ದೊಡ್ಡಬಳ್ಳಾಪುರ: ಕುರಿ ಕದಿಯಲು ತೆರಳಿದ್ದ ವೇಳೆ ಗೋಡೆ ಕುಸಿತ ಉಂಟಾಗಿ, ಕಳ್ಳನೋರ್ವ ಗಂಭಿರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗುಂಡಮಗೆರೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಗುಂಡಮಗೆರೆ ಗ್ರಾಮದ ಸತ್ಯಪ್ಪ ಎನ್ನುವವರ ಕುರಿ ದೊಡ್ಡಿಯಲ್ಲಿ ಕಳ್ಳತನ ನಡೆಸಲು ಅದೇ ಗ್ರಾಮದ ಗಂಗರಾಜು (23 ವರ್ಷ), ನರಸಿಂಹಮೂರ್ತಿ (23 ವರ್ಷ) ಹಾಗೂ ಲೋಕೇಶ್ (33 ವರ್ಷ) ಎನ್ನುವವರು ಗುರುವಾರ ರಾತ್ರಿ ಯತ್ನಿಸಿದ್ದಾರೆ.
ಕುರಿ ದೊಟ್ಟಿಯಿಂದ ಮೇಕೆಯನ್ನು ಹೊತ್ತು ತರುವಾಗ ಗೋಡೆ ಕುಸಿದಿದ್ದು, ಗಂಗರಾಜು ಎನ್ನುವವರ ಕಾಲಿಗೆ ಪೆಟ್ಟಾಗಿದೆ. ಇದನ್ನು ಕಂಡ ನರಸಿಂಹಮೂರ್ತಿ ಸ್ಥಳದಿಂದ ಪರಾರಿಯಾಗಿದ್ದು, ಗೋಡೆ ಕುಸಿದ ಶಬ್ದಕ್ಕೆ ಮನೆಯವರು ಹೊರಬಂದು ನೋಡಿದಾಗ ವಿಷಯ ಬಯಲಾಗಿದೆ.
ಕೂಡಲೇ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಪರಾರಿಯಾಗಿದ್ದ ನರಸಿಂಹಮೂರ್ತಿಯನ್ನು ಪೊಲೀಸರು ಹಿಡಿದಿದ್ದಾರೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಗೊಂಡ ಗಂಗರಾಜುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ಹರಿತಲೇಖನಿಗೆ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..