ಬೆಂಗಳೂರು: ಕೋವಿಡ್-19 ಎರಡನೇ ಅಲೆ ತಡೆಗಟ್ಟಲು ಕರ್ನಾಟಕವನ್ನು 14 ದಿನಗಳ ಕಾಲ ಲಾಕ್ಡೌನ್ ನಡೆಸಲಾಗುವುದೆಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಹಾರಾಷ್ಟ್ರ ಮೀರಿ ಸೋಂಕು ಹರಡುತ್ತಿರುವ ಹಿನ್ನೆಲೆ ತೀವ್ರವಾಗಿರುವ, ತಜ್ಞರ ಸಲಹೆ ಮೇರೆಗೆ ಕೋವಿಡ್-19 ಎರಡನೇ ಅಲೆ ತಡಗಟ್ಟಲು ಮಂಗಳವಾರ ರಾತ್ರಿಯಿಂದ ಮೇ.11ರ ವರೆಗೆ ಲಾಕ್ಡೌನ್ ಅನಿರ್ವಾರ್ಯತೆ ಇಂದು ತಿಳಿಸಿದರು.
6ರಿಂದ 10ರ ವರೆಗೆ ಅಗತ್ಯ ವಸ್ತುಗಳಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಎಲ್ಲವೂ ಬಂದ್ ಇರಲಿದೆ.
ಕಟ್ಟಡ ನಿರ್ಮಾಣ, ಕೃಷಿ, ಅಗತ್ಯವಸ್ತುಗಳು ಹೊರತು ಪಡಿಸಿ ಕರ್ಫ್ಯೂ ಮುಂದುವರೆಯಲಿದೆ. ತಾಲೂಕು ಮಟ್ಟದಲ್ಲಿ ತಹಶಿಲ್ದಾರ್ ನೂಡಲ್ ಆಫೀಸ್ ಆಗಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ.
ಕೋವಿಡ್ ಆಸ್ಪತ್ರೆಗಳಲ್ಲಿ 18 ವಯಸ್ಸಿನ ಮೇಲ್ಪಟ್ಟವರಿಗೆ ಉಚಿತ ನೀಡಲಾಗುವುದೆಂದು ತಿಳಿಸಿದ್ದಾರೆ.
ಈ ವೇಳೆ ಗೃಹಸಚಿವ ಬಸವಾರಾಜ ಬೊಮ್ಮಾಯಿ, ಸಚಿವರಾದ ಡಾ.ಸುಧಾಕರ್, ಆರ್.ಅಶೋಕ್ ಮತ್ತಿತರಿದ್ದರು.
ಪ್ಯಾಕೇಜ್ ಘೋಷಣೆ ಮಾಡಬೇಕಾಗುವ ಆತಂಕದಿಂದ ಲಾಕ್ಡೌನ್ ಹೆಸರೇಳದೆ ರಾಜ್ಯ ಸರ್ಕಾರದಿಂದ 14 ದಿನ ಕರ್ನಾಟಕ ಲಾಕ್ಡೌನ್ ಮಾಡಿದೆ ಎನ್ನಲಾಗುತ್ತಿದೆ. ಅಧಿಕೃತ ಆದೇಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದ್ದು, ಸಂಪೂರ್ಣ ಮಾಹಿತಿ ದೊರಕಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…