Site icon ಹರಿತಲೇಖನಿ

ಗುರುಪೌರ್ಣಿಮ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು

Channel Gowda
Hukukudi trust

ದೊಡ್ಡಬಳ್ಳಾಪುರ: ತಾಲೂಕಿನ ವಿವಿದೆಡೆ ಗುರು ಪೌರ್ಣಿಮ ಆಚರಣೆ ಶ್ರದ್ಧಾಭಕ್ತಿಗಳಿಂದ ನಡೆಯಿತು.ಮಹರ್ಷಿ ವೇದವ್ಯಾಸರ ಸ್ಮರಣೆ ಅಂಗವಾಗಿ ನಡೆಯುವ ಈ ದಿನದಂದು ಗುರುಸ್ಮರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Aravind, BLN Swamy, Lingapura

ನಗರದ ರಂಗಪ್ಪ ಸರ್ಕಲ್ ಬಳಿಯಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೌರ್ಣಿಮಾ ಅಂಗವಾಗಿ ವಿಶೇಷ ಅಲಂಕಾರ ಮತ್ತು  ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ನೂರಾರು ಭಕ್ತಾದಿಗಳು ಬೆಳಗಿನಿಂದಲೆ ಸಾಲುಗಟ್ಟಿ ನಿಂತು ಸಾಯಿಬಾಬಾ ದರ್ಶನ ಪಡೆದರು. ಬೆಳಗಿನ ಜಾವ ಕಾಕಡ ಆರತಿಯಿಂದ ಆರಂಭವಾಗಿ ಮೂರ್ತಿಗೆ ಸುಗಂಧ ದ್ರವ್ಯಾಭಿಷೇಕ, ದೇವಾಲಯದಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಹಾಗೂ ಧೂಪಾರತಿ ನಡೆದವು.

Aravind, BLN Swamy, Lingapura

ನಗರದ ರೇಲ್ವೆ ನಿಲ್ದಾಣದ ಸಮೀಪ ಬೆಸೆಂಟ್ ಪಾರ್ಕ್ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಗುರುಪೌರ್ಣಿಮಾ ಮಹೋತ್ಸವ ಶ್ರದ್ಧಾಭಕ್ತಿ ಸಂಭ್ರಮದಿಂದ ನಡೆಯಿತು. ಬೆಳಗಿನ ಜಾವ ಕಾಕಡ ಆರತಿಯಿಂದ ಆರಂಭವಾಗಿ ನಂತರ ನಡೆದ ಪನ್ನೀರು ಅಭಿಷೇಕದಲ್ಲಿ ಭಕ್ತಾದಿಗಳು ಪನ್ನೀರು ಅಭಿಷೇಕ ನೆರವೇರಿಸಿದರು.ಕ್ಷೀರಾಭಿಷೇಕ ವಿಶೇಷ ಪೂಜೆ ಹಾಗೂ ಭಜನೆ,ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.

ಗುರು ಪೌರ್ಣಿಮ ಪ್ರಯುಕ್ತ ನಗರದ ಶ್ರೀ ಶ್ರೀ ರವಿಶಂಕರ್ ಗುರೂಜಿ ರವರ ಆರ್ಟ್ ಆಫ್ ಲಿವಿಂಗ್  (ಜೀವನ ಕಲಾ) ಕೇಂದ್ರದಲ್ಲಿ ಗುರುಪೂಜೆ ಸತ್ಸಂಗ ದೊಂದಿಗೆ ಜೀವನ ಕಲಾ ಹಿರಿಯ ಶಿಕ್ಷಕರದ ಎಂ.ವೆಂಕಟಸ್ವಾಮಿ ಅವರಿಗೆ ಗುರುವಂದನಾ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾದ ಸುನೀಲ್ ವೆಂಕಟೇಶ್, ಅರುಣ್ ಕುಮಾರ್, ಸ್ವಯಂಸೇವಕರಾದ  ಮಂಜಣ್ಣ,ತಿಪ್ಪಾಪುರ, ವಿಜಯಕುಮಾರ್, ಎಲೆಪೇಟೆ, ಕೇಬಲ್ ವಿಶ್ವನಾಥ್, ಸುರೇಶ್ ಕಾರ್ತಿಕ್, ಶ್ರೀಲತಾ ಕೃಷ್ಣನ ಭಾಗವಹಿಸಿದ್ದರು. 

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

Exit mobile version