ದೊಡ್ಡಬಳ್ಳಾಪುರ: ಸೀರೆ ಖರೀದಿ ವಿಳಂಬ ಮತ್ತಿತರರ ಸಮಸ್ಯೆಗಳಿಂದ ತೊಂದರೆಗೀಡಾಗಿರುವ ನೇಕಾರರ ನೆರವಿಗೆ ಬರಯವಂತೆ ಜವಳಿ ಸಚಿವ ಶ್ರೀಮಂತ ಪಾಟೀಲರನ್ನು ಶಾಸಕ ಟಿ.ವೆಂಕಟರಮಣಯ್ಯ ಹಾಗೂ ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜ್ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಅವರು,ಸೀರೆ ಖರೀದಿ ವಿಳಂಬ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ ತಗವರಿತ ಪರಿಹಾರ ನೀಡಬೇಕು ಮತ್ತು ಗುರುತಿನ ಚೀಟಿ ನೀಡುವ ಬಗ್ಗೆ ನೇಕಾರ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಿ ನೇಯ್ಗೆ ಉದ್ಯಮ ಉಳಿಸಬೇಕೆಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವ ಶ್ರೀಮಂತ ಪಾಟೀಲ್, ಸೀರೆ ದಾಸ್ತಾನು ಖರೀದಿಸಲು ಶೀಘ್ರವೇ ನೇಯ್ಗೆ ಉದ್ಯಮ ಇರುವ ವಿಧಾನಸಭಾ ಕ್ಷೇತ್ರದ ಶಾಸಕರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದು ಹಣ ಬಿಡುಗಡೆ ಬಗ್ಗೆ ಮಾತನಾಡುವುದಾಗಿ, ಮಿಕ್ಕ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ,ಶೀಘ್ರವೇ ದೊಡ್ಡಬಳ್ಳಾಪುರಕ್ಕೆ ಭೇಟಿ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಸಂಘದ ಉಪಾಧ್ಯಕ್ಷರಾದ ಕೆ.ಜಿ.ಗೋಪಾಲ್, ಶಿವರಾಮು,ಜೆ.ಎಸ್.ಮಂಜುನಾಥ್,ರಂಗಸ್ವಾಮಿ ಮತ್ತಿತರಿದ್ದರು.