Site icon Harithalekhani

ದೊಡ್ಡಬಳ್ಳಾಪುರ: ಕಾರ್ಮಿಕನ ಮಗಳ ಸಾಧನೆಯ ಸನ್ಮಾನಿಸಿದ ವಿಜೇತ ಫ್ಯಾಬ್ ಇಂಜಿನಿಯರಿಂಗ್..!

ದೊಡ್ಡಬಳ್ಳಾಪುರ: ತನ್ನ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕನ ಮಗಳ ಸಾಧನೆಯನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಮೂಲಕ ವಿಜೇತ ಫ್ಯಾಬ್ ಇಂಜಿನಿಯರಿಂಗ್  ಇತರ ಕಾರ್ಖಾನೆಗಳಿಗೆ‌ ಮಾದರಿಯಾಗಿದೆ.

ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ವಿಜೇತ ಫ್ಯಾಬ್ ಇಂಜಿನಿಯರಿಂಗ್ ಕಾರ್ಖಾನೆಯಲ್ಲಿ ಗುಣಮಟ್ಟ ಪರಿಶೀಲಕನಾಗಿ ಕಾರ್ಯನಿರ್ವಹಿಸುತ್ತಿರುವ ಮಹಾರಾಷ್ಟ್ರ ಮೂಲದ ವಿಜಯ್ ಎನ್ನುವವರ ಮಗಳಾದ ಕುಮಾರಿ ಪ್ರಿಯ ಎಸ್ಎಸ್ಎಲ್ಸಿ ಪರೀಕ್ಷೆ ಶೇ.97.4 ಅಂಕಗಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರಣರಾಗಿದ್ದಾರೆ.ಅಲ್ಲದೆ, ಆಕೆಯ ಮಾತೃ ಭಾಷೆ ಮರಾಠಿಯಾದರು ಕನ್ನಡ ಭಾಷೆಯಲ್ಲಿ 123 ಅಂಕಗಳಿಸಿರುವ  ಸಾಧನೆಯನ್ನು ತಿಳಿದ ಆಕೆಯನ್ನು ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ಸಿ.ಅರ್.ನಾಗೇಶ್ ಆಕೆಯನ್ನು ಸನ್ಮಾನಿಸಿ,ಕಿರು ಕಾಣಿಕೆ ನೀಡಿದರು‌

ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮುತ್ತೇಗೌಡ, ಅಧಿಕಾರಿ ಜೋಶಿ, ಸಿಬ್ಬಂದಿಗಳಾದ ಪುನೀತ್,ಪ್ರವೀಣ್,ವಿನೋದ್ ಆನಂತ ಪದ್ಮನಾಭ ಚಾರಿ,ವೇಣು, ವಿಠಲ್,ಉಮೇಶ್,ಆದರ್ಶ,ಶ್ರೀನಿವಾಸ್,ಗುರುರಾಜ್ ಮತ್ತಿತರಿದ್ದರು.

Exit mobile version