ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ಎರಡನೇ ಜಿಲ್ಲೆಯಲ್ಲಿ ತೀವ್ರವಾಗಿ ವ್ಯಾಪಿಸುತ್ತಿದ್ದು, ಗುರುವಾರ ಒಂದೇ ದಿನ 1129 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಬೆನ್ನಲ್ಲೆ ಜಿಲ್ಲಾ ಉಸ್ತುವಾರಿ ಸಚಿವ.ಆರ್.ಅಶೋಕ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಎಲ್ಲಿದ್ದೀರಿ ಸಮರಾಟರೇ…? ಎಂದು ಪ್ರಶ್ನಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತರಾವರಿ ಸಂದೇಶಗಳು ಉಸ್ತುವಾರಿ ಸಚಿವ ಆರ್.ಅಶೋಕ್ ಅವರ ವಿರುದ್ದ ಹರಿದಾಡುತ್ತಿದ್ದು, ಎಲ್ಲಿದ್ದೀರಿ ಸಮರಾಟರೇ…? ಎಂಬ ಸಂದೇಶ ಮಾತ್ರ ತೀವ್ರ ಚರ್ಚೆಗೆ ಕಾರಣವಾಗಿದೆ.
ಎಲ್ಲಿದ್ದೀರಿ ಸಮರಾಟರೇ…?: ನೀವು ಉಸ್ತುವಾರಿ ವಹಿಸಿರುವ ಜಿಲ್ಲೆ ಕಡೆ ಸ್ವಲ್ಪ ಗಮನಹರಿಸಿ ಮಾನ್ಯ ಸಮರಾಟ ಅಶೋಕ್ ಸಾಹೇಬರೇ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಬೆಂಗಳೂರು ನಗರದಲ್ಲಿ ವ್ಯವಹಾರ ಮಾಡುವ ನೀವು ಮರಳಿ ಬನ್ನಿ ಸ್ವಾಮಿ ನಮ್ಮ ಜಿಲ್ಲೆಗೆ ಇಲ್ಲದಿದ್ದರೆ ಉಸ್ತುವಾರಿಯನ್ನು ತ್ಯಜಿಸಿ ಮನೆಯಲ್ಲಿರಿ
8 ಸಾವಿರ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಪ್ರತಿನಿತ್ಯ 700 ಕ್ಕಿಂತ ಹೆಚ್ಚು ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದರು ನಿಯಂತ್ರಣ ಮಾಡಲು ಜಿಲ್ಲೆಗೆ ಬರಲಿಲ್ಲವಲ್ಲ ಸ್ವಾಮಿ
ಜಿಲ್ಲೆಯಲ್ಲಿ ಸೋಂಕಿತರು ನರಳಿನರಳಿ ಸಾಯುತ್ತಿದ್ದಾರೆ ಆದರೂ ಆಕ್ಸಿಜನ್, ವೆಲ್ಟಿಲೇಟರ್, ಬೆಡ್ ಸೌಲಭ್ಯ ಹೊದಗಿಸಲು ವಿಫಲವಾಗಿ, ಒಂದು ಸಭೆ ಮಾಡದ ಮಾನ್ಯ ಸಮರಾಟ ಆಶೋಕಣ್ಣ ಜಿಲ್ಲೆಗೆ ಬನ್ನಿ
ಅಶೋಕ್ ಸಮರಾಟರೇ ಮರಳಿ ಬನ್ನಿ *ನಿಮ್ಮ ಉಸ್ತುವಾರಿ ಜಿಲ್ಲೆಯ ಮನೆಯವರು ಸಾಯುತ್ತಿದ್ದರೇ ನಾಪತ್ತೆಯಾಗಿದ್ದೀರಾ ರಾಜ್ಯದ ಸೋಂಕಿತರ ಸಂಖ್ಯೆಯಲ್ಲೆ ಟಾಪ್ ಐದರಲ್ಲಿ ಇದ್ದೇವೆ ಆದರೂ ಜಿಲ್ಲೆಯ ಎಲ್ಲಾ ತಾಲ್ಲೂಕಿಗಳಿಗೆ ಭೇಟಿ ನೀಡಲಾಗದಷ್ಟು ಉದ್ಧಟತನವೇ ನಿಮಗೆ,,* ನಿಮ್ಮ ಉಢಾಫೆಗಳಿಂದ ನಮ್ಮ ಜಿಲ್ಲೆಯನ್ನು ಬೆಂಗಳೂರಿನ ಸ್ಥಿತಿ ಮಾಡಬೇಡಿ ಎಂದು ಸಂದೇಶದಲ್ಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….