Site icon Harithalekhani

ದೊಡ್ಡಬಳ್ಳಾಪುರದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವಿಶೇಷ ವ್ಯವಸ್ಥೆ / ಪರಿಸರ ಸ್ನೇಹಿ ಯಾಗಿ ಆಚರಿಸಲು ನಗರಸಭೆ ಸಿದ್ಧತೆ

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಈ ಬಾರಿ ಕೊವಿಡ್-19 ಹಿನ್ನಲೆಯಲ್ಲಿ ಸಂಭ್ರಮದ ಗಣೇಶೋತ್ಸವಕ್ಕೆ ಬ್ರೇಕ್ ಬಿದ್ದಿದ್ದು,ಸರಳವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ.

ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗಾಗಿ ಪೊಲೀಸ್ ಇಲಾಖೆ ಹಾಗೂ ನಗರಸಭೆಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.ಈ ಬಾರಿಯೂ ಅಯ್ಯಪ್ಪಸ್ವಾಮಿ ದೇವಾಲಯದ ಸಮೀಪದ ನಾಗರಕೆರೆ ಅಂಚಿನಲ್ಲಿ ಸಾಮೂಹಿಕ ವಿಸರ್ಜನೆಗಾಗಿ ನಗರಸಭೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. 

ಸಾರ್ವಜನಿಕರು ತಮ್ಮ ಗಣೇಶ ಮೂರ್ತಿಯನ್ನು ಕಡ್ಡಾಯವಾಗಿ ನಿಗದಿಪಡಿಸಿದ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು.ಇಲ್ಲಿ ನಗರಸಭೆ ಸಿಬ್ಬಂದಿ,ಪೊಲೀಸ್ ಸಿಬ್ಬಂದಿ ಹಾಜರಿದ್ದು, ಗಣೇಶ ಮೂರ್ತಿ ವಿಸರ್ಜನೆ ಮಾಡಲು ಸಹಕರಿಸಲಿದ್ದಾರೆ. 

4 ಅಡಿಗಳಿಗಿಂತ ದೊಡ್ಡ ಮೂರ್ತಿ ಪ್ರತಿಷ್ಟಾಪಿಸುವಂತಿಲ್ಲ.ಕೊವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು.ಗಗನಾರ್ಯ ಮಠದ ಸಮೀಪವಿರುವ ಕಲ್ಯಾಣಿ, ಮೊದಲಾಗಿ ಯಾವುದೇ ಕೆರೆ ಕುಂಟೆಗಳಲ್ಲಿ ವಿಸರ್ಜನೆ ಮಾಡಬಾರದು. ನಗರಸಭೆ  ವ್ಯವಸ್ಥೆ ಮಾಡಿರುವ ನಿಗದಿತ ಸ್ಥಳದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು. ವಿಸರ್ಜನೆಯ ಸಮಯದಲ್ಲಿ ಹೂವು, ಬಾಳೆಕಂದು ಮೊದಲಾದ ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸಬೇಕು. ಯಾವುದೇ ರೀತಿಯಲ್ಲಿ ಪ್ಲಾಸ್ಟಿಕ್ ಬಳಕೆ ಬೇಡ. ಕೆರೆ ಕುಂಟೆ ಕಲ್ಯಾಣಿಗಳನ್ನು ಪರಿಸರಸ್ನೇಹಿಯಾಗಿ ಬಳಸಿ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ನಗರಸಭೆ  ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಹರಿತಲೇಖನಿಗೆ ತಿಳಿಸಿದ್ದಾರೆ.

Exit mobile version