ಬೆಂ.ಗ್ರಾ.ಜಿಲ್ಲೆ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಕರ್ಷಕ ಪಥಸಂಚಲನ, ಸಚಿವ ಆರ್.ಅಶೋಕ್ ಪರೇಡ್ ವೀಕ್ಷಣೆ, ಗೌರವ ರಕ್ಷೆ ಸ್ವೀಕಾರ

ಬೆಂ.ಗ್ರಾ.ಜಿಲ್ಲೆ: ದೇವನಹಳ್ಳಿ ಪಟ್ಟಣದ ಕ್ರೀಡಾಂಗಣದಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಏರ್ಪಡಿಸಲಾದ “72ನೇ ಗಣರಾಜ್ಯೋತ್ಸವ ದಿನಾಚರಣೆ” ಕಾರ್ಯಕ್ರಮದಲ್ಲಿ ಕಂದಾಯ‌ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ “ರಾಷ್ಟ್ರ ಧ್ವಜಾರೋಹಣ” ನೆರವೇರಿಸಿ, “ತ್ರಿವರ್ಣ ಧ್ವಜ”ಕ್ಕೆ ಗೌರವ ವಂದನೆ ಸಲ್ಲಿಸಿದರು.

ಇದೇ ವೇಳೆ ಪೊಲೀಸ್ ಇಲಾಖೆಯ ವಿವಿಧ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.ಪರೇಡ್ ವೀಕ್ಷಿಸಿ ವಿವಿಧ ತುಕಡಿಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ, ಮುನ್ನೂರು ವರ್ಷಗಳ ದಾಸ್ಯದ ಸರಪಳಿ ಕಳಚಿಕೊಂಡಿರುವ ಭಾರತ, 1950ರ ಜನವರಿ 26 ರಂದು ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಿ, ವಿಶ್ವದಲ್ಲಿ ತಾನೂ ಒಂದು ಸಾರ್ವಭೌಮ ರಾಷ್ಟ್ರವೆಂದು ಸಾರಿದ ದಿನವೇ ಗಣರಾಜ್ಯೋತ್ಸವ.

ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಹಲವಾರು ಭಾಷೆ, ಸಂಸ್ಕøತಿ, ಜಾತಿ, ಧರ್ಮ ಹೀಗೆ ವೈವಿಧ್ಯಮಯವಾದಂತಹ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಭಾರತಕ್ಕೆ ಏಕ ರೀತಿಯ ಸಂವಿಧಾನವನ್ನು ರಚನೆ ಮಾಡುವುದು ದೊಡ್ಡ ಸವಾಲಾಗಿತ್ತು. 

ಜಗತ್ತಿನಲ್ಲಿ ಚಾಲ್ತಿಯಲ್ಲಿದ್ದ, ರಾಜಕೀಯ ವ್ಯವಸ್ಥೆಗಳ ಪೈಕಿ ಭಾರತದಂಥ ದೇಶಕ್ಕೆ ಪ್ರಜಾಸತ್ತೆಯೇ ಸೂಕ್ತವೆಂದು ನಮ್ಮ ಹಿರಿಯರು ಅಂದು ನಿರ್ಧರಿಸಿದ ಫಲವಾಗಿ ನಾವು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದೇವೆ. ಈ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭು. ಆತನ ಏಳ್ಗೆಯೇ ಸರ್ಕಾರದ ಆದ್ಯ ಕರ್ತವ್ಯ. ಇಂಥ ವ್ಯವಸ್ಥೆಯಲ್ಲಿ 71 ವರ್ಷಗಳ ಕಾಲ ಸಾಗಿ ಬಂದಿರುವ ನಾವು, ನಮ್ಮ ದೇಶದ ಮುನ್ನಡೆಗೆ ಈ ವ್ಯವಸ್ಥೆ ನೀಡಿದ ಕಾಣಿಕೆಯನ್ನು ಮರೆಯಲಾಗದು.

ರಾಷ್ಟ್ರಪಿತ ಮಹಾತ್ಮಾ ಗಾಂಧಿ, ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ನೇತಾಜಿ ಸುಭಾಸ್‍ಚಂದ್ರ ಬೋಸ್‍ರಂಥ ನಾಯಕರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಪಡೆದ ಸ್ವಾತಂತ್ರ್ಯ, ಸತ್ಯ-ಶಾಂತಿ ಹಾಗೂ ಅಹಿಂಸೆಯಿಂದ ಪ್ರೇರಿತಗೊಂಡಿದ್ದಾಗಿದೆ. ಡಾ|| ಬಾಬು ರಾಜೇಂದ್ರಪ್ರಸಾದ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂವಿಧಾನ ರಚನಾ ಸಮಿತಿಯಲ್ಲಿ, ಕರಡು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಬಾಬಾಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್‍ರವರ ನಾಯಕತ್ವದಲ್ಲಿ ಅತ್ಯುತ್ತಮ ಸಂವಿಧಾನವನ್ನು ರಚಿಸಲಾಯಿತು. 

ಸಂವಿಧಾನ ಕರಡು ಸಮಿತಿಯಲ್ಲಿ ಮತ್ತು ರಚನಾ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ವಿಶೇಷವಾಗಿತ್ತು. ತಮ್ಮ ಪಾತ್ರವನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ಅಂಬೇಡ್ಕರ್ ಅವರಿಗೆ ಹಲವಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಅನುಭವ ನೆರವಾಯಿತು. ಇವರ ಸೇವೆಗೆ ಮನ್ನಣೆ ದೊರೆತು ಇವರನ್ನು ಸಂವಿಧಾನದ ಪಿತಾಮಹ ಎಂದು ನಾವು ಸ್ಮರಿಸುವಂತಾಗಿದೆ. 

ರಾಷ್ಟ್ರದ ಏಕತೆಗೆ ಪೂರಕವಾಗಿ, ದುರ್ಬಲ ವರ್ಗದವರ ಏಳಿಗೆಗಾಗಿ, ಶೋಷಣೆ ವಿರುದ್ಧ ರಕ್ಷಣೆ ನೀಡುವ, ಬಲಿಷ್ಠ ಒಕ್ಕೂಟ ಮಾದರಿಯ ಸರ್ಕಾರವನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರಪಂಚದಲ್ಲೇ ಅತ್ಯುತಮ ಮಾದರಿಯ ಸಂವಿಧಾನ ಹೊಂದಿರುವುದು ಭಾರತೀಯರೆಲ್ಲರೂ ಹೆಮ್ಮೆ ಪಡುವಂತಾಗಿದೆ. 

ಸರ್ವಸ್ವತಂತ್ರ ಸಾರ್ವಭೌಮ ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮ್ಮಕ ಗಣರಾಜ್ಯವಾಗಿ ಇಡೀ ಪ್ರಪಂಚದಲ್ಲಿ ಮಾದರಿಯೆನಿಸುವ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳಲಾಗಿದೆ. ಪ್ರಪಂಚದಲ್ಲಿಯೇ ಹಲವು ಭಾಷೆ, ಪಂಗಡ, ವೈವಿಧ್ಯತೆಯನ್ನು ಹೊಂದಿರುವ ಏಕೈಕ ದೇಶ ನಮ್ಮದು.    

ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೈಗಾರಿಕಾ ವಲಯದ ಜೊತೆ ಜನತೆಯ ಕಲ್ಯಾಣ ಕಾರ್ಯಕ್ರಮಗಳಿಂದ ಭಾರತವು ಗುರುತರವಾದ ಅಭಿವೃದ್ಧಿಯನ್ನು ಸಾಧಿಸಿದೆ. 

2020ರ ಆರಂಭದಲ್ಲಿಯೇ ಬಂದೆರೆಗಿದ ಕೋವಿಡ್-19 ಸೋಂಕು ರಾಜ್ಯ ಸೇರಿದಂತೆ ವಿಶ್ವದಲ್ಲಿಯೇ ತಲ್ಲಣ ಮೂಡಿಸಿತು. ಆ ಸಂದರ್ಭದಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರಗಳು ಜನಸಾಮಾನ್ಯರ ನೆರವಿಗೆ ಧಾವಿಸಿ, ಆತ್ಮವಿಶ್ವಾಸ ಬೆಳೆಸಿ, ಕರೊನಾ ವೈರಾಣು ಸೋಂಕಿನಿಂದ ಉಂಟಾದ ವಿಪ್ಲವಗಳ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದದ್ದು ತಮಗೆಲ್ಲಾ ತಿಳಿದ ವಿಚಾರವಾಗಿದೆ.

ಪ್ರಸ್ತುತ ಕೋವಿಡ್ ಸೋಂಕಿಗೆ ಔಷಧಿ ಲಭ್ಯವಾಗಿದ್ದು, ಜಿಲ್ಲೆ, ರಾಜ್ಯ ಸೇರಿದಂತೆ ದೇಶಾದ್ಯಂತ ಲಸಿಕೆ ವಿತರಣೆ ಆಗುತ್ತಿರುವುದು, ಮಾನವ ಬದುಕು, ವ್ಯವಹಾರ ದಿನಕಳೆದಂತೆ ಮತ್ತೆ ಎಂದಿನಂತೆ ಸಾಗುತ್ತಿರುವುದು ನೆಮ್ಮದಿ ಮೂಡಿಸುತ್ತಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2021ರ ಜನವರಿ 17ರ ವರೆಗೆ ಒಟ್ಟು 18,535 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 18,199 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆರೋಗ್ಯವಂತರಾಗಿದ್ದಾರೆ. 

ಇದೇ ಜನವರಿ 16 ರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮ ಆರಂಭವಾಗಿದ್ದು, ಜಿಲ್ಲೆಗೆ ಮೊದಲ ಹಂತದಲ್ಲಿ 11,697 ಮಂದಿಗೆ ಲಸಿಕೆ ನೀಡಲು ಗುರಿ ಹೊಂದಲಾಗಿದ್ದು, ಇದರಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಒಳಗೊಂಡಿರುತ್ತಾರೆ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಿಲ್ಲೆಯ ನಾಲ್ಕು ಸಾರ್ವಜನಿಕ ಆಸ್ಪತ್ರೆಗಳು, ಎರಡು ಸಮುದಾಯ ಆರೋಗ್ಯ ಸಂಸ್ಥೆ ಹಾಗೂ 50 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಠಾನ ಮಾಡಲಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ 65,000 ರೋಗಿಗಳು ಇದರ ಪ್ರಯೋಜನ ಪಡೆದಿದ್ದಾರೆ. 

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೊಂದಣಿ ಪ್ರಾರಂಭವಾಗಿದ್ದು, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲ್ಲೂಕಿನ ಟಿ.ಎ.ಪಿ.ಸಿ.ಎಮ್.ಎಸ್., ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಎ.ಪಿ.ಎಂ.ಸಿ., ಮಾರುಕಟ್ಟೆ ಇಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ.2 020 ಮುಂಗಾರು ಬೆಳೆ ಸಮೀಕ್ಷೆಯಲ್ಲಿ 4,75,529 ಪ್ಲಾಟ್‍ಗಳ ಗುರಿಗೆ ಶೇ.100 ಪ್ರಗತಿಯಾಗಿರುತ್ತದೆ. 

ಹಿಂಗಾರು ಬೆಳೆ ಸಮೀಕ್ಷೆ ಪ್ರಗತಿಯಲ್ಲಿದ್ದು, ರೈತರ ಆಪ್‍ನಲ್ಲಿ 281 ಪ್ಲಾಟ್ ಮತ್ತು ಖಾಸಗಿ ನಿವಾಸಿಗಳ ಆಪ್‍ನಲ್ಲಿ 47,404 ಪ್ಲಾಟ್‍ಗಳ ಮಾಹಿತಿ ಅಪ್‍ಲೋಡ್ ಮಾಡಲಾಗಿದೆ.

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಹಂತದ ಸಮಿತಿಯಲ್ಲಿ ಕುಕ್ಕುಟ ಉದ್ಯಮವು ಆಯ್ಕೆಯಾಗಿದ್ದು, ಯೋಜನೆಯು ಫಲಾನುಭವಿಗಳ ಆಯ್ಕೆ ಹಂತದಲ್ಲಿದೆ.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಬೆಳೆ ಸಮೀಕ್ಷೆಯಲ್ಲಿ ನೋಂದಾಯಿಸಿರುವ ಹೂ ಬೆಳೆಗಾರರಿಗೆ ಪರಿಹಾರಧನ ಕಾರ್ಯಕ್ರಮದಡಿ ಡಿಸೆಂಬರ್ ಅಂತ್ಯಕ್ಕೆ ಒಟ್ಟು 3340 ಜನ ಹೂ ಬೆಳೆಗಾರರಿಗೆ ರೂ.271.72 ಲಕ್ಷ, ತರಕಾರಿ ಬೆಳೆಗಾರ ಕಾರ್ಯಕ್ರಮದಡಿ 434 ಜನ ತರಕಾರಿ ಬೆಳೆಗಾರರಿಗೆ ರೂ.26.156 ಲಕ್ಷ ಮತ್ತು ಹಣ್ಣು ಬೆಳೆಗಾರರಿಗೆ ಸಹಾಯಧನ ಕಾರ್ಯಕ್ರಮದಡಿ 2855 ಜನ ಹಣ್ಣು ಬೆಳೆಗಾರರಿಗೆ ಒಟ್ಟು ರೂ.227.15 ಲಕ್ಷ ಪರಿಹಾರಧನ ವಿತರಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8 ತೋಟಗಾರಿಕೆ ಕ್ಷೇತ್ರಗಳಿದ್ದು, ಕೆ.ಪೂಜೇನಹಳ್ಳಿ, ದೊಡ್ಡಬಳ್ಳಾಪುರ ಮತ್ತು ತಿಪ್ಪಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಕಿರು ಜಲಾನಯನ ಮಾದರಿಯಂತೆ ನೀರು ಸಂಗ್ರಹಣೆ ಮಾಡಲಾಗುತ್ತಿದೆ. 

ಘಟಕಗಳ ನಿರ್ಮಾಣ, ಉತ್ತಮ ಗುಣಮಟ್ಟದ ಸಸಿಗಳ ಉತ್ಪಾದನೆ ಹಾಗೂ ಮಾರಾಟ, ಅನುಪಯುಕ್ತ ಹಣ್ಣಿನ ಮರಗಳ ಪುನಃಶ್ಚೇತನ ಹಾಗೂ ತೋಟಗಾರಿಕೆ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲಾಗುತ್ತಿದೆ.

ಹನಿ ನೀರಾವರಿ ಯೋಜನೆಯಡಿ 2020-21ನೇ ಸಾಲಿಗೆ ಆರ್ಥಿಕ ರೂ. 966.00 ಲಕ್ಷ ಹಾಗೂ ಭೌತಿಕ 1228.10 ಹೆಕ್ಟೇರ್‍ಗಳ ಗುರಿ ನಿಗದಿಯಾಗಿದ್ದು, ಡಿಸೆಂಬರ್ ಮಾಹೆಯ ಅಂತ್ಯಕ್ಕೆ ಭೌತಿಕ 399.12 ಹೆಕ್ಟೇರ್ ಹಾಗೂ ಆರ್ಥಿಕ ರೂ.325.96 ಲಕ್ಷ ಪ್ರಗತಿ ಸಾಧನೆಯಾಗಿದ್ದು, 500 ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೇಷ್ಮೆ ಹುಳು ಸಾಕಾಣಿಕಾ ಮನೆಗಾಗಿ ರೂ. 197.10 ಲಕ್ಷ ಸಹಾಯಧನವನ್ನು 74 ರೇಷ್ಮೆ ಬೆಳೆಗಾರರಿಗೆ ವಿತರಿಸಲಾಗಿದೆ. ದ್ವಿತಳಿ ರೇಷ್ಮೆ ಮೊಟ್ಟೆ ಚಾಕಿಗೆ ರೂ:6.458 ಲಕ್ಷ ಪ್ರೋತ್ಸಾಹಧನವನ್ನು ರೂ:6.458 ಲಕ್ಷಗಳ 459 ರೇಷ್ಮೆ ಬೆಳೆಗಾರರಿಗೆ ವಿತರಿಸಲಾಗಿದೆ.

ಮೇವು ನಷ್ಟವಾಗುವುದನ್ನು ತಪ್ಪಿಸಲು ಜಿಲ್ಲೆಯ ಒಟ್ಟು 67 ಪ್ರಗತಿಪರ ರೈತರಿಗೆ ಮೇವು ಕಟಾವು ಯಂತ್ರವನ್ನು ಆರ್.ಕೆ.ವಿ.ವೈ ಯೋಜನೆಯಡಿಯಲ್ಲಿ ಅಕ್ಟೋಬರ್-2020ರಲ್ಲಿ ವಿತರಿಸಲಾಗಿದೆ.

ರಾಷ್ಷ್ರೀಯ ರೋಗ ನಿಯಂತ್ರಣಾ ಯೋಜನೆಯಡಿಯಲ್ಲಿ ಮೊದಲನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು 2020ರ ಅಕ್ಟೋಬರ್ 12 ರಿಂದ ನವೆಂಬರ್ 24ರವರೆಗೆ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 157077 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.

ಪಶುಸಂಗೋಪನೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿಯಲ್ಲಿ ಪಶುಪಾಲನಾ ಇಲಾಖೆ ವತಿಯಿಂದ ಒಟ್ಟು 8674 ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು ವಿತರಿಸಿ, ರೂ. 1201.14 ಲಕ್ಷಗಳ ಆರ್ಥಿಕ ನೆರವು ನೀಡಲಾಗಿದೆ.

ಮೀನುಗಾರಿಕೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯನ್ನು 2020-21 ಸಾಲಿನಿಂದ ಅನುಷ್ಠಾನಗೊಳಿಸುತ್ತಿದ್ದು, ಸದರಿ ವರ್ಷಕ್ಕೆ ರೂ.257.50 ಲಕ್ಷಗಳ ಕ್ರಿಯಾ ಯೋಜನೆ ಅನುಮೋದನೆ ಪಡೆಯಲಾಗಿದ್ದು, ಸದರಿ ಯೋಜನೆಯಡಿ ಜಿಲ್ಲೆಯಲ್ಲಿ ಒಂದು ಐಸ್ ಪ್ಲಾಂಟ್, ಹಾಗೂ 5 ಆರ್.ಎ.ಎಸ್ ಘಟಕಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿದೆ.

ಕಂದಾಯ ಇಲಾಖೆಯನ್ನು ಜನರ ಹತ್ತಿರ ಕೊಂಡೊಯ್ಯಲು ಇಲಾಖಾ ವತಿಯಿಂದ ನೂತನವಾಗಿ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ತಿಂಗಳ ಮೂರನೇ ಶನಿವಾರದಂದು ಜಿಲ್ಲಾಧಿಕಾರಿಗಳು ಹಾಗೂ ಅಧೀನ ಅಧಿಕಾರಿಗಳು ನಿಗದಿತ ಹಳ್ಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಬಗೆಹರಿಸಲಿರುತ್ತಾರೆ. ನಂತರ ಹಳ್ಳಿಯಲ್ಲೇ ವಾಸ್ತವ್ಯ ಮಾಡಲಿದ್ದಾರೆ.

2020ನೇ ಸಾಲಿನ ಆಗಸ್ಟ್ ಮತ್ತು ಸೆಪ್ಟಂಬರ್ ಮಾಹೆಗಳಲ್ಲಿ ಉಂಟಾದ ಅತಿವೃಷ್ಠಿಯಿಂದ ಸಂಭವಿಸಿದ ಬೆಳೆ ಹಾನಿಗೆ ಒಟ್ಟು 9,22,631 ರೈತರಿಗೆ ರೂ.709.67 ಕೋಟಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.

ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ ಯೋಜನೆಯಡಿ 36,800, ಸಂಧ್ಯಾ ಸುರಕ್ಷಾ ಯೋಜನೆಯಡಿ 48,912, ವಿಧವಾ ವೇತನ ಯೋಜನೆಯಡಿ 32,623, ಅಂಗವಿಕಲರ ವೇತನ ಯೋಜನೆಯಡಿ 13,461 ಫಲಾನುಭವಿಗಳು, ಮನಸ್ವಿನಿ ಯೋಜನೆಯಡಿ 1,725 ಮತ್ತು ಮೈತ್ರಿ ಯೋಜನೆಯಡಿ 49, ಎಫ್.ಡಬ್ಲ್ಯೂ.ಪಿ.-15, ಆಸಿಡ್ ದಾಳಿ-1 ಒಟ್ಟು 1,33,586 ಫಲಾನುಭವಿಗಳು ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ.

ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಚಯಡಿ 60 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಯಾವುದೇ ಅರ್ಜಿ ಇಲ್ಲದೇ ಪಿಂಚಣಿ ನೀಡಲು ಕ್ರಾಂತಿಕಾರಿಕ ಕಾರ್ಯಕ್ರಮ ಮನೆ ಬಾಗಿಲಿಗೆ ಮಾಸಾಶನ ಅಭಿಯಾನವನ್ನು ದಿನಾಂಕ; 27.01.2021 ರಿಂದ ಪ್ರಾರಂಭಿಸಲಾಗುತ್ತಿದೆ.

ರಾಜ್ಯದಲ್ಲಿ ಶಾಲೆ, ಅಂಗನವಾಡಿ, ವಿದ್ಯಾರ್ಥಿ ನಿಲಯ, ಸ್ಮಶಾನ ಮತ್ತು ಆಶ್ರಯ ಯೋಜನೆ ಇತ್ಯಾದಿ ಸಾರ್ವಜನಿಕ ಉದ್ದೇಶಗಳಿಗೆ ಸರ್ಕಾರದ ಮಟ್ಟದಲ್ಲಿ 4,550 ಎಕರೆ ಜಮೀನು ಕಾಯ್ದಿರಿಸಲಾಗಿರುತ್ತದೆ. 

ಪ್ರಸಕ್ತ ಸಾಲಿನಲ್ಲಿ ಈ ಜಿಲ್ಲೆಯಲ್ಲಿ 1021 ಕಂದಾಯ ಅದಾಲತ್ ಕಾರ್ಯಕ್ರಮಗಳು ನಡೆಸಲಾಗಿದ್ದು, 22,252 ಅರ್ಜಿಗಳು ಸಾರ್ವಜನಿಕರಿಂದ ಸ್ವೀಕೃತಗೊಂಡಿದ್ದು, 21,235 ಅರ್ಜಿಗಳು ವಿಲೇವಾರಿಯಾಗಿವೆ.

2020-21ನೇ ಸಾಲಿನಲ್ಲಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 321 ಫಲಾನುಭವಿಗಳಿಗೆ ರೂ. 20,000ದಂತೆ ಪ್ರೋತ್ಸಾಹಧನ ನೀಡಲಾಗಿರುತ್ತದೆ ಹಾಗೂ ಅಂತ್ಯ ಸಂಸ್ಕಾರಕ್ಕಾಗಿ ನೆರವು ಯೋಜನೆಯಡಿ 365 ಫಲಾನುಭವಿಗಳಿಗೆ ರೂ. 5,000 ದಂತೆ ಸಹಾಯಧನ ನೀಡಲಾಗಿರುತ್ತದೆ.

ಸಕಾಲ ಯೋಜನೆಯಡಿ ಎಪ್ರಿಲ್ 2020ರ ಮಾಹೆಯಿಂದ ಡಿಸೆಂಬರ್ 2020ರವರೆಗೆ 4,26,292 ಅರ್ಜಿಗಳನ್ನು ವಿವಿಧ ಇಲಾಖೆಗಳಲ್ಲಿ ಸ್ವೀಕರಿಸಲಾಗಿದ್ದು, 4,26,271 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 

ಜಿಲ್ಲಾಡಳಿತ ವತಿಯಿಂದ ನೀಲಗಿರಿ ಮರಗಳ ತೆರವು ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 62711 ಎಕರೆ ನೀಲಗಿರಿ ಮರಗಳು ಬೆಳೆದು ನಿಂತಿದ್ದು, ಈ ಪೈಕಿ 5763 ಎಕರೆ ಪ್ರದೇಶದಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಲಾಗಿದೆ. ಈ ಸಂಬಂಧ ಸಾರ್ವಜನಿಕರು ಹಾಗೂ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀಲಗಿರಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕೌಶಲ್ಯಾಭಿವೃದ್ಧಿ‌ ಬೀದಿಬದಿ ವ್ಯಾಪಾರಿಗಳಿಗೆ ಆತ್ಮನಿರ್ಭರ್ ಯೋಜನೆಯಲ್ಲಿ ರೂ. 10,000 ಸಾಲವನ್ನು ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 2892 ಬೀದಿ ವ್ಯಾಪಾರಿಗಳನ್ನು ಗುರುತಿಸಿ, ಅವರಿಗೆ ಗುರುತಿನ ಚೀಟಿಯನ್ನು ನೀಡಲಾಗಿರುತ್ತದೆ ಅವರಲ್ಲಿ 1818 ಫಲಾನುಭವಿಗಳಿಗೆ ಸಾಲ ಮಂಜೂರಾಗಿದ್ದು, 1361 ಫಲಾನುಭವಿಗಳಿಗೆ ಸಾಲ ವಿತರಣೆಯಾಗಿರುತ್ತದೆ. 

ಶಿಕ್ಷಣ ವಿದ್ಯಾಗಮವೆಂಬ ನಿರಂತರ ಕಲಿಕಾ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಅನುಷ್ಠಾನಗೊಳಿಸಿದ್ದು, ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಮೂಲಕ ಮಾರ್ಗದರ್ಶಿ ಶಿಕ್ಷಕರ ಸಹಭಾಗಿತ್ವದಲ್ಲಿ ನಿರಂತರ ಕಲಿಕೆಗೆ ಪ್ರೇರೆಪಿಸಿದೆ.

ರಾಜ್ಯ ಸರ್ಕಾರವು ಹೆಣ್ಣು ಭ್ರೂಣ ಹತ್ಯೆ ತಡೆಯಲು ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದುವರೆಗೆ ಒಟ್ಟು 46201 ಬಾಂಡ್‍ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.

ವಿಕಲಚೇತನರಿಗಾಗಿ ಪೋಷಣಾ ಭತ್ಯೆ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ, ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರುಪಾವತಿ, ವಿಕಲಚೇತನ ವ್ಯಕ್ತಿಗಳನ್ನು ಸಾಮಾನ್ಯ ವ್ಯಕ್ತಿ ಮದುವೆಯಾದಲ್ಲಿ ಪ್ರೋತ್ಸಾಹಧನ ನೀಡುವ ಯೋಜನೆ, ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ ಆರೈಕೆ ಭತ್ಯೆ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್, ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಸೇರಿದಂತೆ ಇತರೆ ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ.

ಕೋವಿಡ್-19 ಸೋಂಕು ಹರಡುವಿಕೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾದ ಆಸಕ್ತ 270 ಸಾಹಿತಿ ಮತ್ತು ಕಲಾವಿದರಿಗೆ ತಲಾ ರೂ.2000/- ನೇರವಾಗಿ ವರ್ಗಾಯಿಸಲಾಗಿದೆ. ಕಷ್ಟ ಪರಿಸ್ಥಿತಿಯಲ್ಲಿರುವ 570 ಮಂದಿ ಸಾಹಿತಿ ಮತ್ತು ಕಲಾವಿದರಿಗೆ ರೂ.2000/-ಗಳ ಮಾಸಾಶನ ಹಾಗೂ ರೂ.500/-ಗಳ ವಿಧವಾ ಮಾಸಾಶನವನ್ನು ಸಾಹಿತಿ ಮತ್ತು ಕಲಾವಿದರ ಖಾತೆಗಳಿಗೆ ಪಾವತಿಸಲಾಗಿದೆ.  

ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2097 ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ರೂ.282.44 ಲಕ್ಷವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ. 88 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, 5 ಸಮುದಾಯ ಶೌಚಾಲಯಗಳ ಕಾಮಗಾರಿ ಪ್ರಗತಿ ಹಂತದಲ್ಲಿದೆ. 2020-21ನೇ ಸಾಲಿಗೆ 965 ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಜಿಲ್ಲೆಯಲ್ಲಿ 22 ಘನ ತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯನಿರ್ವಹಿಸುತ್ತಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಇದುವರೆಗೆ 15.27 ಲಕ್ಷಗಳ ಮಾನವ ದಿನಗಳನ್ನು ಸೃಜನೆ ಮಾಡಲಾಗಿದ್ದು, 33424  ಕುಟುಂಬಗಳಿಗೆ ಉದ್ಯೋಗ ನೀಡಲಾಗಿರುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಉದ್ಯೋಗ ಒದಗಿಸಲು ಒಟ್ಟು 5000 ಕೈತೋಟ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಇಲ್ಲಿಯವರೆಗೆ 3407 ಕೈತೋಟ ನಿರ್ಮಾಣ ಮಾಡಲಾಗಿರುತ್ತದೆ. 4912 ಸೋಕ್ ಪಿಟ್‍ಗಳ ನಿರ್ಮಾಣ ಮಾಡಲಾಗಿರುತ್ತದೆ.  

ರೈತರಿಗೆ ಕೃಷಿ ಚಟುವಟಿಕೆಗಳನ್ನು ಒದಗಿಸುವ ಸಲುವಾಗಿ ಬದು ನಿರ್ಮಾಣ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಇಲ್ಲಿವರೆವಿಗೆ 861 ಬದು ನಿರ್ಮಾಣ ಕಾಮಗಾರಿಗಳನ್ನು ಮಾಡಲಾಗಿರುತ್ತದೆ ಮತ್ತು 561 ಕೃಷಿಹೊಂಡ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ.  ಅಂತರ್ಜಲ ಮಟ್ಟ ಹೆಚ್ಚಿಸಲು ಜಲಾಮೃತ ಯೋಜನೆಯಡಿ 60 ಕೆರೆಗಳ ಅಭಿವೃದ್ದಿ ಪಡಿಸಲು ಕ್ರಮಕೈಗೊಂಡು ಒಟ್ಟಾರೆ ಇಲ್ಲಿವರೆಗೆ ರೂ. 4681.94 ಲಕ್ಷಗಳು ಖರ್ಚು ಮಾಡಲಾಗಿರುತ್ತದೆ.

ವಸತಿ ಯೋಜನೆಯಡಿ 2020-21ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 589 ಮನೆಗಳನ್ನು ಪೂರ್ಣಗೊಳಿಸಲಾಗಿದೆ.

ಪೌರಾಡಳಿತ ನಗರ ವಸತಿ ಯೋಜನೆಯಲ್ಲಿ ನೆಲಮಂಗಲ ನಗರಸಭೆಗೆ 9.50 ಎಕರೆ, ದೊಡ್ಡಬಳ್ಳಾಪುರ ನಗರಸಭೆಗೆ 10 ಎಕರೆ, ಹೊಸಕೋಟೆ ನಗರಸಭೆಗೆ 8 ಎಕರೆ ಜಮೀನನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ರಹಿತರಿಗಾಗಿ ಗುರುತಿಸಿದೆ, ಗುಂಪು ಮನೆಗಳ ಸಮುಚ್ಛಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಲೋಕೋಪಯೋಗಿ ಮತ್ತು ಬಂದರು ಜಲಸಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 177 ರಸ್ತೆ ಕಾಮಗಾರಿ ಅನುಮೋದನೆಯಾಗಿದ್ದು, ಒಟ್ಟಾರೆ ಅಂದಾಜು ಮೊತ್ತ ರೂ. 169.20 ಕೋಟಿಗಳಾಗಿರುತ್ತವೆ. ಈ ಅನುದಾನದಡಿ ಸುಮಾರು 447.83 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 336.71 ಕಿ.ಮೀ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿರುತ್ತದೆ.

ಸಮಾಜ ಕಲ್ಯಾಣ ಪರಿಶಿಷ್ಟ ಜಾತಿ ಉಪಯೋಜನೆಗಳಡಿ ವಿವಿಧ ಇಲಾಖೆಗಳಿಗೆ ಡಿಸೆಂಬರ್ ವರೆಗೆ ರೂ 3602.12 ಲಕ್ಷಗಳನ್ನು ಖರ್ಚು ಮಾಡಲಾಗಿದೆ.  ಗಿರಿಜನ ಉಪಯೋಜನೆಯಡಿ ರೂ ರೂ 605.95 ಲಕ್ಷ ಖರ್ಚು ಮಾಡಲಾಗಿದೆ.

220/66/11ಕೆವಿ ಸ್ವೀಕರಣಾ ಕೇಂದ್ರ ದೇವನಹಳ್ಳಿ ಹಾರ್ಡ್‍ವೇರ್ ಪಾರ್ಕ್‍ನಿಂದ ಹೊಸಕೋಟೆಯವರೆಗೂ ಗ್ರಿಡ್ ಅನ್ನು ಉನ್ನತೀಕರಣಗೊಳಿಸಲು ಹೊಸ 220ಕೆವಿ ಮಾರ್ಗಗಳ ಕಾಮಗಾರಿಯು ಪ್ರಗತಿಯಲ್ಲಿದೆ.

ವಿದ್ಯುತ್ ಪರಿವರ್ತಕಗಳ ಉನ್ನತೀಕರಣ ಕಾಮಗಾರಿಯು ಜಡಿಗೇನಹಳ್ಳಿ, ವೋಲ್ವೊ, ನಂದಗುಡಿ ಮತ್ತು ಸೂಲಿಬೆಲೆ ಉಪ ಕೇಂದ್ರಗಳಲ್ಲಿ ಪೂರ್ಣಗೊಂಡಿರುತ್ತದೆ.

ದೊಡ್ಡಬಳ್ಳಾಪುರ ತಾಲ್ಲೂಕು, ತೂಬಗೆರೆ ಹೋಬಳಿ, ಮಾಚಗೊಂಡನಹಳ್ಳಿ ಗ್ರಾಮದ ಸ.ನಂ.148 ರಲ್ಲಿ 2-00 ಎಕರೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಉಪಕೇಂದ್ರ ನಿರ್ಮಿಸಲು 2.00 ಎಕರೆ ಜಮೀನನ್ನು ಮಂಜೂರು ಮಾಡಲು ಸರ್ಕಾರದಿಂದ ಪೂರ್ವ ಅನುಮೋದನೆಯಾಗಿರುತ್ತದೆ.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 7 ಗಂಟೆಯ ನಿರಂತರ ವಿದ್ಯುತ್ ಪೂರೈಸಲು ಹಾಗೂ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಪೂರೈಸಲು ವಿದ್ಯುತ್ ಪರಿವರ್ತಕಗಳ ಉನ್ನತೀಕರಣ ಕಾಮಗಾರಿಯು ದೊಡ್ಡಬೆಳವಂಗಲ, ಗುಂಡಮಗೆರೆ, ತೂಬಗೆರೆ ಮತ್ತು ಕನಸವಾಡಿ ಉಪಕೇಂದ್ರಗಳಲ್ಲಿ ಪ್ರಗತಿಯಲ್ಲಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 220/66ಕೆವಿ ಸ್ವೀಕರಣಾ ಕೇಂದ್ರದಲ್ಲಿ ಅಧಿಕ 1×100ಎಂ.ವಿ.ಎ ವಿದ್ಯುತ್ ಪರಿವರ್ತಕದ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುದ್ದೀಕರಣ 10 ಕಾಮಗಾರಿಗಳು ಪೂರ್ಣಗೊಂಡಿದ್ದು, 34 ಕಾಮಗಾರಿಗಳು ಪ್ರಗತಿಯಲ್ಲಿವೆ.

ಸಣ್ಣ ನೀರಾವರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ 30 ಕೆರೆಗಳಿಗೆ ಕೆ.ಆರ್.ಪುರಂ ಎಸ್.ಟಿ.ಪಿಯಿಂದ ಸಂಸ್ಕರಿಸಿದ 40 ಎಂ.ಎಲ್.ಡಿ. ತ್ಯಾಜ್ಯ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ 100 ಕೋಟಿ ರೂ.ಗಳಿಗೆ ಕೈಗೊಳ್ಳಲಾಗಿದ್ದು, ಪ್ರಸ್ತುತ ಕೆರೆಗಳಲ್ಲಿನ ಜಂಗಲ್ ತೆಗೆಯುವ ಮತ್ತು ಲೆವೆಲಿಂಗ್ ಕೆಲಸ ಪ್ರಗತಿಯಲ್ಲಿದ್ದು, ಕೆ.ಆರ್.ಪುರಂ, ಮೇಡಹಳ್ಳಿ ಮತ್ತು ಕಾಡುಗೋಡಿ ಸ್ಥಳಗಳಲ್ಲಿ ಜಾಕವೆಲ್ ಮತ್ತು ಪಂಪ್‍ಹೌಸ್ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವ ಹಂತದಲ್ಲಿರುತ್ತದೆ. ಇನ್ನೆರಡು ವರ್ಷಗಳಲ್ಲಿ ಹೊಸಕೋಟೆ ತಾಲ್ಲೂಕಿನ 30 ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ 23 ಎಕರೆ ಪ್ರದೇಶದಲ್ಲಿ ರೂ. 78 ಕೋಟಿ ವೆಚ್ಚದ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ ಹಾಗೂ ಸೆಂಟ್ರಲ್ ಪಾರ್ಕ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಸಹಕಾರ ಸಾಲಮನ್ನಾ ಯೋಜನೆಯಡಿಯಲ್ಲಿ 17,351 ರೈತ ಸದಸ್ಯರಿಗೆ ರೂ.8519.53 ಲಕ್ಷ ಪ್ರಯೋಜನ ಪಡೆದಿದ್ದು ಈ ಪೈಕಿ 16,293 ರೈತ ಸದಸ್ಯರಿಗೆ ರೂ.7627.55 ಲಕ್ಷಗಳು ಸರ್ಕಾರದಿಂದ ಬಿಡುಗಡೆಯಾಗಿದೆ. 

ದಕ್ಷಿಣ ಭಾರತ ಸಾರ್ವಜನಿಕರ ಸಾರಿಗೆ ವ್ಯವಸ್ಥೆಯನ್ನು ಉತ್ತಮಪಡಿಸುವ ಸಲುವಾಗಿ ಕೇಂದ್ರ ಸರಕಾರವು 90 ಮೀಟರ್ ಅಗಲದ ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ವೇ ನಿರ್ಮಾಣಕ್ಕಾಗಿ ಮಂಜೂರಾತಿ ನೀಡಿದ್ದು, ರಾಜ್ಯದ ಪ್ರಗತಿಗೆ ಮಹತ್ತರವಾಗಲಿದೆ.  ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ವೇ ಯೋಜನೆಯಡಿ ನಿರ್ಮಾಣ ಮಾಡಲು ಉದ್ದೇಶಿಸಿರುವ ರಸ್ತೆಯು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾಗಲಿದೆ. ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೊಟೆ ತಾಲ್ಲೂಕಿನ 13 ಗ್ರಾಮಗಳು, ಮಾಲೂರು ತಾಲ್ಲೂಕಿನ 22 ಗ್ರಾಮ, ಕೋಲಾರ ತಾಲ್ಲೂಕಿನ 2 ಗ್ರಾಮ, ಬಂಗಾರಪೇಟೆ ಮತ್ತು ಕೆ.ಜಿ.ಎಫ್ ತಾಲ್ಲೂಕುಗಳ 36 ಗ್ರಾಮ, ಮುಳಬಾಗಿಲು ತಾಲ್ಲೂಕಿನ 2 ಗ್ರಾಮ ಸೇರಿದಂತೆ ಉಭಯ ಜಿಲ್ಲೆಗಳ 75 ಗ್ರಾಮಗಳಲ್ಲಿ ಹಾದು ಹೋಗಲಿದೆ. ಇದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 

ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ವೇ ಯೋಜನೆಯು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಸಂಪರ್ಕ ಹೊಂದಲಿದ್ದು, ಈ ಮಾರ್ಗದ ಸುಗಮ ಸಂಚಾರ, ವಾಣಿಜ್ಯ ಹಾಗೂ ವಿಶೇಷವಾಗಿ ಕೈಗಾರಿಕಾ ರಂಗಗಳು ಅಭಿವೃದ್ದಿಗೆ ಸಹಕಾರಿಯಾಗಲಿದೆ. ಇದರಿಂದಾಗಿ ಉದ್ಯೋಗವಕಾಶಗಳು ಹೆಚ್ಚು ಲಭ್ಯವಾಗುವುದಲ್ಲಿದೇ ಪ್ರಯಾಣದ ಅವಧಿ ಉಳಿಯಲಿದೆ.

ದಾಬಸ್‍ಪೇಟೆಯಿಂದ ಹೊಸಕೋಟೆ ತಾಲ್ಲೂಕು ಕೊಳತ್ತೂರು ಗ್ರಾಮದವರೆಗೆ ಕೈಗೆತ್ತಿಕೊಂಡಿರುವ 80 ಕಿ.ಮೀ ಉದ್ದದ ರಸ್ತೆ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕಾಮಗಾರಿಯು ಜಿಲ್ಲೆಯ ನಾಲ್ಕು ತಾಲ್ಲೂಕುಗಳ 72 ಗ್ರಾಮಗಳು ಒಳಪಡಲಿದ್ದು, 327.27 ಹೆಕ್ಟೇರ್ ವಿಸ್ತೀರ್ಣದ ಜಮೀನು ಭೂಸ್ವಾಧೀನವಾಗಲಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಹೊಸಕೋಟೆ ತಾಲ್ಲೂಕುಗಳಲ್ಲಿ ಹಾದುಹೋಗುವ ಈ ರಸ್ತೆ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ.

ಭಾರತ ಇಂದು ಜಗತ್ತಿನಲ್ಲಿ ಪ್ರಬುದ್ಧ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಯುವಜನರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಅಭಿವೃದ್ಧಿಗೆ ನೆರವಾಗಬೇಕು ಎಂದು ಕೇಳಿಕೊಳ್ಳುತ್ತೇನೆ.

ದೇಶದ ನಾಗರೀಕರಾಗಿ ಭವ್ಯ ಪರಂಪರೆ, ಸಂಸ್ಕೃತಿ ಇವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಯೋಚಿಸಬೇಕಾಗಿದೆ. ಜಾತಿ, ಧರ್ಮ, ಭಾಷೆ, ಪಂಗಡಗಳ ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ದಿಕ್ಕಿನಲ್ಲಿ ನಾವು ಒಟ್ಟಾಗಿ ಶ್ರಮಿಸೋಣ. ನಮ್ಮ ಈ ಸುಂದರ ಪ್ರಜಾಪ್ರಭುತ್ವದ ಬೇರುಗಳನ್ನು ಇನ್ನಷ್ಟು ಬಲಗೊಳಿಸೋಣ ಎಂದು ಹೇಳುತ್ತಾ, ಮತ್ತೊಮ್ಮೆ ತಮಗೆಲ್ಲರಿಗೂ ಗಣರಾಜ್ಯೋತ್ಸವ ಶುಭಾಶಯಗಳು ಎಂದರು.

ಈ ವೇಳೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ದೇವನಹಳ್ಳಿ ಶಾಸಕ ನಿಸರ್ಗನಾರಾಯಣಸ್ವಾಮಿ‌ ಸೇರಿದಂತೆ ಅನೇಕರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

ರಾಜಕೀಯ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ ಆಯ್ಕೆ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ

ನಗರಸಭೆ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯಲ್ಲಿ ವಿ.ಎಸ್.ರವಿಕುಮಾರ್ Doddaballapura

[ccc_my_favorite_select_button post_id="99525"]
Doddaballapura; ಕೃಷ್ಣ ಬೈರೇಗೌಡ ಆರ್ಭಟಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿ.. ಮಹಿಳಾ ಸಿಬ್ಬಂದಿ ಕಣ್ಣೀರು Video ನೋಡಿ

Doddaballapura; ಕೃಷ್ಣ ಬೈರೇಗೌಡ ಆರ್ಭಟಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿ.. ಮಹಿಳಾ ಸಿಬ್ಬಂದಿ ಕಣ್ಣೀರು Video

ಬಾಯಿಗೆ ಬಂದಂತೆ ಉತ್ತರ ಕೊಡುವುದನ್ನು ಬಿಟ್ಟು ಕನಿಷ್ಠ ನನ್ನ ಮಾತಿಗೆ ಮರ್ಯಾದೆ ನೀಡಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶಿಲ್ದಾರ್ ವಿರುದ್ಧ ಹರಿಹಾಯ್ದರು. Doddaballapura

[ccc_my_favorite_select_button post_id="99562"]
Ayyappaswamy garland: ಸಿಲಿಂಡರ್ ಸ್ಪೋಟ ಪ್ರಕರಣ: ದುರ್ಘಟನೆಯಿಂದ ಬೇಸತ್ತು ಅಯ್ಯಪ್ಪ ಮಾಲೆ ತೆಗೆದ ಸ್ವಾಮಿ.. ಕಣ್ಣೀರು

Ayyappaswamy garland: ಸಿಲಿಂಡರ್ ಸ್ಪೋಟ ಪ್ರಕರಣ: ದುರ್ಘಟನೆಯಿಂದ ಬೇಸತ್ತು ಅಯ್ಯಪ್ಪ ಮಾಲೆ ತೆಗೆದ

ಉಳಿದ 7 ಜನರ ಜೀವ ಉಳಿದರೆ ಮಾತ್ರ ಮುಂದೆ ಅಯ್ಯಪ್ಪ ಮಾಲೆ ಧರಿಸುತ್ತೇನೆ ಎಂದು ಮಂಜುನಾಥ್ ಕಣ್ಣೀರು ಹಾಕಿದ್ದಾರೆ. Ayyappaswamy garland

[ccc_my_favorite_select_button post_id="99555"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
Suicide; ಮೊಬೈಲ್ ನೋಡ ಬೇಡ ಎಂದಿದಕ್ಕೇ ಕೋಪ: ವಿಷ ಸೇವಿಸಿ ಬಾಲಕಿ ಆತ್ಮಹತ್ಯೆ..!

Suicide; ಮೊಬೈಲ್ ನೋಡ ಬೇಡ ಎಂದಿದಕ್ಕೇ ಕೋಪ: ವಿಷ ಸೇವಿಸಿ ಬಾಲಕಿ ಆತ್ಮಹತ್ಯೆ..!

ಕೂಡಲೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾಳೆ. Suicide

[ccc_my_favorite_select_button post_id="99548"]
Accident| Doddaballapura: ಕಾರು ಡಿಕ್ಕಿ.. ದೇವರ ಪೂಜೆಗೆ ಹೂ ಬಿಡಿಸುತ್ತಿದ್ದ ಮಹಿಳೆ ದುರ್ಮರಣ

Accident| Doddaballapura: ಕಾರು ಡಿಕ್ಕಿ.. ದೇವರ ಪೂಜೆಗೆ ಹೂ ಬಿಡಿಸುತ್ತಿದ್ದ ಮಹಿಳೆ ದುರ್ಮರಣ

ಗೌರಿಬಿದನೂರು ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆ ಬದಿ ಅಳವಡಿಸಿದ್ದ ತಂತಿ ಬೇಲಿ ನುಗ್ಗಿ ಬಂದ ಡಿಕ್ಕಿ ಹೊಡೆದ Accident

[ccc_my_favorite_select_button post_id="99558"]

ಆರೋಗ್ಯ

ಸಿನಿಮಾ

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ ತೆಲುಗು ಚಿತ್ರರಂಗ..!

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ

ಸಭೆ ಯಶಸ್ವಿಯಾಗಿಲ್ಲ ಎನ್ನಲಾಗುತ್ತಿದೆ. ಬೆನಿಫಿಟ್ ಶೋಗಳಿಗೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ Pushpa 2

[ccc_my_favorite_select_button post_id="99541"]
error: Content is protected !!