ದೊಡ್ಡಬಳ್ಳಾಪುರ: ಚಲಿಸುತ್ತಿದ್ದ ರೈಲಿಗೆ ಪುರುಷನೋರ್ವ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ರೈಲ್ವೇ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಸಮೀಪ ಈ ದುರ್ಘಟನೆ ನಡೆದಿದ್ದು, ಸುಮಾರು 45 ಪುರುಷ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೃತರ ವಿಳಾಸ ಪತ್ತೆಯಾಗಿಲ್ಲ.
ಮೃತನು ಸುಮಾರು 5.5 ಅಡಿ ಎತ್ತರ, ಗುಂಡು ಮುಖ, ಗೋಧಿ ಮೈ ಬಣ್ಣ ಹೊಂದಿದ್ದಾರೆ.
ಮೃತಪಟ್ಟಾಗ ಕಪ್ಪು ಬಣ್ಣದ ಟಿ- ಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ.
ವಾರಸುದಾರರು ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೇ ಪೊಲೀಸರು ಮೊಬೈಲ್ ಸಂಖ್ಯೆ – 9480802143 ಸಂಪರ್ಕಿಸಲು ಕೋರಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..