ದೊಡ್ಡಬಳ್ಳಾಪುರ: ಟ್ರಾನ್ಸ್‌ಫಾರ್ಮರ್ ಬಳಿ ಹುಲ್ಲು ಮೇಯಲು ಹೋದ ಸೀಮೆ ಹಸುಗಳು, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಸಾಸಲು ಗ್ರಾಮದಲ್ಲಿ ಸಂಭವಿಸಿದೆ.
ಸಾಸಲು ಗ್ರಾಮದ ಹನುಮಂತರಾಯಪ್ಪ ಎನ್ನುವವರಿಗೆ ಸೇರಿದ ಸೀಮೆ ಹಸುಗಳು ಇವಾಗಿದ್ದು, ಇಂದು ಬೆಳಗ್ಗೆ 9.45ರ ವೇಳೆ ಹಸುಗಳು ಮೇಯಲ್ಲು ಬಿಟ್ಟಾಗ, ಹುಲ್ಲು ಮೇಯುತ್ತಾ ಟ್ರಾನ್ಸಾಫಾರ್ಮರ್ ಬಳಿ ತೆರಳಿದಾಗ ಘಟನೆ ಸಂಭವಿಸಿದೆ.
ಒಂದು ಲಕ್ಷ ಎಂಬತ್ತು ಸಾವಿರ ರೂ ನೀಡಿ ಖರೀದಿಸಿ ಹಾಲು ಕರೆದು ಜೀವನ ನಡೆಸುವ ಉದ್ದೇಶದಿಂದ ಹಸುಗಳನ್ನು ತರಲಾಗಿತ್ತು, ಆದರೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ನನ್ನ ಹಸುಗಳನ್ನು ಬಲಿ ಪಡೆದಿದ್ದು, ಮುಂದಿನ ಜೀವನೋಪಾಯಕ್ಕೆ ನಾ ಏನು ಮಾಡಲಿ ಎಂದು ಹಸುಗಳನ್ನು ಕಳೆದುಕೊಂಡ ಹನುಮಂತರಾಯಪ್ಪ ಅಳಲು ತೋಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಬಂದು ಪರಿಶೀಲನೆ ನಡೆಸುತ್ತಿದ್ದಾರೆ, ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….