ಆಧಾರ್: ಆಧಾರ್ ಎಂಬುದು ಈ ದೇಶದಲ್ಲಿ ಬಹಳ ಮುಖ್ಯವಾದ ದಾಖಲೆ. ವಿಳಾಸ ಮತ್ತು ಗುರುತು ದೃಢೀಕರಣ ಆಗಿ ಇದನ್ನು ಬಳಸಬಹುದು. ಎಲ್ಪಿಜಿ ಸಬ್ಸಿಡಿ, ಸರ್ಕಾರದಿಂದ ವಿದ್ಯಾರ್ಥಿ ವೇತನಕ್ಕೆ,ಬ್ಯಾಂಕ್ ಖಾತೆ, ಇಎಫ್.ಪಿಎಫ್ ಖಾತೆ, ಆದಾಯ ತೆರಿಗೆ ಸಂದಾಯ, ಮೋಬೈಲ್ ಸಂದಾಯ ಮುಂತಾದವಕ್ಕೆ ಆಧಾರ್ ಕಡ್ಡಾಯ. ಆಧಾರ್ ಎಂಬುದು ವಿಶಿಷ್ಟವಾದ ಗುರುತಿನ ಸಂಖ್ಯೆ.
ವ್ಯಕ್ತಿ ಮೃತಪಟ್ಟ ನಂತರವೂ ಆ ಸಂಖ್ಯೆ ಮುಂದುವರಿಯಯುತ್ತದೆ. ಆಧಾರ್ ನಿರ್ವಹಣೆ ಮಾಡುವಂಥ ಯುನಿಕ್ ಐಡಿಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI) ಅನ್ನು ಸಾವಿನ ನೋಂದಣಿ ದಾಖಲೆಯೊಂದಿಗೆ ಜೋಡಣೆ ಮಾಡಿಲ್ಲದ ಕಾರಣಕ್ಕೆ ಆಧಾರನ್ನಿಂದ ಮೃತರ ಮಾಹಿತಿ ಅಪ್ಡೇಟ್ ಆಗುವುದಿಲ್ಲ. ಮರಣದ ಮಾಹಿತಿ ನೋಂದಣಿ ಅಥವಾ ಮರಣ ಪ್ರಮಾಣ ಪತ್ರಕ್ಕೆ ಆಧಾರ್ ಕಡ್ಡಾಯವೂ ಅಲ್ಲ. ಮೃತರ ಕುಟುಂಬಸ್ಥರು ಆ ಆಧಾರ್ ಕಾರ್ಡ್ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು. UIDAIನಿಂದ ಆಧಾರ್ ಕಾರ್ಡ್ ರದ್ದು ಮಾಡುವುದಕ್ಕೆ ಅಥವಾ ಚಾಲ್ತಿಯಿಂದ ಹಿಂಪಡೆಯುವುದಕ್ಕೆ ಆಯ್ಕೆ ಇಲ್ಲ. ಆದರೆ ಆ ಬಯೋಮೆಟ್ರಿಕ್ ಕ್ರೆಡೆನ್ಷಿಯಲ್ಸ್ ಅನ್ನು ಆಧಾರ್ ಆ್ಯಪ್ ಅಥವಾ UIDAI ವೆಬ್ಸೈಟ್ ಮೂಲಕ ಲಾಕ್ ಮಾಡಿಸಬಹುದು. ಆ ಮೂಲಕ ಬಯೋಮೆಟ್ರಿಕ್ ದುರ್ಬಳಕೆ ಆಗದಂತೆ ತಡೆಯಬಹುದು.
ಪ್ಯಾನ್ (PAN): ಪರ್ಮನೆಂಟ್ ಅಕೌಂಟ್ ನಂಬರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ಹಣಕಾಸು ದಾಖಲೆ. ಮೃತರ ಬ್ಯಾಂಕ್ ಅಕೌಂಟ್, ಡಿಮ್ಯಾಟ್ ಅಕೌಂಟ್, ಆದಾಯ ತೆರಿಗೆ ಸಂದಾಯಕ್ಕೆ ಕಡ್ಡಾಯವಾದ ದಾಖಲೆ. ವ್ಯಕ್ತಿಯೊಬ್ಬರು ಮೃತಪಟ್ಟ ಮೇಲೂ ಪ್ಯಾನ್ ಅಗತ್ಯ ಇರುತ್ತದೆ. ಎಲ್ಲೆಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯ ಎಂದಿರುತ್ತದೋ ಆ ಎಲ್ಲ ವಹಿವಾಟು ಮುಗಿಯುವ ತನಕ ಪ್ಯಾನ್ ಕಾರ್ಡ್ ಇಟ್ಟುಕೊಂಡಿರಬೇಕು. ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಸಂದಾಯ ಮತ್ತು ಪ್ರೊಸೆಸ್ ಆಗುವ ತನಕ ಪ್ಯಾನ್ ಕಡ್ಡಾಯವಾಗಿ ಇಟ್ಟಕೊಳ್ಳಬೇಕು.
ತೆರಿಗೆ ಇಲಾಖೆಯು ಪ್ರಸ್ತುತ ಅಸೆಸ್ಮೆಂಟ್ ವರ್ಷವೂ ಸೇರಿ ನಾಲ್ಕು ವರ್ಷದ ತನಕ ರೀ- ಅಸೆಸ್ಮೆಂಟ್ ತೆರೆಯಬಹುದು. ಬ್ಯಾಂಕ್ ಅಕೌಂಟ್ಸ್, ಡಿಮ್ಯಾಟ್ ಅಕೌಂಟ್ಸ್, ಆದಾಯ ತೆರಿಗೆ ರಿಟರ್ನ್ಸ್ ಮುಂತಾದವು ಮುಗಿದ ಮೇಲೆ ಮೃತರ ಪ್ರತಿನಿಧಿಗಳು ಅಥವಾ ಉತ್ತರಾಧಿಕಾರಿಗಳು ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸರೆಂಡರ್ ಮಾಡಬಹುದು. ಹೀಗೆ ಮಾಡುವುದಕ್ಕೆ ಅಸೆಸಿಂಗ್ ಅಧಿಕಾರಿಗೆ (ಎಒ) ಅರ್ಜಿ ಬರೆಯಬೇಕು. ಯಾರ ಕಾರ್ಯವ್ಯಾಪ್ತಿಯಲ್ಲಿ ಪ್ಯಾನ್ ನೋಂದಣಿ ಆಗಿರುತ್ತದೋ, ಸರೆಂಡ್ಗೆ ಮನವಿ ಸಲ್ಲಿಸಲಾಗಿರುತ್ತದೋ ಅವರಿಗೆ ಅರ್ಜಿ ಸಲ್ಲಿಸಬೇಕು.
ಆ ಪತ್ರದಲ್ಲಿ ಸರೆಂಡರ್ ಕಾರಣವನ್ನು ತಿಳಿಸಬೇಕು. ಹೆಸರು, ಪ್ಯಾನ್, ಮೃತರ ಸಾವಿನ ದಿನಾಂಕ, ಡೆತ್ ಸರ್ಟಿಫಿಕೇಟ್ ನಕಲು ಇವೆಲ್ಲವನ್ನೂ ಒಳಗೊಂಡಿರಬೇಕು. ಮೃತರ ಪ್ಯಾನ್ ಕಾರ್ಡ್ ಸರೆಂಡರ್ ಮಾಡಲೇಬೇಕು ಎಂಬ ಕಡ್ಡಾಯ ಏನಿಲ್ಲ. ಮುಂದೆ ಯಾವುದಾದರೂ ಉದ್ದೇಶಕ್ಕೆ ಪ್ಯಾನ್ ಬೇಕು ಎಂದಾದಲ್ಲಿ ಹಾಗೇ ಇರಿಸಿಕೊಳ್ಳಬಹುದು. ಒಂದು ವೇಳೆ ಭವಿಷ್ಯದಲ್ಲಿ ಅದರ ಅಗತ್ಯ ಇಲ್ಲ, ದುರುಪಯೋಗ ಆಗಬಹುದು ಎನಿಸಿದಲ್ಲಿ ತೆರಿಗೆ ಇಲಾಖೆಗೆ ಸರೆಂಡರ್ ಮಾಡಬಹುದು.
ಮತದಾರ ಗುರುತಿನ ಚೀಟಿ (ವೋಟರ್ ಐಡಿ ಕಾರ್ಡ್): ಆಧಾರ್, ಪ್ಯಾನ್ ಕಾರ್ಡ್ನಂತೆ ಅಲ್ಲದೆ ಕಾನೂನಿನ ಪ್ರಕಾರ, ವ್ಯಕ್ತಿಯ ಮರಣದ ನಂತರ ಮತದಾರ ಗುರುತಿನ ಚೀಟಿಯನ್ನು ರದ್ದು ಮಾಡುವುದಕ್ಕೆ ಅವಕಾಶ ಇದೆ. ಮೃತರ ಉತ್ತರಾಧಿಕಾರಿಗಳು ಅಥವಾ ಪ್ರತಿನಿಧಿಗಳು ಸ್ಥಳೀಯ ಚುನಾವಣೆ ಕಚೇರಿಗೆ ತೆರಳಬೇಕಾಗುತ್ತದೆ. ಎಲೆಕ್ಟೋರಲ್ ಕಾನೂನು ಅಡಿಯಲ್ಲಿ ಫಾರ್ಮ್ ನಂಬರ್ 7ರ ಜತೆಗೆ ಡೆತ್ ಸರ್ಟಿಫಿಕೇಟ್ ಸಲ್ಲಿಸಬೇಕು.
ಡ್ರೈವಿಂಗ್ ಲೈಸೆನ್ಸ್: ಮೃತರ ಡ್ರೈವಿಂಗ್ ಲೈಸೆನ್ಸ್ ರದ್ದು ಅಥವಾ ಸರೆಂಡರ್ಗೆ ಯಾವುದೇ ಅವಕಾಶ ಇಲ್ಲ. ಒಂದೊಂದು ರಾಜ್ಯ ಒಂದೊಂದು ರೀತಿಯಲ್ಲಿ ವಿತರಣೆ, ಅಮಾನತು ಹಾಗೂ ರದ್ದನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತವೆ. ಆದ್ದರಿಂದ ಆಯಾ ನಿರ್ದಿಷ್ಟ ರಾಜ್ಯದಲ್ಲಿನ ನಿಯಮಾವಳಿಗಳನ್ನು ವಿಚಾರಿಸಬೇಕು. ಆರ್ಟಿಒಗೆ ಭೇಟಿ ನೀಡಿ, ರದ್ದಿನ ಬಗ್ಗೆ ವಿಚಾರಿಸಬೇಕು. ಇಲ್ಲಿ ತಿಳಿಸಬೇಕಾದ ಅಂಶ ಏನೆಂದರೆ, ಎಲ್ಲ ದಾಖಲಾತಿಗಳನ್ನು ಸುರಕ್ಷಿತವಾಗಿ ಇಡಬೇಕು. ದುಷ್ಕರ್ಮಿಗಳ ಕೈಗೆ ಸಿಕ್ಕಲ್ಲಿ ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ. @ಟಿ.ಕೆ.ಹನುಮಂತರಾಜು, 9740768291
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..