೆ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯಲ್ಲಿ ವಿ.ಎಸ್.ರವಿಕುಮಾರ್ Doddaballapura

[ccc_my_favorite_select_button post_id="99525"]
Doddaballapura; ಕೃಷ್ಣ ಬೈರೇಗೌಡ ಆರ್ಭಟಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿ.. ಮಹಿಳಾ ಸಿಬ್ಬಂದಿ ಕಣ್ಣೀರು Video ನೋಡಿ

Doddaballapura; ಕೃಷ್ಣ ಬೈರೇಗೌಡ ಆರ್ಭಟಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿ.. ಮಹಿಳಾ ಸಿಬ್ಬಂದಿ ಕಣ್ಣೀರು Video

ಬಾಯಿಗೆ ಬಂದಂತೆ ಉತ್ತರ ಕೊಡುವುದನ್ನು ಬಿಟ್ಟು ಕನಿಷ್ಠ ನನ್ನ ಮಾತಿಗೆ ಮರ್ಯಾದೆ ನೀಡಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶಿಲ್ದಾರ್ ವಿರುದ್ಧ ಹರಿಹಾಯ್ದರು. Doddaballapura

[ccc_my_favorite_select_button post_id="99562"]
Ayyappaswamy garland: ಸಿಲಿಂಡರ್ ಸ್ಪೋಟ ಪ್ರಕರಣ: ದುರ್ಘಟನೆಯಿಂದ ಬೇಸತ್ತು ಅಯ್ಯಪ್ಪ ಮಾಲೆ ತೆಗೆದ ಸ್ವಾಮಿ.. ಕಣ್ಣೀರು

Ayyappaswamy garland: ಸಿಲಿಂಡರ್ ಸ್ಪೋಟ ಪ್ರಕರಣ: ದುರ್ಘಟನೆಯಿಂದ ಬೇಸತ್ತು ಅಯ್ಯಪ್ಪ ಮಾಲೆ ತೆಗೆದ

ಉಳಿದ 7 ಜನರ ಜೀವ ಉಳಿದರೆ ಮಾತ್ರ ಮುಂದೆ ಅಯ್ಯಪ್ಪ ಮಾಲೆ ಧರಿಸುತ್ತೇನೆ ಎಂದು ಮಂಜುನಾಥ್ ಕಣ್ಣೀರು ಹಾಕಿದ್ದಾರೆ. Ayyappaswamy garland

[ccc_my_favorite_select_button post_id="99555"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
Suicide: ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ..!

Suicide: ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ..!

ತಮ್ಮ ಸೆಕ್ಟರ್ 47ರಲ್ಲಿರುವ ಅಪಾರ್ಟ್‌ ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಮತ್ತು ಅವರೊಂದಿಗೆ ವಾಸಿಸುತ್ತಿದ್ದ ಸ್ನೇಹಿತರೊಬ್ಬರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. Suicide

[ccc_my_favorite_select_button post_id="99567"]
Accident| Doddaballapura: ಕಾರು ಡಿಕ್ಕಿ.. ದೇವರ ಪೂಜೆಗೆ ಹೂ ಬಿಡಿಸುತ್ತಿದ್ದ ಮಹಿಳೆ ದುರ್ಮರಣ

Accident| Doddaballapura: ಕಾರು ಡಿಕ್ಕಿ.. ದೇವರ ಪೂಜೆಗೆ ಹೂ ಬಿಡಿಸುತ್ತಿದ್ದ ಮಹಿಳೆ ದುರ್ಮರಣ

ಗೌರಿಬಿದನೂರು ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆ ಬದಿ ಅಳವಡಿಸಿದ್ದ ತಂತಿ ಬೇಲಿ ನುಗ್ಗಿ ಬಂದ ಡಿಕ್ಕಿ ಹೊಡೆದ Accident

[ccc_my_favorite_select_button post_id="99558"]

ಆರೋಗ್ಯ

ಸಿನಿಮಾ

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ ತೆಲುಗು ಚಿತ್ರರಂಗ..!

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ

ಸಭೆ ಯಶಸ್ವಿಯಾಗಿಲ್ಲ ಎನ್ನಲಾಗುತ್ತಿದೆ. ಬೆನಿಫಿಟ್ ಶೋಗಳಿಗೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ Pushpa 2

[ccc_my_favorite_select_button post_id="99541"]
error: Content is protected !!