Site icon Harithalekhani

ದೊಡ್ಡಬಳ್ಳಾಪುರ: ಬೆಳೆಗೆ ಜೀವ ಕಳೆ ತಂದ ಮಳೆ / ಎರಡು ದಿನದಲ್ಲಿ 24.4ಎಂಎಂ ಮಳೆ

ದೊಡ್ಡಬಳ್ಳಾಪುರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಾಡುವ ಹಂತದಲ್ಲಿದ್ದ ಜೋಳ,ರಾಗಿ ಸೇರಿದಂತೆ ಇತರ ಬೆಳೆ ಚೇತರಿಸಿಕೊಂಡಿದ್ದು, ರೈತರಲ್ಲಿ ಸಂತಸ ಮೂಡಿದೆ.

ಎರಡು ದಿನದಲ್ಲಿ 24.4ಎಂಎಂ ಮಳೆ 

ತಾಲೂಕಿನಾದ್ಯಂತ ಕಳೆದ ಎರಡು ದಿನಗಳಲ್ಲಿ 24.4 ಎಂಎಂ ಮಳೆಯಾಗಿದ್ದು, ಸಾಸಲು ಹೋಬಳಿಯಲ್ಲಿ ಅತಿ ಹೆಚ್ಚು 43ಎಂಎಂ, ಮದುರೆ 25 ಎಂಎಂ, ಕಸಬ 21 ಎಂಎಂ, ತೂಬಗೆರೆ 17 ಎಂಎಂ, ದೊಡ್ಡಬೆಳವಂಗಲ 16 ಎಂಎಂ ಸುರಿದಿದ್ದು ಒಣಗುತ್ತಿದ್ದ ಬೆಳೆಗೆ ಜೀವತಂದು ತಾಲೂಕಿನ ರೈತರ ಮುಖದಲ್ಲಿ ಮಂದಹಾಸ ತಂದಿದೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬಿತ್ತನೆಯಾದ ಬೆಳೆಯ ವಿವರ 

ಮುಸುಕಿನ ಜೋಳ – 8900 ಹೆಕ್ಟೇರ್, ರಾಗಿ – 1164 ಹೆಕ್ಟೇರ್, ಮೇವಿನಜೋಳ 1115 ಹೆಕ್ಟೇರ್, ತೊಗರಿ 464 ಹೆಕ್ಟೇರ್, ಅವರೆ – 411 ಹೆಕ್ಟೇರ್, ಅಲಸಂದೆ -208 ಹಾಗೂ ನೆಲಗಡಲೆ 233 ಹೆಕ್ಟೇರ್ ಬಿತ್ತನೆಯಾಗಿದೆ.

ರೈತರಿಗೆ ಯೂರಿಯಾ ಬೆಲೆ ಏರಿಕೆ ಬಿಸಿ..

ಒಣಗುತ್ತಿದ್ದ ಬೆಳೆಗಳಿಗೆ ಮಳೆರಾಯ ಜೀವವನ್ನು ತುಂಬಿದ್ದರಲು, ತಾಲೂಕಿನ ಕೆಲವೆಡೆ ಯೂರಿಯಾ ವಿತರಣೆಗೆ ಅಕಾಲಿಕ ಅಭಾವ ಸೃಷ್ಟಿಸಿ ಬೆಲೆಯನ್ನು ಏರಿಕೆ ಮಾಡಿತ್ತಿದ್ದು 400ಕ್ಕು  ಹೆಚ್ಚು ಬೆಲೆಗೆ ಮಾರುತ್ತಿದ್ದಾರೆ. ಈ ಕುರಿತು ರೈತರು ಪ್ರಶ್ನಿಸಿದರೆ ಅಥವಾ ರಸೀದಿ ಕೆಳಿದರೆ ಯೂರಿಯಾ ದಾಸ್ತಾನು ಇಲ್ಲವೆನ್ನುವೆಂದು ಮಾರಾಟಗಾರರು ನಾಟಕವಾಡುತ್ತಿದ್ದು ಅಧಿಕಾರಿಗಳಿಗೆ ದೂರು ನೀಡಲಾಗದೆ, ಅನಿರ್ವಾರ್ಯವಾಗಿ ಹೆಚ್ಚಿನ ಬೆಲೆಗೆ ಯೂರಿಯಾ ಖರೀದಿಸಬೇಕಾದ ಸಂಕಷ್ಟ ರೈತರದ್ದಾಗಿದೆ‌. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಬೆಲೆ ಏರಿಕೆ ಮಾಡುವ ವರ್ತಕರ ಅಂಗಡಿಗಳ ಮೇಲೆ ದಾಳಿ ನಡೆಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ‌.

ಪೊಟೋ – ವೇಣುಪುನಿತ್.

Exit mobile version