ದೊಡ್ಡಬಳ್ಳಾಪುರ: ಅಫ್ಘಾನಿಸ್ತಾನವು ತಾಲಿಬಾನ್ ವಶಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಹಾಗೂ ಅಲ್ಲಿನ ಬೆಳವಣಿಗೆ ಇತರ ದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ರ್ಯಾಪಿಡ್ ಆಕ್ಷನ್ ಪೋರ್ಸ್ (ಆರ್.ಎ.ಎಫ್) ಪಥ ಸಂಚಲ ನಡೆಸುತ್ತಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಪಥ ಸಂಚಲನ ನಡೆಸಲಾಗುತ್ತಿದೆ.
ಜಿಲ್ಲೆಯ ಇತರ ತಾಲೂಕುಗಳ ನಂತರ ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದ ಸಿಬ್ಬಂದಿ, ಪ್ರಸ್ತುತ ದೊಡ್ಡಬೆಳವಂಗಲ ವ್ಯಾಪ್ತಿಯ ಪಥ ಸಂಚಲನ ನಡೆಸುತ್ತಿದ್ದಾರೆ.
ಯಾವುದೇ ಅಹಿತಕರ ಘಟನೆ ಸಂಭವಿಸಿದಾಗ, ಬಂದೂಬಸ್ತಿಗೆ ತೆರಳುವ ರ್ಯಾಪಿಡ್ ಆಕ್ಷನ್ ಪೋರ್ಸ್ (ಆರ್.ಎ.ಎಫ್) ತಂಡಕ್ಕೆ ಆ ಪ್ರದೇಶದ ಮಾಹಿತಿ ತಿಳಿಯಲು ಕಷ್ಟವಾಗುವುದರಿಂದ, ಮುಂಜಾಗ್ರತೆಯಾಗಿ ಈ ಪಥ ಸಂಚಲನ ನಡೆಸಿ ಆ ಪ್ರದೇಶದ ಮಾಹಿತಿ ಸಂಗ್ರಹಿಸಲು ಈ ಪಥ ಸಂಚಲನ ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಸುಮಾರು 48 ಸಿಬ್ಬಂದಿಗಳ ತಂಡವು ಅಸಿಸ್ಟೆಂಟ್ ಕಾಮಾಂಡೆಂಡ್ ಮನೋಜ್ ನೇತೃತ್ವದಲ್ಲಿ ಪಥಸಂಚಲನ ನಡೆಸಿದ್ದು, ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸತೀಶ್, ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಗೋವಿಂದ್ ಅವರು ಈ ತಂಡಕ್ಕೆ ಸಾಥ್ ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..