ಕಾನೂನು ಎಂಬ ಪದ ಕೇಳಿದೋಡನೆಯೇ ಬಹಳಷ್ಟು ಜನ ಆತಂಕಕ್ಕೆ ಒಳಗಾಗುತ್ತಾರೆ. ಅಲ್ಲದೆ ಕಾನೂನು ಎಂದರೆ ಕೇವಲ ನ್ಯಾಯಾಲಯ ಮಾತ್ರ ಎಂಬ ತಪ್ಪು ಗ್ರಹಿಕೆ ಅನೇಕರಲ್ಲಿದೆ.
ಉಳಿದಂತೆ ಕಾನೂನು ಎಂದರೇ ಏನು ಎಂಬ ಸ್ಪಷ್ಟ ಮಾಹಿತಿ ಇಲ್ಲವೆಂಬುದು ವಾಸ್ತವ. ನಿಯಮಗಳ ಕ್ರಮಬದ್ಧ ಜೋಡಣೆಯೇ ಕಾನೂನು. ಕಾನೂನಿನ ವಿವಿಧ ಸಂಸ್ಥೆಗಳ ಮೂಲಕ ಕಾನೂನನ್ನು ಜಾರಿ ಮಾಡಲಾಗುತ್ತದೆ.
ನಮ್ಮ ಜೀವನ ಮತ್ತು ಸಮಾಜವನ್ನು ಕಾನೂನು ಹಲವು ರೀತಿಗಳಲ್ಲಿ ಪರಿಣಾಮ ಬೀರುತ್ತದೆ. ಬಸ್ ಟಿಕೆಟ್ ಪಡೆಯುವುದರಿಂದ ಹಿಡಿದು ಆಸ್ತಿ ಕೊಳ್ಳುವುದರ ತನಕ ಸಹಾಯ ಮಾಡುತ್ತದೆ.
ಆಧುನಿಕ ನ್ಯಾಯಶಾಸ್ತ್ರವು 18ನೆಯ ಶತಮಾನದಲ್ಲಿ ಆರಂಭಗೊಂಡಿದ್ದು, ಪ್ರಕೃತಿ ನಿಯಮ / ನ್ಯಾಯ, ನಾಗರಿಕ ಕಾನೂನು ಹಾಗೂ ರಾಷ್ಟ್ರಗಳ ಕಾನೂನುಗಳ ಪ್ರಾಥಮಿಕ ತತ್ವಗಳ ಮೇಲೆ ಕೇಂದ್ರೀಕೃತವಾಗಿತ್ತು.
ಆಸ್ತಿ ಕಾನೂನು ಒಂದು ಆಸ್ತಿಯ ಒಡೆತನದ ಹಕ್ಕು, ಹೊಣೆಗಾರಿಕೆ ಇತ್ಯಾದಿಗಳ ಬಗ್ಗೆ ವಿವರಿಸುತ್ತದೆ.
ಖಾಸಗಿ ಮತ್ತು ಕಾನೂನು ಹಕ್ಕುಗಳಿಗೆ (private and legal rights) ಚ್ಯುತಿ (injury) ಬಂದಾಗ ಉಪಯೋಗಿಸಲಾಗುತ್ತದೆ.ಅಪರಾಧ ಕಾನೂನಿನಲ್ಲಿ ಮಾಡಿದ ತಪ್ಪುಗಳಿಗೆ ದಂಡನೀತಿಯ (penal code) ಪ್ರಕಾರ ಶಿಕ್ಷೆ ನೀಡಲಾಗುತ್ತದೆ.ಸಾಂವಿಧಾನಿಕ ಕಾನೂನು ಯಾವುದೇ ರಾಷ್ಟ್ರದಲ್ಲಿ ತನ್ನ ಸಂವಿಧಾನದ ಚೌಕಟ್ಟಿನೊಳಗೆ ಬೇರೆಯ ಕಾನೂನುಗಳನ್ನು ಸೃಷ್ಟಿ ಮಾಡುವ ಬಗ್ಗೆ ಮತ್ತು ಜನರ ಹಕ್ಕುಗಳನ್ನು ಕಾಪಾಡುವ ಬಗ್ಗೆ ವಿವರಿಸುತ್ತದೆ.
ಆಡಳಿತ ಕಾನೂನು ಸರ್ಕಾರದ ಆಡಳಿತ ಸಂಸ್ಥೆಗಳ ಕಾರ್ಯ ಛಟುವಟಿಕೆ ಮತ್ತು ಕ್ರಮಗಳ ಬಗ್ಗೆ ವಿವರಿಸುತ್ತದೆ. ಸರ್ಕಾರಿ ಸಂಸ್ಥೆಗಳು ತಮ್ಮ ಕಾರ್ಯನೀತಿಗಳಲ್ಲಿ ನಿಯಮ ರೂಪಿಸುವುದು ಮತ್ತು ಪರಿಪಾಲನೆ ಮಾಡುವುದು ಎಲ್ಲವೂ ಸೇರಿರುತ್ತದೆ.
ಅಂತರರಾಷ್ಟ್ರೀಯ ಕಾನೂನು ಸಾರ್ವಭೌಮ ರಾಷ್ಟ್ರಗಳ ನಡುವಿನ ಉದ್ಯಮ, ಸೇನೆ, ಪರಿಸರ ಮತ್ತು ಇತರ ವಿಷಯಗಳ ಬಗ್ಗೆ ವಿವರಿಸುತ್ತದೆ.
ಕಾನೂನಿನ ಆಡಳಿತವು ಒಬ್ಬ ಮನುಷ್ಯನ ಆಡಳಿತಕ್ಕಿಂತ ಉತ್ತಮ ಎಂದು ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಹೇಳಿದ್ದಾರೆ.
ಮುಂದಿನ ವಾರದಿಂದ ಕಾನೂನು ಅಗತ್ಯತೆ ಏನು, ಸಾರ್ವಜನಿಕರ ಕಾನೂನು ಪಾಲನೆ, ಕಚೇರಿಗಳಲ್ಲಿ ಕಾನೂನಾತ್ಮವಾಗಿ ಪರಿಹಾರ ಪಡೆಯುವ ಮಾಹಿತಿ ಹಂತ ಹಂತವಾಗಿ ತಿಳಿಯೋಣಾ. ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ: ಟಿ.ಕೆ.ಹನುಮಂತರಾಜು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….