ದೊಡ್ಡಬಳ್ಳಾಪುರ: ಈ ಹಿಂದೆ ಬಾಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿ ಕೆರೆ ಸಂರಕ್ಷಣೆ ಕಾರ್ಯಗಳಲ್ಲಿ ತೊಡಗಿದ್ದ ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಂಸ್ಥೆ, ಸದ್ಯದ ಕೋವಿಡ್-19 ಎರಡನೇ ಅಲೆ ಪರಿಸ್ಥಿತಿ ನಿಭಾಯಿಸಲು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಒಂದು ಆಕ್ಸಿಜನ್ ಕಾನ್ಸನ್ಟ್ರೇಟರ್, ಹದಿನೇಳು ಆಕ್ಸಿಮೀಟರ್ ಹಾಗು ಹದಿನೇಳು ಡುಯಲ್ ಮೋಡ್ ಥರ್ಮಾಮೀಟರ್ ಗಳನ್ನು ನೀಡಿದೆ.
ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾದ ಹಿರಿಯ ಯೋಜನಾಧಿಕಾರಿ ಲೋಹಿತ್.ವೈ.ಟಿ ಮಾತನಾಡಿ, ಕೋವಿಡ್ ಸೋಂಕು ಮಾನವ ಸಂಕುಲಕ್ಕೆ ಶಾಪವಾಗಿ ಪರಿಣಮಿಸಿದ್ದು, ಸಾರ್ವಜನಿಕರು ಸೋಂಕು ಕಡಿಮೆಯಾಗಿದೆ ಎಂದು ಮೈಮರಿಯದೆ ನಿಯಮಗಳನ್ನು ಪಾಲಿಸಬೇಕಿದೆ.
ಸೋಂಕಿನ ನಿಗ್ರಹಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ಶ್ರಮಿಸುತ್ತಿದ್ದು, ಅದರ ಜೊತೆಯಲ್ಲಿ ನಮ್ಮ ಸಂಸ್ಥೆ ಕೂಡ ಕೈ ಜೋಡಿಸಿದೆ ಎಂದರು.
ಪರಿಕರಗಳನ್ನು ಪಡೆದ ಬಾಶೆಟ್ಟಿಹಳ್ಳಿ ಪಪಂ ಮುಖ್ಯಾಧಿಕಾರಿ ಮುನಿರಾಜು ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ಆಶಾ ಕಾರ್ಯಕರ್ತೆಯರ ಮೂಲಕ ಈ ವೈದ್ಯಕೀಯ ಪರಿಕರಗಳ ಸೇವೆಯನ್ನು ಜನರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಮಾಜಿ ಸದಸ್ಯರಾದ ಮುನಿರಾಜು, ಎಳ್ಳುಪುರದ ಮುನಿಶಂಕರ್, ನವೋದಯ ಚಾರಿಟಬಲ್ ಟ್ರಸ್ಟ್ನ ಚೇತನ್ ಜನಾರ್ಧನ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….