ದೊಡ್ಡಬಳ್ಳಾಪುರ: ನಗರದ ಮಂಗಳ ವಿದ್ಯಾ ಮಂದಿರದ ಆವರಣದಲ್ಲಿ ಹಿಂದು ಜಾಗರಣ ವೇದಿಕೆ ಕರೇನಹಳ್ಳಿಯ ಸುಭಾಷ್ ಚಂದ್ರ ಬೋಸ್ ಘಟಕದವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ಆಯೋಜಿಸಲಾಗಿತ್ತು.
ಹಿಂದು ಜಾಗರಣ ವೇದಿಕೆ ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡತುಮಕೂರು ಆನಂದ್ ಮಾತನಾಡಿದ, ಈ ದಿನ ಅಂಖಡವಾಗಿದ್ದ ಭಾರತ ತ್ರಿಖಂಡವಾದ ದಿನವಾಗಿದ್ದು ಇದು ಸಂಭ್ರಮಿಸುವ ದಿನವೋ ಅಲ್ಲಾವೋ ಚಿಂತಿಸಬೇಕಿದೆ ಎಂದರು.ದೇಶ ಒಡೆದಾಗ ನಮ್ಮ ಹಿಂದು ಸಹೋದರ ಸಹೋದರಿಯರ ಮಾನ,ಪ್ರಾಣ ಬಲಿದಾನವಾದ ಈ ದಿನವನ್ನು ಅಖಂಡ ಭಾರತ ದಿನವನ್ನಾಗಿ ಕಳೆದ 25 ವರ್ಷಗಳಿಂದ ಹಿಂದು ಜಾಗರಣ ವೇದಿಕೆ ಸ್ಮರಿಸುತ್ತಾ ಬಂದಿದೆ ಎಂದರು.
ಈ ವೇಳೆ ಹಿಂದು ಜಾಗರಣ ವೇದಿಕೆಯ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಯಶೋಧರಘುನಾಥ್, ಸುರಾಕ್ಷಾ ಪ್ರಮುಖ್ ಶಾಜಿ, ನಗರ ಕಾರ್ಯದರ್ಶಿಗಳಾದ ಮಂಜುನಾಥ್, ಗುಣಸಾಗರ್ ಕಾರ್ಯಕರ್ತರಾದ ವಾಸು,ಅಪ್ಪಯ್ಯಣ್ಣ, ರಿಟ್ಟಲ್ ರಘು,ವಿಶ್ವಾಸ್, ಸೋಮು, ದೇವಿ, ಚಂದ್ರು ಮಂಚಿನ ಬೆಲೆ,ಖಾಸ್ ಬಾಗ್ ವಾಸು ಮತ್ತಿತರಿದ್ದರು.