ದೊಡ್ಡಬಳ್ಳಾಪುರ: ಕೋವಿಡ್ ನಿಯಮ ಪಾಲಿಸದೇ ಕಾರ್ಮಿಕರನ್ನು ಬೇಕಾಬಿಟ್ಟಿಯಾಗಿ ಲಾರಿಯಲ್ಲಿ ತುಂಬಿಕೊಂಡು ಕರೆದೊಯ್ಯುತ್ತಿರುವ ಗುತ್ತಿಗೆದಾರನ ಬೇಜವಬ್ದಾರಿ ನಡೆ ಸಾರ್ವಜನಿಕ ವಲಯದಲ್ಲಿ ಆಕ್ಕೋಶಕ್ಕೆ ಕಾರಣವಾಗಿದೆ.
ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ ದಾಬಸ್ ಪೇಟೆ – ಹೊಸಕೋಟೆ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಈ ಕಾಮಗಾರಿಯಲ್ಲಿ ಪಾಲ್ಗೊಳ್ಳುವ ಕಾರ್ಮಿಕರನ್ನು, ಕೋವಿಡ್ ನಿಯಮ ಉಲ್ಲಂಘಿಸಿ ಹಾಗೂ ಕಾರ್ಮಿಕ ಹಕ್ಕುಗಳನ್ನು ಗಾಳಿಗೆ ತೂರಿ ಅಪಾಯಕಾರಿಯಾದ ರೀತಿಯಲ್ಲಿ ಲಾರಿಯಲ್ಲಿ ತುಂಬಿಕೊಂಡು ಕರೆದೊಯ್ಯುತ್ತಿದ್ದು, ಕರೊನಾ ಸೋಂಕು ವ್ಯಾಪಿಸುವ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಬೇಸರ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿ ಅಂತಾರಾಷ್ಟ್ರೀಯ ಛಾಯಾಗ್ರಾಹಕ ರಾಜು, ಅನ್ಯ ರಾಜ್ಯಗಳಿಂದ ಈಗಾಗಲೇ ರಾಜ್ಯದಲ್ಲಿ ಸೋಂಕು ವ್ಯಾಪಿಸಿ ಬಹಳಷ್ಟು ಸಾವು ನೋವು ಸಂಭವಿಸಿದೆ. ಅಲ್ಲದೆ ಲಾಕ್‍ಡೌನ್ ಕಾರಣ ವ್ಯಾಪಾರ ವಹಿವಾಟು ಇಲ್ಲದೆ ಜನರ ಜೀವನ ನಡೆಸುವುದು ಕಷ್ಟಕರ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸಂಕಷ್ಟದ ಸಮಯದಲ್ಲಿ ಕಾಮಗಾರಿಗೆ ಅನುಮತಿ ಎನ್ನುವ ಕಾರಣ, ಬೇಕಾಬಿಟ್ಟಿಯಾಗಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದು, ಕೋವಿಡ್ ನಿಯಮ ಗಾಳಿಗೆ ತೂರಲಾಗುತ್ತಿದೆ. ಇಂತಹ ಬೇಜವಬ್ದಾರಿ ವರ್ತನೆ ತೋರಿದ ಗುತ್ತಿಗೆದಾರನ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕೆಂದು ರಾಜು ಒತ್ತಾಯಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….