ದೊಡ್ಡಬಳ್ಳಾಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ಶಾಂತಿನಗರದ 5ನೇ ಕ್ರಾಸ್ ಉದ್ಯಾನವನದಲ್ಲಿ ನವ ವಿವಾಹಿತರಾದ ಸಂತೋಷ್ ಮತ್ತು ಐಶ್ವರ್ಯ ಸಸಿ ನೆಟ್ಟು ಸಂಭ್ರಮಿಸಿದರು.
ಶಾಂತಿನಗರದ ನಿವಾಸಿ ಸಂತೋಷ್, ವಿದುರಾಶ್ವಥದಲ್ಲಿ ಐಶ್ವರ್ಯ ಎನ್ನುವವರನ್ನು ಇಂದು ಬೆಳಗ್ಗೆ ವಿವಾಹವಾಗಿದ್ದು, ಮನೆಗೆ ಮರಳಿದ್ದಾರೆ. ಕೋವಿಡ್ – 19 ಕಾರಣ ಸಂತೋಷ್ ಸ್ನೇಹಿತರು ವಿವಾಹಕ್ಕೆ ತೆರಳಲು ಸಾದ್ಯವಾಗದ ಕಾರಣ, ಸ್ನೇಹಿತರು ಸಸಿ ನೆಡುವ ಕಾರ್ಯಕ್ರಮ ಆಯೋಜಿಸುವ ಮೂಲಕ ನವ ದಂಪತಿಗಳಿಗೆ ಶುಭ ಹಾರೈಸಿದರು.
ಈ ವೇಳೆ ಚಿದಾನಂದ್, ದಿವಾಕರ್, ಉಪನ್ಯಾಸಕರು ದಾದಪೀರ್, ಕೆ.ಪಿ. ಮಂಜುನಾಥ್, ಹೆಚ್.ಎಂ ಶ್ರೀನಿವಾಸ್, ರವಿಕಿರಣ್, ಗೋವಿಂದರಾಜ್, ಹಾಗೂ ನಗರಸಭೆಯ ಭಗವಂತಪ್ಪ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….