ದೊಡ್ಡಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಏಳು ವರ್ಷ ಪೂರೈಸಿದ ಹಿನ್ನೆಲೆ, ತಾಲೂಕು ಬಿಜೆಪಿ ಘಟಕದವತಿಯಿಂದ ಸೇವಾಹಿ ಸಂಘಟನೆ ಹೆಸರಿನಲ್ಲಿ ತಾಲೂಕಿನ ನಗರ, ಮಧುರೆ ಹೋಬಳಿಯ ಹಾಗೂ ದೊಡ್ಡಬೆಳವಂಗಲ ಹೋಬಳಿಯ ಸುಮಾರು 250 ಆಶಾ ಕಾರ್ಯಕರ್ತರಿಗೆ ಕರೊನಾ ಸೋಂಕು ತಡೆ ಪರಿಕರಗಳನ್ನು ವಿತರಿಸಲಾಯಿತು.
ಬೆಂ.ಗ್ರಾ.ಜಿಲ್ಲಾ ಫಲಾನುಭವಿಗಳ ಪ್ರಕೋಷ್ಟದ ಸಂಚಾಲಕರಾದ ಧೀರಜ್ ಮುನಿರಾಜು ಮಾತನಾಡಿ, ಜೀವನ ಹಂಗು ತೊರೆದು ಕೋವಿಡ್-19 ರೋಗದಿಂದ ದೇಶ ಹಾಗೂ ಸಾರ್ವಜನಿಕರನ್ನು ರಕ್ಷಿಸುತ್ತಿರುವ ಕರೊನಾ ವಾರಿಯರ್ಸ್ಗಳು ನಿಜವಾಗಲು ದೇಶವನ್ನು ಕಾಪಾಡುವ ಆಂತರಿಕ ಸೈನಿಕರಿದ್ದಂತೆ. ಕರೊನಾ ವೈರಸ್‌ನಿಂದ ಸಾರ್ವಜನಿಕರನ್ನು ರಕ್ಷಿಸುವಲ್ಲಿ ವೈದ್ಯರು, ನರ್ಸ್, ಪೊಲೀಸರು, ಆಶಾ ಕಾರ್ಯಕರ್ತೆಯರ ಸೇವೆ ಗಮನಾರ್ಹ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಟಿ.ಎನ್.ನಾಗರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಘಟ್ಟ ಕಾಂತರಾಜು, ಕಾಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಕಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಮನು, ಬೈರೇ ಹನುಮೇಗೌಡ, ಮಾಧ್ಯಮ ಪ್ರಕೋಷ್ಟದ ಸಂಚಾಲಕ ಬಂತಿವೆಂಕಟೇಶ್, ಮಧುರೆ ಹೋಬಳಿ ಬಿಜೆಪಿ ಉಪಾಧ್ಯಕ್ಷ ಮಧುಸೂದನ್, ಯುವ ಮುಖಂಡರಾದ ಅನಿಲ್ ಕುಮಾರ್ ಹಾಗೂ ಮಂಜುನಾಥ್, ಡಿ.ಪಿ.ಎ ಸದಸ್ಯ ಎನ್.ಕೆ.ರಮೇಶ್, ತಾಲ್ಲೂಕು ವಕ್ತಾರ ನಾಗರಾಜು, ಮುಖಂಡರಾದ ಚಂದ್ರೇಗೌಡ ಬಾಬು, ಲೋಕೇಶ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….