ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ತಾಲ್ಲೂಕಿನ ಎಸ್. ಎಂ.ಗೊಲ್ಲಹಳ್ಳಿ ದಿನ್ನೆ ಬಯಲು ಬಸವಣ್ಣಸ್ವಾಮಿಗೆ ವಿಶೇಷ ಪೂಜೆ ನಡೆದವು.
ಅರಳುಮಲ್ಲಿಗೆ, ಏಕಾಶಿಪುರ, ಎಸ್.ಎಂ.ಗೊಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು. ಪ್ರತಿ ವರ್ಷವು ಶ್ರಾವಣ ಮಾಸದ ಕೊನೆಯ ಸೋಮವಾರ ಮಹಿಳೆಯರಿಂದ ಹೊಂಬಾಳೆ ಆರತಿ ಸೇವೆಗಳು ನಡೆಸಲಾಗುತಿತ್ತು.ನೂರಾರು ಜನ ಭಕ್ತಾಧಿಗಳು ಭಾಗವಹಿಸಿ ಅನ್ನಸಂತರ್ಪಣೆಯನ್ನು ನಡೆಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಆರತಿ, ಅನ್ನಸಂತರ್ಪಣೆ ನಡೆಸದೆ ವಿಶೇಷ ಪೂಜೆಯನ್ನು ಮಾತ್ರ ನೆರವೇರಿಸಲಾಯಿತು.