ಚೆನೈ: ಖ್ಯಾತ ಹಿನ್ನಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕರೊನಾ ಸೋಂಕು ನೆಗೆಟಿವ್ ಬಂದಿದೆ ಎಂಬ ಶುಭ ಸುದ್ದಿ ಸುಳ್ಳಾಗಿದೆ.
ಭಾನುವಾರದ ಬುಲೆಟಿನ್ ವರದಿಯಲ್ಲಿ ಕರೊನಾ ನೆಗೆಟಿವ್ ಬಂದಿರುವ ಕುರಿತು ಮಾಧ್ಯಮಗಳಿಗೆ ಬಂದಿರುವ ಸಂದೇಶ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಕುರಿತು ಎಸ್.ಪಿ.ಬಿ ಮಗ ಚರಣ್ ವಿಡಿಯೋ ಸಂದೇಶದ ಮೂಲಕ ಕರೊನಾ ನೆಗೆಟಿವ್ ಬಂದಿದೆ ಎಂಬ ವರದಿ ಸುಳ್ಳಾಗಿದೆ.ತಂದೆಯ ಆರೋಗ್ಯದ ಸ್ಥಿತಿಗತಿಯನ್ನು ನಾನೇ ಮೊದಲು ಎಲ್ಲರಿಗೂ ತಿಳಿಸುತ್ತೇನೆ. ವೈದ್ಯರು ನನಗೆ ಅಪ್ಡೇಟ್ ಮಾಹಿತಿ ನೀಡಿದ ಬಳಿಕ ಅದನ್ನು ಮಾಧ್ಯಮಗಳಿಗೆ ನಾನು ತಿಳಿಸುತ್ತೇನೆ. ಇಂದು ಬೆಳಗ್ಗೆ ಅಪ್ಪನ ಕರೊನಾ ವರದಿ ನೆಗೆಟಿವ್ ಬಂದಿದೆ ಎಂದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ಅವರ ವರದಿ ನೆಗೆಟಿವ್ ಇರಲಿ ಪಾಸಿಟಿವ್ ಆಗಿರಲಿ ಅಪ್ಪನ ಸ್ಥಿತಿ ಈ ಮೊದಲು ಹೇಗಿತ್ತೋ ಈಗಲೂ ಹಾಗೆಯೇ ಸ್ಥಿರವಾಗಿದೆ. ವೆಂಟಿಲೇಟರ್ ಸಹಾಯದ ಮೂಲಕವೇ ಚಿಕಿತ್ಸೆ ಮುಂದುವರಿಸಲಾಗಿದೆ. ಸಂಜೆ ವೇಳೆಗೆ ವೈದ್ಯರ ಜತೆ ಚರ್ಚೆಸಿ ಪೋಸ್ಟ್ ಹಾಕುತ್ತೇನೆ ಎಂದಿದ್ದಾರೆ.
ಈ ಸುದ್ದಿ ರಾಜ್ಯ ಹಾಗೂ ರಾಷ್ಟ್ರೀಯ ಮಾದ್ಯಮಗಳಲ್ಲಿ ಭಾನುವಾರ ರಾತ್ರಿಯೇ ವರದಿಯಾದರೂ,ಮಾಹಿತಿ ಖಚಿತವಾಗದ ಕಾರಣ ಹರಿತಲೇಖನಿ ಸೋಮವಾರದ ಬೆಳಗ್ಗೆಯವರೆಗೂ ಪ್ರಕಟಿಸಿರಲಿಲ್ಲ.
ಆದರೆ ಖಚಿತವಾದ ಸುದ್ದಿ ಮೂಲದ ಸಂದೇಶದಿಂದ ಶುಭಸುದ್ದಿ ಪ್ರಕಟಿಸುವಂತಾಗಿದ್ದು,ಅದೂ ಸಹ ಸುಳ್ಳಾಗಿದ್ದು ವಿಪರ್ಯಾಸ.