ನವದೆಹಲಿ: ಕರೊನಾ ಕಾರಣ ಮುಂದೂಡಲಾಗಿದ್ದ ಜವಾಹರ್ ನವೋದಯ ವಿದ್ಯಾಲಯ ಸಮಿತಿಯು 6ನೇ ತರಗತಿ ಪ್ರವೇಶ ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೇಂದ್ರ ಶಿಕ್ಷಣ ಸಚಿವಾಲಯವು, ಜವಾಹರ್ ನವೋದಯ ವಿದ್ಯಾಲಯ ಸಮಿತಿಯು 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 11, 2021 ರಂದು ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಿದೆ ಎಂದು ಹೇಳಿದೆ.
ಈ ಹಿಂದೆ ಪ್ರವೇಶ ಪರೀಕ್ಷೆಯನ್ನು ಮೇ 16, 2021 ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ನಂತರದಲ್ಲಿ ಜೂನ್ 19, 2021ಕ್ಕೆ ಪರೀಕ್ಷೆ ಮುಂದೂಡಲಾಗಿತ್ತು.
ಕೋವಿಡ್ ಎರಡನೇ ಅಲೆಯ ಕಾರಣ ಈ ಎರಡು ದಿನಾಂಕಗಳನ್ನು ಪರೀಕ್ಷೆ ನಡೆಸುವುದನ್ನು ರದ್ದುಗೊಳಿಸಲಾಗಿತ್ತು. ಪ್ರಸ್ತುತ ಆಗಸ್ಟ್ 11 ರಂದು ಪರೀಕ್ಷೆ ನಡೆಸುವ ಸಾಧ್ಯತೆ ಇದ್ದು, 15 ದಿನಗಳ ಮುಂಚೆ ನೋಟಿಸ್ ನೀಡಲಾಗುತ್ತದೆ ಎಂದು ನವೋದಯ ವಿದ್ಯಾಲಯ ಸಮಿತಿ ಹೇಳಿದೆ.
ಮಿನಿಸ್ಟ್ರಿ ಆಫ್ ಎಜುಕೇಷನ್, ಎನ್‌ವಿಎಸ್ ಪರೀಕ್ಷೆ ಕುರಿತು ವೇಳಾಪಟ್ಟಿ ಮತ್ತು ಪ್ರವೇಶ ಪತ್ರ ಬಿಡುಗಡೆ ಕುರಿತು ಅಫೀಶಿಯಲ್ ನೋಟಿಸ್ ಅನ್ನು ವೆಬ್‌ಸೈಟ್ navodaya.gov.in ನಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಮೂಲಕ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..