ದೊಡ್ಡಬಳ್ಳಾಪುರ: ಭಾನುವಾರ ರಾತ್ರಿ ನಗರದ ಡಿಕ್ರಾಸ್ ಬಳಿ ಗೋವಿನ ಹತ್ಯಾ ಯತ್ನ ನಡೆದಿದ್ದು, ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಗೋವನ್ನು ರಕ್ಷಿಸಿದ್ದಾರೆ.
ಘಟನೆಯ ವಿವರ
ಮಲೆನಾಡ ಗಿಡ್ಡ ತಳಿಗೆ ಸೇರಿದ ಗೋವೊಂದು ಕಳೆದ ಎರಡು ದಿನಗಳಿಂದ ನಗರದ ಡಿಕ್ರಾಸ್ ವ್ಯಾಪ್ತಿಯಲ್ಲಿ ಮೇವನ್ನು ತಿನ್ನುತ್ತಾ ಓಡಾಡುತ್ತಿದ್ದು, ಕಳೆದ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಹತ್ಯಾ ಯತ್ನ ನಡೆಸಿದ್ದಾರೆನ್ನಲಾಗಿದೆ.
ಘಟನೆಯ ವೇಳೆ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಗೋವು ನೋವಿಂದ ನರಳುತ್ತಾ ಡಿ ಕ್ರಾಸ್ ಕಡೆಯಿಂದ ನಂದಿ ಆಸ್ಪತ್ರೆಯ ಕಡೆಗೆ ಸಾಗುತ್ತಿರುವುದನ್ನು ಕಂಡ ಸ್ಥಳೀಯರು,ಹಿಂದು ಪರ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕಾರ್ಯಕರ್ತರು ತಪಸೀಹಳ್ಳಿಯಿಂದ ವೈದ್ಯರನ್ನು ಕರೆತಂದು ತೀವ್ರವಾಗಿ ಗಾಯಗೊಂಡಿದ್ದ ಗೋವಿಗೆ ಚಿಕಿತ್ಸೆ ಕೊಡಿಸಿ ರಕ್ಷಿಸಿದ್ದಾರೆ.ಪ್ರಸ್ತುತ ಗೋವು ಆರೋಗ್ಯವಾಗಿದ್ದು ಗೋಶಾಲೆಗೆ ಕಳಿಸುವ ಸಿದ್ದತೆ ನಡೆಸಲಾಗಿದೆ.
ಗೋವಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಹಾಗೂ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಶ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.