ಆರೋಗ್ಯದ ಕಾಳಜಿಯಿಂದ ಬೆಲೆ ಏರಿಕೆ ಬಿಸಿ ಅನಿರ್ವಾರ್ಯ / ಒಂದು ತಿಂಗಳ ಒಳಗಾಗಿ ಬೆಂ.ಗ್ರಾ.ಜಿಲ್ಲಾ ಕೇಂದ್ರ ಘೋಷಣೆ: ಸಚಿವ ಆರ್.ಅಶೋಕ್

ಬೆಂ.ಗ್ರಾ‌.ಜಿಲ್ಲೆ: ನಾಲ್ಕು ತಾಲೂಕುಗಳ ಜನಾಭಿಪ್ರಾಯ ಸಂಗ್ರಹಿಸಿ ಒಂದು ತಿಂಗಳ ಒಳಗಾಗಿ ಜಿಲ್ಲಾ ಕೇಂದ್ರವನ್ನು ಘೋಷಿಸಲಾಗುವುದೆಂದು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ತಿಳಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದೊಡ್ಡಬಳ್ಳಾಪುರಕ್ಕೆ ಮಂಜೂರಾಗಿರುವ ಜಿಲ್ಲಾ ಆಸ್ಪತ್ರೆಗೆ ವಿಧಾನಸಭೆಯಲ್ಲಿ ಅನುಮೋದನೆ ದೊರಕದಿರುವ ಕುರಿತು ಮಾದ್ಯಮವರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂ.ಗ್ರಾ. ಜಿಲ್ಲೆ ಘೋಷಣೆಯಾಗದ ಕಾರಣ ಅನುಮೋದನೆಯಾಗಿಲ್ಲ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕಿನ ಜನರ ಅಭಿಪ್ರಾಯ ಸಂಗ್ರಹಿಸಿ.ಯಾವುದೇ ಪಕ್ಷಪಾತ ಮಾಡದೆ ತಿಂಗಳ ಒಳಗಾಗಿ ಜಿಲ್ಲಾ ಕೇಂದ್ರ ಘೋಷಣೆ ಮಾಡಿ ಅನುಮೋದನೆ ನೀಡಲಾಗುವುದೆಂದರು.

ಬಿಡುಗಡೆಯಾದ ಹಣ ಬಳಸಿ ನಂತರ ಸರ್ಕಾರ ವಿರುದ್ದ  ಮಾತಾಡಿ: ದೊಡ್ಡಬಳ್ಳಾಪುರದ ಅಭಿವೃದ್ಧಿ ಅನುದಾನ ತಡೆದಿರುವ ಶಾಸಕ ಟಿ.ವೆಂಕಟರಮಣಯ್ಯರ ಆರೋಪ ಪ್ರತಿಕ್ರಿಯೆ ನೀಡಿದ ಸಚಿವರಾದ ಎಂಟಿಬಿ ನಾಗಾರಾಜ್ ಹಾಗೂ ಅಶೋಕ್, ನಗರೋತ್ಥಾನ ಯೋಜನೆಯಡಿ ಮೊದಲ ಹಂತದ ಕಾಮಗಾರಿ ನಡೆದಿದದ್ದು, ಮುಂದಿನ ಹಂತ ಬಿಡುಗಡೆಯಾಗಲಿದೆ. ಈಗ ಬಿಡುಗಡಯಾಗಿರುವ ಶಾಸಕರ ಅನುದಾನ ಬಳಸದೆ, ಎರಡನೇ ಹಂತದ ಹಣ ಕೇಳುವುದು ಎಷ್ಟು ಸರಿ. ಮೊದಲು ಬಿಡುಗಡೆಯಾದ ಹಣವನ್ನು ಬಳಕೆ ಮಾಡಿ ನಂತರ ಸರ್ಕಾರ ವಿರುದ್ದ ಮಾತನಾಡಲಿ ಎಂದರು.

ಆರೋಗ್ಯದ ಕಾಳಜಿಯಿಂದ ಬೆಲೆ ಏರಿಕೆ: ಪೆಟ್ರೋಲ್ / ಡಿಸೇಲ್ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಏರಿತದ ಕಾರಣ ಪೆಟ್ರೋಲ್ / ಡಿಸೇಲ್ ಬೆಲೆ ಉಂಟಾಗುತ್ತದೆ. ಕರೊನಾದಿಂದ ಉಂಟಾದ ಆರ್ಥಿಕ ಅವ್ಯವಸ್ಥೆ ಸರು ದೂಗಿಸಲು ತೆರಿಗೆ ಅನಿರ್ವಾರ್ಯವಾಗಿದೆ, ಆರೋಗ್ಯದ ಹಿತ ದೃಷ್ಟಿಯಿಂದ ಬೆಲೆ ಏರಿಕೆ ಅಗತ್ಯವಾಗಿದ್ದು, ಜನತೆಗೂ ಇದರ ಅರಿವಿದೆ ಆದರೆ ಕಾಂಗ್ರೆಸ್ ರಾಜಕೀಯ ಪ್ರೇರಿತ ಹೋರಾಟ ಮಾಡುತ್ತಿದೆ ಎಂದರು.

ಉದ್ಯೋಗ ಸೃಷ್ಟಿಯ ಬಜೆಟ್, ಕಾಂಗ್ರೆಸ್ ಕುಟುಂಬದ ಬಜೆಟ್ ಅಲ್ಲ: ಕರೊನಾದಿಂದ  ಉಂಟಾದ ಆರ್ಥಿಲ ಅಸಮತೋಲನದಿಂದ ಪಾಕಿಸ್ತಾನ ಸೇರಿದಂತೆ ಇತರ ದೇಶಗಳು ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಆದರೆ ಭಾರತ ಕರೊನ ಆರ್ಥಿಕ ಸಂಕಷ್ಟದ ನಡುವೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಬಜೆಟ್ ನೀಡಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸರ್ಕಾರದ ಜನಪರ, ಪಾರದರ್ಶಕ, ಹಗರಣ ರಹಿತ ಆಡಳಿತವನ್ನು ನೀಡುತ್ತಿರುವುದರಿಂದ ಕಳೆದ 6 ವರ್ಷದಿಂದ ವಿರೋಧಿಸಲು ಅವಕಾಶ ಸಿಗದೆ. ರೈತರಿಗೆ ಸುಳ್ಳು ಮಾಹಿತಿ ದಾರಿ ತಪ್ಪಿಸಿ ಹೋರಾಟ ಮಾಡಿಸುವುದು. ಬಜೆಟ್ ಕುರಿತು ಅವಹೇಳನ ಮಾಡುವುದು ಮಾಡುತ್ತಿದ್ದಾರೆ.

ಕೇಂದ್ರದ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ದಾಖಲೆಯ ಸುಮಾರು 2 ಲಕ್ಷ 23 ಸಾವಿರ ಕೋಟಿ ಮೀಸಲಿಟ್ಟಿದೆ. 54 ದೇಶಕ್ಕೆ ಕರೊನಾ ಲಸಿಕೆ ನೀಡಿದ್ದು. ಮತ್ತೆರಡು ಲಸಿಕೆ ಬರುತ್ತಿವೆ. ಆ ಮೂಲಕ ಭಾರತ ಇಡೀ ಪ್ರಪಂಚಕ್ಕೆ ಆರೋಗ್ಯ ಕೇಂದ್ರವಾಗಿದೆ.

ಕರ್ನಾಟಕದಲ್ಲಿ 33 ರಾಷ್ಟ್ರೀಯ ಹೆದ್ದಾರಿಗಳಿಗೆ 10,904  ಕೋಟಿ ಬಿಡುಗಡೆ,  2021-21 ರಲ್ಲಿ 1,16,144 ಕೋಟಿ ರೂ ಮೂಲ ಸೌಕರ್ಯ ನಿರ್ಮಾಣ, 2ನೇ ಹಂತದ ಬೆಂಗಳೂರು ಮೆಟ್ಟ್ರೋ ನಿರ್ಮಾಣಕ್ಕೆ 14,788 ಕೋಟಿ ರೂ ಬಿಡುಗಡೆ, ಬೆಂಗಳೂರು ಉಪನಗರ ಯೋಜನೆ 23 ಸಾವಿರ 93  ಕೋಟಿ ಬಿಡುಗಡೆ,  ರೈಲ್ವೆ ಯೋಜನೆಗಳಿಗೆ 4,870 ಕೋಟಿ ರೂಪಾಯಿ ಅನುದಾನ ಬಿಡುಗಡೆ,  ಉದ್ಯೋಗ ಸೃಷ್ಟಿಗೆ ತುಮಕೂರಿನಲ್ಲಿ 7,725ಕೋಟಿ ವೆಚ್ಚದಲ್ಲಿ ಸಣ್ಣ ಕೇಂದ್ರಗಳ ಕಾರಿಡಾರ್ ಸ್ಥಾಪಸಿ 2.8ಲಕ್ಷ ಉದ್ಯೋಗ ಸೃಷ್ಟಿ, ಉತ್ತರ ಕರ್ನಾಟಕ ಭಾಗದಲ್ಲಿ 21 ಸಾವಿರ ಕೋಟಿ ವೆಚ್ಚದ 13 ಹೆದ್ದಾರಿ ನಿರ್ಮಾಣ, ಬೆಂಗಳೂರು ಮಂಗಳೂರು ಸಂಪರ್ಕಿಸುವ ಶಿರಾಡಿಯ 13ಕಿಮಿ ಸುರಂಗ ಮಾರ್ಗ ನಿರ್ಮಾಣಕ್ಕೆ 10  ಕೋಟಿ ಬಿಡುಗಡೆ. ಹಳ್ಳಿಗಳಲ್ಲಿ ಹಕ್ಕುಪತ್ರ ನೀಡುವ ಸ್ವಾಮಿತ್ವ ಯೋಜನೆ ರಾಜ್ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಣೆ, ಗ್ರಾಮೀಣ ಸೌಕರ್ಯಕ್ಕೆ 40ಸಾವಿರ ಕೋಟಿ, 35 ಸಾವಿರ ಕೋಟಿ ಕರೊನಾ ಲಸಿಕೆ, ಕರ್ನಾಟಕದಲ್ಲಿ 15 ತುರ್ತು ಚಿಕಿತ್ಸೆ, ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಗೆ ಅನುಮೋದನೆ, ಉಜ್ವಲ ಯೋಜನೆಡಿ ಒಂದು ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ವಿಸ್ತರಣೆ, ಒನ್ ನೇಷನ್ ಒನ್ ಕಾರ್ಡ್ ಅಡಿ ಪಡಿತರ ಚೀಟಿ, ಕಾಳ ಸಂತೆ ಮಾರಾಟ ಅರ್ಹರಿಗೆ ತಲುಪಿಸಲು  ನಕಲಿ ಪಡಿತರಕ್ಕೆ ಈ ಯೋಜನೆ ಉಪಕಾರಿ, 75 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಪಿಂಚಣಿ ಮತ್ತು ಬಡ್ಡಿ ಆದಾಯಕ್ಕೆ ಸಂಬಂಧಿಸಿ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಮಹತ್ತರವಾದ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ‌ ನೀಡಿರುವುದು ಸ್ವಾಗತಾರ್ಹ ವಿಚಾರವಾಗಿದೆ. 

ಕರೊನಾ ಕಷ್ಟದಲ್ಲಿ ಬಡ ಜನರ, ರೈತರ ಪರ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು, ರಾಜ್ಯ ಬಜೆಟ್ ಗೆ ಪೂರಕ ಬಜೆಟ್ ಆಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿನ ತಿಂಗಳ ಅಧಿವೇಶನದಲ್ಲಿ ಇದೇ ಮಾದರಿಯಲ್ಲಿ ಬಜೆಟ್ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರೇರಣೆಯಲ್ಲಿ ಹಳ್ಳಿಗಡೆ ಕಡೆ ಜಿಲ್ಲಾಧಿಕಾರಿಗಳ ನಡೆ ಕಾರ್ಯ ಆರಂಭಿಸಲಾಗುತ್ತಿದ್ದು, ಫೆ.20ರಂದು ಶನಿವಾರ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ 24 ಗಂಟೆಗಳ ಕಾಲ ಜಿಲ್ಲಾಧಿಕಾರಿಗಳೊಂದಿಗೆ ವಾಸ್ತವ್ಯ ಹೂಡಿ ಕಂದಾಯ ಇಲಾಖೆ ಸಂಬಂಧಿಸಿದ ಸಮಸ್ಯೆ ಬಗೆ ಹರಿಸಲಾಗುವುದು. ಆ ಮೂಲಕ ಸರ್ಕಾರಿ ಕಚೇರಿಗೆ ಓಡಾಡಲು ಚಪ್ಪಲಿ ಸವೆಸುತ್ತಿದ್ದ ಜನತೆಗೆ ನೆಮ್ಮದಿ ನೀಡಿ, ಅಧಿಕಾರಿಗಳ ಚಪ್ಪಲಿ ಸವೆಯುವಂತೆ ಮಾಡಲಾಗುತ್ತಿದೆ.

ಕೃಷಿ ಕಾಯ್ದೆ ವಿರೋಧ ಕಾಂಗ್ರೆಸ್ ಕೈವಾಡ: ಕಾಂಗ್ರೆಸ್ ಕೈವಾಡದಿಂದ ಕೃಷಿ ಕಾಯ್ದೆ ತಿದ್ದುಪಡಿ ವಿರುದ್ದ ಅಪಪ್ರಚಾರ.ಮಾಡಿ ರೈತರನ್ನು ಎತ್ತಿಕಟ್ಟಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿಸುತ್ತಿದೆ, ಈ ಹೋರಾಟದ ಹಿಂದೆ ಕಾಂಗ್ರೆಸ್ ಅಲ್ಲದೆ ಕಾಣದ ಕೈಗಳು ಸೇರಿಕೊಂಡಿವೆ ತಾನು ಬೆಳೆದ ಬೆಳ ಬೆಳೆ ತನಗಿಷ್ಟ ಬಂದ ಕಡೆ ಮಾರಟ ಮಾಡುವ ಹಕ್ಕು ರೈತನದು ಅದಕ್ಕೆ ಏಕೆ ಅಡ್ಡಿ. ಈ ಕಾಯ್ದೆಯಿಂದ ರೈತನಿಗೆ ಸ್ವಾತಂತ್ರ್ಯ ಸಿಗಲಿದೆ. ಕಾಯ್ದೆಯಿಂದ ಎಪಿಎಂಸಿಗೆ ಹಾನಿಯಾಗುವುದಿಲ್ಲ, ಎಪಿಎಂಸಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರ ಹೆಸರಿನ ಹೋರಾಟ ಕೇವಲ ಎರಡು ಮೂರು ರಾಜ್ಯಗಳಿಗೆ ಸೀಮಿತವಾಗಿದ್ದು, ಕಾಂಗ್ರೆಸ್ ಪಕ್ಷ ದೇಶಾದ್ಯಂತ ಹರಡುತ್ತಿದೆ. ಅಂಬಾನಿ, ಅದಾನಿ ಮೋದಿ ಸರ್ಕಾರದ ಅವಧಿಯಲ್ಲಿ ಮಾತ್ರ ಉದ್ಬವ ಆದವರಲ್ಲ ಕಾಂಗ್ರೆಸ್ ಅವಧಿಯಲ್ಲಿಯೂ ಇದ್ದವರು, ಈಗಲು, ಇದ್ದಾರೆ ಮುಂದೆಯೂ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಕಾರ್ಯಕಾರಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಗೋವಿಂದರಾಜು,  ವಕ್ತಾರರಾದ ಪುಷ್ಪಾಶಿವಶಂಕರ್ ಮತ್ತಿತರರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

ರಾಜಕೀಯ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ ಆಯ್ಕೆ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ

ನಗರಸಭೆ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯಲ್ಲಿ ವಿ.ಎಸ್.ರವಿಕುಮಾರ್ Doddaballapura

[ccc_my_favorite_select_button post_id="99525"]
Doddaballapura: ಸರ್ಕಾರಿ ಜಮೀನು ಕಬಳಿಸಿ ಲೇಔಟ್ ‌ನಿರ್ಮಾಣದ ಆರೋಪ.. ಕರವೇ ಆಕ್ರೋಶ

Doddaballapura: ಸರ್ಕಾರಿ ಜಮೀನು ಕಬಳಿಸಿ ಲೇಔಟ್ ‌ನಿರ್ಮಾಣದ ಆರೋಪ.. ಕರವೇ ಆಕ್ರೋಶ

ಈ ಜಾಗದಲ್ಲಿದ್ದ ಬಂಡೇ ರಾತ್ರೋ ರಾತ್ರಿ ಕಾಣೆಯಾಗಿದ್ದು, ಇಲ್ಲಿದ್ದ ಮರಗಳನ್ನು ಕಡಿದು, ರಾಜ ಕಾಲುವೆಯನ್ನು ಮುಚ್ಚಲಾಗಿದೆ. Doddaballapura

[ccc_my_favorite_select_button post_id="99581"]
Ayyappaswamy garland: ಸಿಲಿಂಡರ್ ಸ್ಪೋಟ ಪ್ರಕರಣ: ದುರ್ಘಟನೆಯಿಂದ ಬೇಸತ್ತು ಅಯ್ಯಪ್ಪ ಮಾಲೆ ತೆಗೆದ ಸ್ವಾಮಿ.. ಕಣ್ಣೀರು

Ayyappaswamy garland: ಸಿಲಿಂಡರ್ ಸ್ಪೋಟ ಪ್ರಕರಣ: ದುರ್ಘಟನೆಯಿಂದ ಬೇಸತ್ತು ಅಯ್ಯಪ್ಪ ಮಾಲೆ ತೆಗೆದ

ಉಳಿದ 7 ಜನರ ಜೀವ ಉಳಿದರೆ ಮಾತ್ರ ಮುಂದೆ ಅಯ್ಯಪ್ಪ ಮಾಲೆ ಧರಿಸುತ್ತೇನೆ ಎಂದು ಮಂಜುನಾಥ್ ಕಣ್ಣೀರು ಹಾಕಿದ್ದಾರೆ. Ayyappaswamy garland

[ccc_my_favorite_select_button post_id="99555"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
Suicide: ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ..!

Suicide: ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ..!

ತಮ್ಮ ಸೆಕ್ಟರ್ 47ರಲ್ಲಿರುವ ಅಪಾರ್ಟ್‌ ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಮತ್ತು ಅವರೊಂದಿಗೆ ವಾಸಿಸುತ್ತಿದ್ದ ಸ್ನೇಹಿತರೊಬ್ಬರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. Suicide

[ccc_my_favorite_select_button post_id="99567"]
Accident| Doddaballapura: ಕಾರು ಡಿಕ್ಕಿ.. ದೇವರ ಪೂಜೆಗೆ ಹೂ ಬಿಡಿಸುತ್ತಿದ್ದ ಮಹಿಳೆ ದುರ್ಮರಣ

Accident| Doddaballapura: ಕಾರು ಡಿಕ್ಕಿ.. ದೇವರ ಪೂಜೆಗೆ ಹೂ ಬಿಡಿಸುತ್ತಿದ್ದ ಮಹಿಳೆ ದುರ್ಮರಣ

ಗೌರಿಬಿದನೂರು ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆ ಬದಿ ಅಳವಡಿಸಿದ್ದ ತಂತಿ ಬೇಲಿ ನುಗ್ಗಿ ಬಂದ ಡಿಕ್ಕಿ ಹೊಡೆದ Accident

[ccc_my_favorite_select_button post_id="99558"]

ಆರೋಗ್ಯ

ಸಿನಿಮಾ

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ ತೆಲುಗು ಚಿತ್ರರಂಗ..!

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ

ಸಭೆ ಯಶಸ್ವಿಯಾಗಿಲ್ಲ ಎನ್ನಲಾಗುತ್ತಿದೆ. ಬೆನಿಫಿಟ್ ಶೋಗಳಿಗೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ Pushpa 2

[ccc_my_favorite_select_button post_id="99541"]
error: Content is protected !!