![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ಬೆಂ.ಗ್ರಾ.ಜಿಲ್ಲೆ: ಅರವತ್ತು ವರ್ಷ ಮೇಲ್ಪಟ್ಟ ಹಾಗೂ ಅರೋಗ್ಯ ಸಮಸ್ಯೆ ಇರುವ ನಲವತ್ತೈದು ರಿಂದ ಅರವತ್ತು ವರ್ಷದೊಳಗಿನ ವ್ಯಕ್ತಿಗಳಿಗೆ ಮಾರ್ಚ್ 1 ರಿಂದ ಮಧ್ಯಾಹ್ನ 12:00 ಗಂಟೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆ ಹಾಗೂ ಎಂವಿಜೆ ಮತ್ತು ಆಕಾಶ್ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಮಂಜುಳಾದೇವಿ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸೆಜ್ ಗೆ ಕೋವಿಡ್ ಲಸಿಕೆಗೆ ರೂ 250/- ದರ ನಿಗಧಿ ಪಡಿಸಲಾಗಿದೆ.
ಆನ್ ಲೈನ್ ನಲ್ಲಿ ನೋಂದಾಯಿತ ಹಾಗೂ ಆಸ್ಪತ್ರೆಗಳಿಗೆ ನೇರವಾಗಿ ಬರುವ ವ್ಯಕ್ತಿಗಳಿಗೆ ಕೋವಿಡ್ ಲಸಿಕೆಯನ್ನು ಹಾಕಲು ಕ್ರಮವಹಿಸಲಾಗಿದ್ದು, ಪ್ರತಿದಿನ ಒಂದು ಲಸಿಕಾ ಕೇಂದ್ರದಲ್ಲಿ 200 ಜನರಿಗೆ ಲಸಿಕೆ ಹಾಕಲು ವ್ಯವಸ್ಥೆಯನ್ನು ಮಾಡಲಾಗಿದೆ.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಲವತ್ತೈದು ರಿಂದ ಅರವತ್ತು ವರ್ಷದೊಳಗಿನ ವ್ಯಕ್ತಿಗಳು ಕೋವಿಡ್ ಲಸಿಕೆ ಪಡೆಯುವ ಮುನ್ನ, ಕಡ್ಡಾಯವಾಗಿ ಆರೋಗ್ಯ ಸಮಸ್ಯೆಯ ಕುರಿತು ವೈದ್ಯರ ದೃಢೀಕರಣ ಪತ್ರವನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಮಂಜುಳಾ ದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ.ಸುದ್ದಿಗಳು ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….