ಬೆಂಗಳೂರು: ಆನ್‍ಲೈನ್ ಮೂಲಕ ಯುವತಿಯರಿಗೆ ತಾನು ಮೈಸೂರು ಅರಸರ ಕುಟುಂಬದ ಸಂಬಂಧಿ ಎಂದು ಪರಿಚಯಮಾಡಿಕೊಂಡು ಮದುವೆಯಾಗುತ್ತೇನೆಂದು ನಂಬಿಸಿ ಯುವತಿಯರಿಂದ ಹಣ ಪಡೆದು ಮೋಸ ಮಾಡಿ, ವಂಚಿಸಿರುವ ಆರೋಪಿಯನ್ನು ವೈಟ್ ಫೀಲ್ಡ್ ಸಿ.ಇ.ಎನ್ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ.
ಆರೋಪಿಯಾದ ಸಿದ್ಧಾರ್ಥ್.ಕೆ ಎಂಬ ವ್ಯಕ್ತಿಯು ಆನ್‍ಲೈನ್‍ನಲ್ಲಿ “Sangam Matrimony” & “Kannada Matrimony” ಎಂಬ ವೆಬ್‍ಸೈಟ್‍ಗಳನ್ನು ಉಪಯೋಗಿಸಿಕೊಂಡು ಸದರಿ ವೈಬ್‍ಸೈಟ್‍ಗಳಲ್ಲಿ ವಿವಾಹವಾಗಲು ಆಸಕ್ತಿ ತೋರುವ ಯುವತಿಯರನ್ನು ಪರಿಚಯಮಾಡಿಕೊಂಡು ತಾನು ಯು.ಎಸ್.ಎ (ಅಮೇರಿಕಾ) ದಲ್ಲಿ ಮೈಕ್ರೋಸಾಪ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿ ಒಂದು ಫ್ರೋಫೈಲ್ ಅನ್ನು ಸೃಷ್ಟಿಸಿ, ಹಾಗೂ ತಾನು ಮೈಸೂರು ಸಂಸ್ಥಾನದ ರಾಜವಂಶಸ್ಥರ ಸಂಬಂಧಿ ಅರಸು ಕುಟುಂಬದವನು ಎಂದು ಸುಳ್ಳು ಹೇಳಿ “Siddarth Urs” ಎಂಬ ಹೆಸರಿನಿಂದ ಮ್ಯಾಟ್ರೊಮೋನಿ ವೆಬ್‍ಸೈಟ್‍ನಲ್ಲಿ ಯುವತಿಯವರೊಂದಿಗೆ ಪರಿಚಯ ಮಾಡಿಕೊಂಡು ವಂಚಿಸಿದ್ದಾನೆ ಎನ್ನಲಾಗಿದೆ.
ಮೈಸೂರು ರಾಜ ವಂಶಸ್ಥರ ಕುಟುಂಬದವರ ಜೊತೆ ಬಾಲ್ಯವನ್ನು ಕಳೆದಿರುವ ಹಾಗೆ ಚಿಕ್ಕ ವಯಸ್ಸಿನ ಹುಡುಗನ ಭಾವಚಿತ್ರವನ್ನು ಯುವತಿಯರಿಗೆ ಕಳುಹಿಸಿ ಅವರೊಂದಿಗೆ Spanish ಮತ್ತು U.S. English ಭಾಷೆಯಲ್ಲಿ ಮಾತನಾಡಿ ನಂಬಿಸಿದ್ದಲ್ಲದೆ ವೈದ್ಯಕೀಯ ಕಾರಣ & ಇತರೆ ವೈಯಕ್ತಿಕ ಕಾರಣವನ್ನು ನೀಡಿ ಹಲವಾರು ಯುವತಿಯರಿಂದ ಹಂತ ಹಂತವಾಗಿ ಆನ್‍ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿ ಮೋಸ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.
ವೈಟ್‍ಫೀಲ್ಡ್ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗುರುಪ್ರಸಾದ್ ಜಿ. ನೇತೃತ್ವದಲ್ಲಿ ಹಾಗೂ ನವೀನ್‍ಕುಮಾರ್, ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ರವರು ಮತ್ತು ಸಿ.ಇ.ಎನ್ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಮೈಸೂರು ಜಿಲ್ಲೆಯ ಬೈಲುಕುಪ್ಪೆ ಪಟ್ಟಣದಿಂದ ಆರೋಪಿಯನ್ನು ವಶಕ್ಕೆ ಪಡೆದು ಈತನನ್ನು ವಿಚಾರಣೆಗಾಗಿ ವೈಟ್‍ಫೀಲ್ಡ್ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಆರೋಪಿಯಿಂದ ಎರಡು ಆಪಲ್ ಐಫೋನ್, ಒಂದು ಸ್ಯಾಮ್‌ಸಂಗ್ ಮೋಬೈಲ್ ಪೋನ್, 6 ಡೆಬಿಟ್ ಕಾರ್ಡ್, ವಶ ಪಡಿಸಿಕೊಳ್ಳಲಾಗಿದೆ.
ಈ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರಿನ ಬೇರೆ ಬೇರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..