Site icon Harithalekhani

ಎಸ್.ಪಿ.ಬಿ ಕುರಿತ ಶುಭ ಸುದ್ದಿ ಸುಳ್ಳಾಯ್ತು / ಎಸ್.ಪಿ.ಬಿ ಆರೋಗ್ಯದ ಶುಭ ಸುದ್ದಿ ತಳ್ಳಿಹಾಕಿದ ಚರಣ್.

ಚೆನೈ: ಖ್ಯಾತ ಹಿನ್ನಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕರೊನಾ ಸೋಂಕು ನೆಗೆಟಿವ್ ಬಂದಿದೆ ಎಂಬ ಶುಭ ಸುದ್ದಿ ಸುಳ್ಳಾಗಿದೆ.

ಭಾನುವಾರದ ಬುಲೆಟಿನ್ ವರದಿಯಲ್ಲಿ ಕರೊನಾ‌ ನೆಗೆಟಿವ್ ಬಂದಿರುವ ಕುರಿತು ಮಾಧ್ಯಮಗಳಿಗೆ ಬಂದಿರುವ ಸಂದೇಶ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಕುರಿತು ಎಸ್.ಪಿ.ಬಿ ಮಗ ಚರಣ್ ವಿಡಿಯೋ ಸಂದೇಶದ ಮೂಲಕ ಕರೊನಾ ನೆಗೆಟಿವ್ ಬಂದಿದೆ ಎಂಬ ವರದಿ ಸುಳ್ಳಾಗಿದೆ.ತಂದೆಯ ಆರೋಗ್ಯದ ಸ್ಥಿತಿಗತಿಯನ್ನು ನಾನೇ ಮೊದಲು ಎಲ್ಲರಿಗೂ ತಿಳಿಸುತ್ತೇನೆ. ವೈದ್ಯರು ನನಗೆ ಅಪ್​ಡೇಟ್​ ಮಾಹಿತಿ ನೀಡಿದ ಬಳಿಕ ಅದನ್ನು ಮಾಧ್ಯಮಗಳಿಗೆ ನಾನು ತಿಳಿಸುತ್ತೇನೆ.​ ಇಂದು ಬೆಳಗ್ಗೆ ಅಪ್ಪನ ಕರೊನಾ ವರದಿ ನೆಗೆಟಿವ್​ ಬಂದಿದೆ ಎಂದು ಎಲ್ಲೆಡೆ ಸುದ್ದಿಯಾಗಿದೆ. ಆದರೆ, ಅವರ ವರದಿ ನೆಗೆಟಿವ್​ ಇರಲಿ ಪಾಸಿಟಿವ್​ ಆಗಿರಲಿ ಅಪ್ಪನ ಸ್ಥಿತಿ ಈ ಮೊದಲು ಹೇಗಿತ್ತೋ ಈಗಲೂ ಹಾಗೆಯೇ ಸ್ಥಿರವಾಗಿದೆ. ವೆಂಟಿಲೇಟರ್​ ಸಹಾಯದ ಮೂಲಕವೇ ಚಿಕಿತ್ಸೆ ಮುಂದುವರಿಸಲಾಗಿದೆ. ಸಂಜೆ ವೇಳೆಗೆ ವೈದ್ಯರ ಜತೆ ಚರ್ಚೆಸಿ ಪೋಸ್ಟ್ ಹಾಕುತ್ತೇನೆ ಎಂದಿದ್ದಾರೆ.

ಈ ಸುದ್ದಿ ರಾಜ್ಯ ಹಾಗೂ ರಾಷ್ಟ್ರೀಯ ಮಾದ್ಯಮಗಳಲ್ಲಿ ಭಾನುವಾರ ರಾತ್ರಿಯೇ ವರದಿಯಾದರೂ,ಮಾಹಿತಿ ಖಚಿತವಾಗದ ಕಾರಣ ಹರಿತಲೇಖನಿ ಸೋಮವಾರದ ಬೆಳಗ್ಗೆಯವರೆಗೂ ಪ್ರಕಟಿಸಿರಲಿಲ್ಲ.

ಆದರೆ ಖಚಿತವಾದ ಸುದ್ದಿ ಮೂಲದ ಸಂದೇಶದಿಂದ ಶುಭಸುದ್ದಿ ಪ್ರಕಟಿಸುವಂತಾಗಿದ್ದು,ಅದೂ ಸಹ ಸುಳ್ಳಾಗಿದ್ದು ವಿಪರ್ಯಾಸ.

Exit mobile version