ಮಡಿಕೇರಿ: ಕಗ್ಗೋಡ್ಲುವಿನಲ್ಲಿ ಗೋವಿಗೆ ಗುಂಡಿಕ್ಕಿ ಸಾಯಿಸಿ, ತಡೆಯಲು ಹೋದವರಿಗೆ ಕೋವಿ ತೋರಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕುಂಜಿಲ ಗ್ರಾಮದ ಮಹಮ್ಮದ್ ಜಾಬೀರ್(27ವರ್ಷ), ಅಬ್ದುಲ್ ಸಲಾಂ(45ವರ್ಷ), ಸಿಯಾಬ್ ಪಿ.ಎ. (29ವರ್ಷ), ಮಹಮ್ಮದ್ ಪಿ.ಎ (26 ವರ್ಷ), ಬಂಧಿತ ಆರೋಪಿಗಳು.
ಮನೆಯಲ್ಲಿ ಸಾಕಿದ ಗೋವುಗಳಿಗೆ ಗುಂಡಿಕ್ಕಿ ಹತ್ಯೆಮಾಡುವುದಕ್ಕೆ ಸಂಬಂಧಿಸಿಂತೆ ಜಿಲ್ಲೆಯಾದ್ಯಂತ ವ್ಯಾಪಕ ವಿರೋಧವ್ಯಕ್ತವಾಗಿತ್ತು. ಇದೇ ರೀತಿ ಪ್ರಕರಣಗಳು ಮುಂದುವರೆದಲ್ಲಿ ಬೀದಿಗಿಳಿದು ಹೋರಾಟನಡೆಸುವುದಾಗಿ ವಿವಿಧ ಸಂಘಟನೆಗಳು ಹೇಳಿಕೆ ನೀಡಿದ್ದವು. ಈ ಬೆನ್ನಲ್ಲೇ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಗ್ಗೋಡ್ಲುಗ್ರಾಮದ ದೇವಜನ ರಂಜನ್ ಎಂಬುವರ ಹಸುವನ್ನು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಜಿಲ ಗ್ರಾಮದ ಮಹಮ್ಮದ್ ರಿಯಾಜ್ ಎಂಬ ಆರೋಪಿಯನ್ನು ಪೊಲೀಸರು ಎರಡು ದಿನದ ಹಿಂದೆ ಬಂಧಿಸಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಕೋವಿ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ರವಿಕಿರಣ್, ಸಿಬ್ಬಂದಿಗಳಾದ ಸದಾಶಿವ, ದಿನೇಶ್, ಶಜನ್, ಕೃಷ್ಣಮೂರ್ತಿ, ಮಂಜು, ಚಾಲಕ ಪ್ರವೀಣ್ ಪಾಲ್ಗೊಂಡಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..