ಬೆಂಗಳೂರು: ನೆಲಮಂಗಲ ಉಪವಿಭಾಗ,ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ದರೊಡೆಗೆ ಯತ್ನಿಸುತ್ತಿದ್ದ ನಾಲ್ಕು ಜನ ಆರೋಪಿತರನ್ನು ಬಂಧಿಸಿ ಅವರ ಬಳಿಯಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಶನಿವಾರ 29 ನಸುಕಿನಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೇವಿಕಾದೇವಿ ನೈಟ್ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಲಕ್ಷ್ಮೀಪುರ ಗಂಗೊಂಡನಹಳ್ಳಿ ರಸ್ತೆಯಲ್ಲಿ ಎಂಟು ಜನ ಆಸಾಮಿಗಳು ಗುಂಪು ಗೂಡಿಸಿಕೊಂಡು ಕೈಗಳಲ್ಲಿ ಮರಕಾಸ್ತ್ರಗಳನ್ನು ಹಿಡಿದುಕೊಂಡು ದರೋಡೆ ಮಾಡಲು ಹೊಂಚು ಹಾಕಿಕೊಂಡು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗಾಗಿ ಕಾಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಆಸಾಮಿಗಳು ದರೊಡೆಗೆ ಯತ್ನಿಸುತ್ತಿದ್ದ ಸ್ಥಳಕ್ಕೆ ಧಾವಿಸಿ ಅಲ್ಲಿದ್ದ ಎಂಟು ಜನ ಆರೋಪಿತರ ಪೈಕಿ ನಾಲ್ಕು ಜನರನ್ನು ಹಿಡಿದುಕೊಂಡು ವಶಕ್ಕೆ ಪಡೆದು ಆರೋಪಿಗಳು ದರೊಡೆಗಾಗಿ ತಂದಿದ್ದ ಒಂದು ರಾಡು, ಎರಡು ಚಾಕು, ಒಂದು ದೊಣ್ಣೆ, ಹಾಗೂ ಖಾರದ ಪುಡಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ದಸ್ತಗಿರಿ ಮಾಡಿರುವ ಆರೋಪಿಗಳ ವಿವರ: ಪಾಂಡವಪುರ ತಾಲೂಕಿನ ಮಾಚೋಹಳ್ಳಿ ಕಾಲೋನಿ, ವಿನಯ್ ಕುಮಾರ್ ಅಲಿಯಾಸ್ ವಿನಿ (23) ವರ್ಷ. ದಾಸನಪುರ ಹೋಬಳಿಯ,ದೊಂಬರಹಳ್ಳಿ ಗ್ರಾಮದ ರವಿಕಿರಣ್ ಲಿಯಾಸ್ ಲೂಸ್ ಬಿನ್ ಸುರೇಶ್ ಕುಮಾರ್(24), ಭರತ್ (19), ಚೇತನ್ ಅಲಿಯಾಸ್ ಚೇತು (25)
ತಲೆಮರೆಸಿಕೊಂಡಿರುವವರ ವಿವರ: ದೊಂಬರಹಳ್ಳಿ ಗ್ರಾಮದ ಅವಿನಾಶ್, ಕೆ. ಪಿ. ಅಗ್ರಹಾರದ ಇರ್ಫಾನ್, ಅಬ್ಬು, ಅರಿಶಿನಕುಂಟೆ ಯೋಗೇಶ್.
ಕಾರ್ಯಾಚರಣೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ ಡಿ.ಚನ್ನಣ್ಣನವರ್,ಐ. ಪಿ. ಎಸ್. ಮತ್ತು ಅಪರ ಪೊಲೀಸ್ ಅಧೀಕ್ಷಕ ಲಕ್ಷ್ಮಿಗಣೇಶ್, ನೆಲಮಂಗಲ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಮೋಹನ್ ಅವರ ಮಾರ್ಗದರ್ಶನದಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ .ಸತ್ಯನಾರಾಯಣ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೇವಿಕಾದೇವಿ, ಸಿಬಂದಿಗಳಾದ ನಾರಾಯಣಸ್ವಾಮಿ, ಮಲ್ಲಗೊಂಡಿ, ಗಂಗಾಧರ್, ಶಿವಕುಮಾರ್, ಲಕ್ಷ್ಮಣ್, ಫರ್ವೀಜ್ ಪಾಷಾ, ಇಮ್ರಾನ್ ಖಾನ್, ಶಿವಪ್ಪ ಎಸ್ ಗೌಡರ, ಸಂಜಯ್ ರವರನ್ನು ಒಳಗೊಂಡ ತಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಸದರಿ ಕಾರ್ಯಾಚರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.