ದೊಡ್ಡಬಳ್ಳಾಪುರ: ಸೆ.3 ರಂದು ನಡೆಯಲಿರುವ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ 4ನೇ ದಿನವಾದ ಗುರುವಾರ 31 ವಾರ್ಡ್ ಗಳಿಂದ ಒಟ್ಟು 16 ನಾಮಪತ್ರಗಳು ಸಲ್ಲಿಕೆಯಾಗಿದೆ.ಆ ಮೂಲಕ ಮೂರು ದಿನಗಳಿಂದಲೂ ಸಲ್ಲಿಕೆಯಾಗದಿದ್ದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆತಂತಾಗಿದೆ.
ವಾರ್ಡ್ ನಂ.2ರಲ್ಲಿ 2 ನಾಮಪತ್ರಗಳು, ವಾರ್ಡ್ ನಂ.7ರಲ್ಲಿ 2 ನಾಮಪತ್ರಗಳು, ವಾರ್ಡ್ ನಂ.9ರಲ್ಲಿ 2 ನಾಮಪತ್ರಗಳು, ವಾರ್ಡ್ ನಂ.12ರಲ್ಲಿ 2 ನಾಮಪತ್ರಗಳು, ವಾರ್ಡ್ ನಂ.13ರಲ್ಲಿ 1 ನಾಮಪತ್ರ, ವಾರ್ಡ್ ನಂ.18ರಲ್ಲಿ 2 ನಾಮಪತ್ರಗಳು, ವಾರ್ಡ್ ನಂ.20ರಲ್ಲಿ 1 ನಾಮಪತ್ರ, ವಾರ್ಡ್ ನಂ.23ರಲ್ಲಿ 1 ನಾಮಪತ್ರ, ವಾರ್ಡ್ ನಂ.26ರಲ್ಲಿ 2 ನಾಮಪತ್ರಗಳು, ವಾರ್ಡ್ ನಂ.30ರಲ್ಲಿ 1 ನಾಮಪತ್ರ ಸಲ್ಲಿಕೆಯಾಗಿದ್ದು, ಉಳಿದ ವಾರ್ಡ್‍ಗಳಲ್ಲಿ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.
ಸ್ವೀಕೃತವಾಗಿರುವ 16 ನಾಮಪತ್ರಗಳಲ್ಲಿ ಕಾಂಗ್ರೆಸ್-3, ಬಿಜೆಪಿ -2, ಜೆಡಿಎಸ್-4, ಕನ್ನಡ ಪಕ್ಷ-2 ಹಾಗೂ ಪಕ್ಷೇತರರು 5 ಮಂದಿ ಸಲ್ಲಿಸಿದ್ದಾರೆ.
ಇನ್ನೂ 21 ವಾರ್ಡ್ ಗಳಲ್ಲಿ ನಾಮಪತ್ರಗಳನ್ನು ಯಾವುದೇ ಅಭ್ಯರ್ಥಿ ಸಲ್ಲಿಸಿಲ್ಲ. ಶುಕ್ರವಾರ ರಜಾ ದಿನವಾಗಿದೆ.
ವಿವಿಧ ರಾಜಕೀಯ ಪಕ್ಷಗಳಲ್ಲಿ ಈಗ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಶನಿವಾರದಿಂದ ನಾಮಪತ್ರಗಳ ಸಲ್ಲಿಕೆ ಬಿರುಸುಗೊಳ್ಳಲಿದೆ.
ನಾಮಪತ್ರ ಸಲ್ಲಿಸಲು ಆ.23 ಕೊನೆಯ ದಿನವಾಗಿದ್ದು, ಅಂದು ಹೆಚ್ಚಿನ ಮಂದಿ ನಾಮಪತ್ರ ಸಲ್ಲಿಸಲಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..