ದೊಡ್ಡಬಳ್ಳಾಪುರ: ಪ್ರಜ್ಞಾವಂತ ಆಹಾರವಾದ ಸಿರುಧಾನ್ಯದ ಕುರಿತು ವ್ಯಾಪಕ ಪ್ರಚಾರವನ್ನು ನೀಡಲು, ಸಾವಯವ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚಿನ ಆಧ್ಯತೆ ನೀಡಲು ಜ.23ರಂದು ನಗರದಲ್ಲಿ ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ ಎಂಬ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ತಿಳಿಸಿದರು.
ನಗರದ ಕೃಷಿ ಇಲಾಖೆಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಸಾವಯವ ಉತ್ಪನ್ನಗಳ ಬಳಕೆ ಅವಶ್ಯಕವಾಗಿದ್ದು, ಸಾವಯವ-ಸಿರಿಧಾನ್ಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜ.23ರಂದು ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆಗೆ ಮ್ಯಾರಥಾನ್ ಕಾರ್ಯಕ್ರಮವನ್ನು ನಗರದ ಟಿಬಿ ವೃತ್ತದಿಂದ ನಡೆಸಲಾಗುತ್ತಿದೆ.
ಕಾರ್ಯಕ್ರಮವನ್ನು ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಲಿದ್ದಾರೆ. ಮ್ಯಾರಥಾನ್ ನಲ್ಲಿ ಸುಮಾರು 500ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದು ಜ.22ರಿಂದ ನೊಂದಣಿ ಕಾರ್ಯ ನಡೆಯಲಿದೆ. ಜ.23ರ ಬೆಳಗ್ಗೆ 7ಗಂಟೆಗೆ ಮ್ಯಾರಥಾನ್ ಆರಂಭವಾಗಲಿದ್ದು ಭಾಗವಹಿಸುವವರಿಗೆ ಟಿಶರ್ಟ್ ನೀಡಲಾಗುತ್ತಿದೆ. ಟಿಬಿ ವೃತ್ತದಿಂದ ಆರಂಭವಾಗುವ ಮ್ಯಾರಥಾನ್ ಕೋರ್ಟ್ ರಸ್ತೆ, ತಾಲೂಕು ಕಚೇರಿ ರಸ್ತೆ, ಬಸವ ಭವನದ ಮೂಲ ಮೂರು ಕಿಮಿ ಸಾಗಿ ಟಿಬಿ ವೃತ್ತದಲ್ಲಿ ಕೊನೆಯಾದಲಿದೆ ಎಂದರು.
ಅಲ್ಲದೆ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ರೈತರ ಕೊಡುಗೆ ಅಪಾರ. ಅವರ ಮನವೊಲಿಸಿ ಸಾವಯವ ಕೃಷಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜ.26ರಂದು ತಾಲೂಕಿನ ಹಾಡೋನಹಳ್ಳಿಯ ಕೇವಿಕೆಯಲ್ಲಿ ಸಿರಿ ಧಾನ್ಯ ಹಬ್ಬ ಮತ್ತು ಕಿಸಾನ್ ಮೇಳ -2021 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಜನ ಪ್ರತಿನಿಧಿಗಳು, ರೈತರು, ರೈತ ಮಹಿಳೆಯರು, ಸಾವಯವ / ಸಿರಿಧಾನ್ಯ ಬೆಳೆಗಾರರು, ರೈತ ಸಂಘ, ಕೃಷಿಕ ಸಮಾಜ, ರೈತ ಉತ್ಪಾದಕ ಸಂಘಗಳು ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ರೈತರು ಮತ್ತು ವಿಜ್ಞಾನಿಗಳು ನಡುವೆ ವಿಚಾರ ಸಂಕೀರ್ಣ, ವಸ್ತು ಪ್ರದರ್ಶನ, ವಿಚಾರ ವಿನಿಮಯ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಎನ್.ಸುಶೀಲಮ್ಮ, ತಾಂತ್ರಿಕ ಅಧಿಕಾರಿ ರೂಪ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.