![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಸುಮಾರು ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳು ಸೋಮವಾರದಿಂದ ಗರಿಗೆದೆರಿದೆ.
ಇಂದಿನಿಂದ 9,10 ಮತ್ತು ಪದವಿ ಪೂರ್ವ ತರಗತಿಗಳು ಶುರುವಾಗಿದ್ದು, ಇದರ ಜತೆಗೆ ಕೇಂದ್ರ ಸರ್ಕಾರ ಪ್ರಕಟಿಸಿದ ಹೊಸ ಶಿಕ್ಷಣ ನೀತಿಯೂ ರಾಜ್ಯದಲ್ಲಿ ಜಾರಿಯಾಗಲಿದೆ.
ನಗರದ ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಬಂದಿದ್ದು, ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು.
ಆರ್.ಎಲ್.ಜಾಲಪ್ಪ ಸಮೂಹ ಸಂಸ್ಥೆಗಳ ನಿರ್ದೇಶಕ ಜೆ.ರಾಜೇಂದ್ರ ಅವರು ತರಗತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಂದಾಗಿ ಶೈಕ್ಷಣಿಕ ಜೀವನಕ್ಕೆ ತೊಡಕಾಗಿದೆ. ಕರೊನಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಈ ನಿಟ್ಟಿಲ್ಲಿನಲ್ಲಿ ಸರ್ಕಾರದ ಸೂಚನೆಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಸಹ ಮುಂಜಾಗ್ರತೆವಹಿಸಬೇಕಿದೆ. ಗುಂಪಾಗಿ ಸೇರದೆ ಸಾಮಾಜಿಕ ಅಂತರ ಕಾಪಾಡುವುದು, ಪಠ್ಯ ವಸ್ತುಗಳ ಅದಲು – ಮಾಡಿಕೊಳ್ಳದೆ ಇರುವುದು, ಬಿಸಿ ನೀರು ಕುಡಿಯುವುದು ಹಾಗೂ ಅನಾರೋಗ್ಯ ಕಂಡು ಬಂದರೆ ಶಾಲೆಗೆ ಬರದೆ ಮನೆಯಲ್ಲಿಯೇ ಉಳಿದು ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದರು.
ಈ ವೇಳೆ ಶಾಲೆ ಪ್ರಾಂಶುಪಾಲರಾದ ದೇವಿಕರಾಣಿ, ಉಪಪ್ರಾಂಶುಪಾಲರಾದ ಧನಂಜಯ್ ಹಾಗೂ ಶಿಕ್ಷಕರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..