ದೊಡ್ಡಬಳ್ಳಾಪುರ: ನಗರದ 4ನೇ ವಾರ್ಡ್,ವಿನಾಯಕನಗರದಲ್ಲಿ ಭಾರತೀಯ ಜನತಾ ಪಾರ್ಟಿ ನಗರ ಘಟಕದ ವತಿಯಿಂದ ಹಾಗೂ ಬಿಜೆಪಿ ಮುಖಂಡ ಧೀರಜ್ ಮುನಿರಾಜ್ ಬಡಜನರಿಗಾಗಿ ಪ್ರಾರಂಭಿಸಿರುವ “ಆಟಲ್ ಜೀ ಜನತಾ ಕ್ಲಿನಿಕ್” ನ ತಜ್ಞ ವೈದ್ಯರ ತಂಡದ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ (ಗೋಪಿ), ಜಿಲ್ಲಾ ವಕ್ತಾರರಾದ ಪುಷ್ಪಾಶಿವಶಂಕರ್, ಜಿಲ್ಲಾ ಫಲಾನುಭವಿಗಳ ಪ್ರಕೋಷ್ಟದ ಸಂಚಾಲಕರು ಧೀರಜ್ ಮುನಿರಾಜ್,ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ, ಮಾಧ್ಯಮ ಪ್ರಕೋಷ್ಟದ ಸಹ ಸಂಚಾಲಕ ಬಂತಿ ವೆಂಕಟೇಶ್ ಗೌಡ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನಾಮಿನಿ ಸದಸ್ಯ ಎನ್.ಕೆ.ರಮೇಶ್ ಹಾಗೂ ನಗರ ಬಿಜೆಪಿ ಕಾರ್ಯದರ್ಶಿ ಎಂ.ತಿಮ್ಮರಾಜ್, ಹಿರಿಯ ಮುಖಂಡರಾದ ಶಿವಶೇಖರಪ್ಪ ಬೆಳಗಲ್, ಬೂತ್ ಅಧ್ಯಕ್ಷ ವಸಂತ್ ಕುಮಾರ್, ಮುರುಳಿ, ದೀಲಿಪ,ದೇವರಾಜ್, ಅರವಿಂದ ಮತ್ತಿತರಿದ್ದರು.
ಈ ವೇಳೆ ಸುಮಾರು ನೂರಕ್ಕು ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ನಡೆಸಿ, ಔಷಧಿಗಳನ್ನು ನೀಡಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..