ನವದೆಹಲಿ: ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹ ಪೀಡಿತ 118 ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.
ಮೂರನೇ ಬಾರಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಚೀನಾಗೆ ಮತ್ತೆ ಭಾರತ ಶಾಕ್ ನೀಡಿದ್ದು 117 ಚೀನಾ ಅಪ್ಲಿಕೇಶನ್ ಸಹ ನಿಷೇಧಕ್ಕೆ ಒಳಗಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ನೀಡಿ, ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಮೊಬೈಲ್ ಗೇಮ್ ಅನ್ನು ಬ್ಯಾನ್ ಮಾಡಲಾಗಿದೆ. ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ, ದೇಶದ ಸುರಕ್ಷತೆ ಹಾಗೂ ರಾಜ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆಯೆಡೆಗೆ ಈ ಗೇಮ್ನಲ್ಲಿ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳು ಇರುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಕೋಟ್ಯಾಂತರ ಭಾರತೀಯ ಮೊಬೈಲ್ ಮತ್ತು ಅಂತರ್ಜಾಲ ಬಳಕೆದಾರರ ಸುರಕ್ಷತೆ ಮತ್ತು ಹಿತಾಸಕ್ತಿಯ ದೃಷ್ಟಿಯಿಂದಲೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಪಬ್ ಜಿ ಮೊಬೈಲ್, ನಾರ್ಡಿಕ್ ಮ್ಯಾಪ್, ಲಿವಿಕ್, ಪಬ್ ಜಿ ಲೈಟ್, ವಿ ಚಾಟ್, ವಿ ವರ್ಕ್ ಮತ್ತು ವಿಚಾಟ್ ಸೇರಿದಂತೆ 118 ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ನಿಷೇಧಿತ ಪಟ್ಟಿಯಲ್ಲಿ ಸೇರಿವೆ.