ದೊಡ್ಡಬಳ್ಳಾಪುರ: ಭೂ ಜಲ ಸಂಘರ್ಷ ಸಮಿತಿಯ ನಿರಂತರ 7 ವರ್ಷಗಳ ಹೋರಾಟದ ಫಲವಾಗಿ ಒತ್ತುವರಿಯಾಗಿದ್ದ 18 ಗುಂಟೆ ಗೋ ಕಟ್ಟೆಯನ್ನು ಅಧಿಕಾರಿಗಳು ತೆರವು ಗೊಳಿಸಲು ಮುಂದಾಗಿದ್ದು, ಸರ್ವೆ ಕಾರ್ಯ ನಡೆಸಲಾಗಿಯಿತು.
ಈ ಕುರಿತು ಭೂ ಜಲ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ.ನರಸಿಂಹ ಮೂರ್ತಿ ಮಾಹಿತಿ ನೀಡಿ, ಲಕ್ಷಾಂತರ ಮೌಲ್ಯದ 2014 ರಿಂದ ಸಮಿತಿಯ ನಿರಂತರ ಹೋರಾಟದ ಫಲವಾಗಿ ಬುಧವಾರ ಗೋ ಕಟ್ಟೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಉಪತಹಶೀಲ್ದಾರ್ ಮುನಿರಾಜು, ಕಂದಾಯ ಇಲಾಖೆಯ ನಿರೀಕ್ಷಕ ವೆಂಕಟರಾಮ್ ಸ್ವಾಮಿ ಶೆಟ್ಟಿ, ಸಾಸಲು ಗ್ರಾಮಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ್, ಸರ್ವೆಯರ್ ಮಂಜುನಾಥ್ ನೇತೃತ್ವದಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಮೌಲ್ಯದ 18 ಗುಂಟೆ ಗೋ ಕಟ್ಟೆಯನ್ನು ಒತ್ತುವರಿಯಿಂದ ತೆರವುಗೊಳಿಸಲು ಸರ್ವೆ ಕಾರ್ಯ ನಡೆಸಿದ್ದು, ಗೋ ಕಟ್ಟೆಯ ಗಡಿ ಗುರುತುಗಳನ್ನು ಗುರುತಿಸಿ, ಕಲ್ಲನ್ನು ನೆಡಲಾಗಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಭೂ ಜಲ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಆರ್.ರಂಗಸ್ವಾಮಯ್ಯ, ಉಪಾಧ್ಯಕ್ಷ ಸಿ.ಆರ್.ಲಕ್ಷ್ಮೀಪತಿ, ಕಾರ್ಯದರ್ಶಿ ಸಿ.ಎಂ. ಲಕ್ಷ್ಮೀಪತಿ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..