ದೊಡ್ಡಬಳ್ಳಾಪುರ: ಸೆ.3 ರಂದು ನಡೆಯಲಿರುವ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ 6ನೇ ದಿನವಾದ ಶನಿವಾರ 31 ವಾರ್ಡ್ ಗಳಿಂದ ಒಟ್ಟು 13 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರ ಸಲ್ಲಿಕೆ ಆರಂಭವಾದಾಗಿನಿಂದ ಒಟ್ಟು 29 ನಾಮಪತ್ರಗಳು ಸಲ್ಲಿಕೆಯಾಗಿವೆ.
ಶನಿವಾರದಂದು, ವಾರ್ಡ್ ನಂ. 1ರಲ್ಲಿ 1 ನಾಮಪತ್ರ, ವಾರ್ಡ್ ನಂ. 2ರಲ್ಲಿ 2 ನಾಮಪತ್ರಗಳು, ವಾರ್ಡ್ ನಂ. 3ರಲ್ಲಿ 1 ನಾಮಪತ್ರ, ವಾರ್ಡ್ ನಂ. 5ರಲ್ಲಿ 1 ನಾಮಪತ್ರ, ವಾರ್ಡ್ ನಂ. 6ರಲ್ಲಿ 1 ನಾಮಪತ್ರ, ವಾರ್ಡ್ ನಂ. 10ರಲ್ಲಿ 2 ನಾಮಪತ್ರಗಳು, ವಾರ್ಡ್ ನಂ. 13ರಲ್ಲಿ 2 ನಾಮಪತ್ರಗಳು, ವಾರ್ಡ್ ನಂ. 15ರಲ್ಲಿ 1 ನಾಮಪತ್ರ, ವಾರ್ಡ್ ನಂ. 18ರಲ್ಲಿ 1 ನಾಮಪತ್ರ, ವಾರ್ಡ್ ನಂ. 23ರಲ್ಲಿ 1 ನಾಮಪತ್ರ ಸಲ್ಲಿಕೆಯಾಗಿವೆ.
ಶನಿವಾರ ಸ್ವೀಕೃತವಾಗಿರುವ 13 ನಾಮಪತ್ರಗಳಲ್ಲಿ ಕಾಂಗ್ರೆಸ್-5, ಬಿಜೆಪಿ -3,ಜೆಡಿಎಸ್-1, ಹಾಗೂ ಪಕ್ಷೇತರರು 4 ಮಂದಿ ಸಲ್ಲಿಸಿದ್ದಾರೆ.
ಇದುವರೆಗೆ ಸ್ವೀಕೃತವಾಗಿರುವ 29 ನಾಮಪತ್ರಗಳಲ್ಲಿ ಕಾಂಗ್ರೆಸ್-8, ಬಿಜೆಪಿ -5,ಜೆಡಿಎಸ್-5,ಕನ್ನಡ ಪಕ್ಷ-2,ಹಾಗೂ ಪಕ್ಷೇತರರು 9 ಮಂದಿ ಸಲ್ಲಿಸಿದ್ದಾರೆ.
ಇನ್ನೂ 15 ವಾರ್ಡ್‍ಗಳಲ್ಲಿ ನಾಮಪತ್ರಗಳನ್ನು ಯಾವುದೇ ಅಭ್ಯರ್ಥಿ ಸಲ್ಲಿಸಿಲ್ಲ.
ಭಾನುವಾರ ರಜಾ ದಿನವಾಗಿದೆ. ವಿವಿಧ ರಾಜಕೀಯ ಪಕ್ಷಗಳಲ್ಲಿ ಈಗ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ನಾಮಪತ್ರ ಸಲ್ಲಿಸಲು ಆ.23 ಸೋಮವಾರ ಕೊನೆಯ ದಿನವಾಗಿದ್ದು, ಉಳಿದೆಲ್ಲಾ ಅಭ್ಯರ್ಥಿಗಳು ಅಂದು ನಾಮಪತ್ರ ಸಲ್ಲಿಸಲಿದ್ದು, ಈ ಹಿನ್ನಲೆಯಲ್ಲಿ ನಾಮಪತ್ರ ಸ್ವೀಕಾರಕ್ಕೆ ಚುನಾವಣಾಧಿಕಾರಿಗಳಿಗೆ ತೀವ್ರ ಒತ್ತಡವಾಗಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..