ದೊಡ್ಡಬಳ್ಳಾಪುರ: ರಾಜ್ಯ ಪಠ್ಯ ಕ್ರಮದ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ನಗರದ ಶ್ರೀ ದೇವರಾಜ್ ಅರಸ್ ಅಂತರಾಷ್ಟ್ರೀಯ ವಸತಿ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ ಪಡೆದಿದೆ.
ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ಶಾಲೆಯ ಮುಖ್ಯ ಶಿಕ್ಷಕ ಜಿಯಾ ಉಲ್ಲಾಖಾನ್, ಶಾಲೆಯ ಒಟ್ಟು 50 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು,31 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ,ಉಳಿದ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಶೇಕಡಾ 100 ಫಲಿತಾಂಶ ದೊರಕಿಸಿದ್ದಾರೆ.
ವರ್ಷಿತ.ಎನ್.ಬಿ(ಶಾಲೆಗೆ ಪ್ರಥಮ ಸ್ಥಾನ) – 619 (99.4%), ವೈ಼ಷ್ಣವಿ.ಕೆ.ಆರ್ – 603 (96.4%), ತೇಜಸ್.ಪಿ – 601 (96.1%), ಅರ್ಜುಮಂದ್ ಬೇಗಂ – 598(95.6%), ತೇಜಸ್ವಿನಿ.ಎಲ್.ಎನ್ – 595(95.2%), ರುದ್ರೇಶ್.ಬಿ.ಎಸ್ 593(94.8%), ಬೃಂದಾ.ಎಚ್.ಎನ್ 592(94.7%), ಸ್ವಾತಿ.ಜಿ 588(94.0%), ನೇಹ.ಹೆಚ್.ಎಂ 586(93.7%), ಮುಸ್ಕಾನ್.ಎಫ್ 584(93.4%), ನಿಸರ್ಗ.ಟಿ.ಜಿ 582(93.1%), ಶಿವಾನಿ.ಜಿ.ಎಸ್ 581(92.9%), ಶ್ವೇತ.ಎನ್ 581(92.9%), ಮುಕೇಶ್.ಟಿ.ಯು 576(92.11%), ಮೊಹಮ್ಮದ್ ಅಖಿಬ್ 574(91.8%), ಶ್ರೀದೇವಿ.ಎ 571(91.3%), ನೂರೈನ್ ಅಫಿಫಾ 566(90.5%), ಶಶಾಂಕ್.ಎ.ಎಸ್ 565(90.4%)ಅಂಕಗಳಿಸಿದ್ದಾರೆ.
ಶಾಲೆಗೆ ಉತ್ತಮ ಫಲಿತಾಂಶ ದೊರಕಿಸಿದ ವಿದ್ಯಾರ್ಥಿಗಳಿಗೆ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಶ್ರೀ ಆರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಹೆಚ್.ನಾಗರಾಜ, ನಿರ್ದೇಶಕ ಜೆ.ರಾಜೇಂದ್ರ, ಮುಖ್ಯಶಿಕ್ಷಕ ಜಿಯಾ ಉಲ್ಲಾ ಖಾನ್ ರವರು ಅಭಿನಂದನೆ ಸಲ್ಲಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..