ದೊಡ್ಡಬಳ್ಳಾಪುರ: ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಯುವಕನ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ನಡೆದಿದೆ.
ಹತ್ಯೆಗೆ ಒಳಗಾದ ಯುವಕನನ್ನು ಮಂಜುನಾಥ್(22) ಎಂದು ಗುರುತಿಸಲಾಗಿದೆ.
ಘಟನೆಯ ವಿವರ
ಹುಲಿಕುಂಟೆ ಗ್ರಾಮದ ನಿವಾಸಿ ಮಂಜುನಾಥ್.ತಾಯಿ,ಅಕ್ಕನೊಂದಿಗೆ ಗ್ರಾಮದ ಹೊರವಲಯದಲ್ಲಿನ ಮನೆಯಲ್ಲಿ ವಾಸವಿದ್ದರೆನ್ನಲಾಗಿದ್ದು, ಶನಿವಾರ ರಾತ್ರಿ ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿರುವ ಇಬ್ಬರು ಅಪರಿಚಿತರು ರಾಡ್ ನಿಂದ ಮಂಜುನಾಥ್ ತಲೆಗೆ ಒಡೆದಿದ್ದು ತೀವ್ರವಾಗಿ ಗಾಯಗೊಂಡ ಮಂಜುನಾಥ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಘಟನೆಯ ನಂತರ ಮಂಜುನಾಥ್ ಅವರ ದ್ವಿಚಕ್ರವಾಹನವನ್ನು ಕೊಂಡೊಯ್ದು ಮಧುರ ಹೊಸಹಳ್ಳಿ ಗೇಟ್ ಬಳಿ ಬಿಟ್ಟು ತೆರಳಿದ್ದಾರೆ ಎನ್ನಲಾಗಿದ್ದು,ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.