ದೊಡ್ಡಬಳ್ಳಾಪುರ: ಬಡವರ ಪಾಲಿನ ಊಟಿ, ಪ್ರೇಮಿಗಳ ಪಾಲಿನ ಪ್ರೇಮಧಾಮ-ಸ್ವರ್ಗಧಾಮ ನಂದಿಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ ಮಾಡಲು ಸಾಧಕ ಭಾದಕಗಳ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ತಿಳಿಸಿದರು.
ವಿಶ್ವವಿಖ್ಯಾತ ನಂದಿಗಿರಿಧಾಮದ ಗಾಂಧಿ ನಿಲಯದಲ್ಲಿ ಕಳೆದ ರಾತ್ರಿ ವಾಸ್ತವ್ಯ ಹೂಡಿದ್ದ ಸಚಿವರು, ಇಂದು ನಂದಿಗಿರಿಧಾಮ ತಪ್ಪಲಿನ ಪೊಲೀಸ್ ಚೆಕ್ ಪೋಸ್ಟ್ ಬಳಿ ರೋಪ್ ವೇ ನಿರ್ಮಾಣಕ್ಕೆ ಉದ್ದೇಶಿಸಿ ಮೀಸಲಿರಿಸಿರುವ ಜಮೀನು ಪರೀಶೀಲನೆ ನಡೆಸಿದರು. ಆದ್ರೆ ಈ ಜಮೀನಿನಲ್ಲಿ ಹಲವು ವರ್ಷಗಳಿಂದ ನಾವು ಉಳುಮೆ ಮಾಡಿಕೊಂಡು ಬರುತ್ತಿದ್ದು ಈ ಜಮೀನು ತಮಗೆ ಸೇರಬೇಕು ಅಂತ ಕೆಲ ರೈತರು ಸಚಿವರಿಗೆ ಮನವಿ ಮಾಡಿಕೊಂಡರು.
ಈ ವೇಳೆ ರೈತರ ಜೊತೆ ಸಮಾಧಾನದಿಂದ ಸಚಿವರು ಚರ್ಚೆ ನಡೆಸಿ ಸಭೆ ನಡೆಸಿ ಜಮೀನು ವಿವಾದ ಬಗೆಹರಿಸೋಣ ಅಂತ ರೈತರ ಮನವೊಲಿಸಿದರು.
ಇನ್ನೂ ಇದೇ ಜಾಗದಲ್ಲಿ ಪಾರ್ಕಿಂಗ್ ಗೂ ಸಹ ಜಾಗ ಮೀಸಲಿಡಲಾಗಿದೆ. ಅಂದ ಹಾಗೆ ರೋಪ್ ವೇ ನಿರ್ಮಾಣ ಮಾಡುವಲ್ಲಿ ಪ್ರಖ್ಯಾತಿ ಪಡೆದಿರುವ ಖಾಸಗಿ ಸಂಸ್ಥೆಯೊಂದು ಈಗಾಗಲೇ ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಸಂಬಂಧ ಸಾಧಕ ಬಾಧಕಗಳ ಬಗ್ಗೆ ಪರೀಕ್ಷೆ ನಡೆಸುತ್ತಿದೆ. ಸಾಧಕ ಬಾಧಕಗಳ ಅಂತಿಮವಾದ ನಂತರ ಟೆಂಡರ್ ಕರೆದು 2 ವರ್ಷಗಳ ಒಳಗೆ ರೋಪ್ ವೇ ಕಾರ್ಯ ಮಾಡುವುದಾಗಿ ಸಚಿವ ಸಿ ಪಿ ಯೋಗೇಶ್ವರ್ ಹೇಳೀದರು.
ಇದೇ ವೇಳೆ ನಂದಿಬೆಟ್ಡ ದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ನೀರಿನ ಸಮಸ್ಯೆಗೆ ಪರಿಹಾರ, ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ನೆಹರು ನಿಲಯದ ಸಭಾಂಗಣದಲ್ಲಿ ಚರ್ಚೆ ನಡೆಸಿದರು.
ಇದಾದ ನಂತರ ನಂದಿಗಿರಿಧಾಮ ದ ಮಯೂರ ಹೋಟೆಲ್ ಸರ್ಕಲ್ ಬಳಿ ಇಂದು ಮತ್ತೊಂದು ಹೋಟೆಲ್ ಆರಂಭಕ್ಕೆ ಚಾಲನೆ ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..