ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ಎನ್.ನಾಗರಾಜ ಪರಿಶೀಲನೆ ನಡೆಸಿದರು.
ತಾಲೂಕಿನ ರಾಜಘಟ್ಟ,ಮೆಳೇಕೋಟೆ ವ್ಯಾಪ್ತಿಯಲ್ಲಿನ ನಮ್ಮ ಹೊಲ ನಮ್ಮ ದಾರಿ,ಒಕ್ಕಣೆ ಕಣ, ರಿಚಾರ್ಜ್ ಪಿಟ್,ಅಂಗನವಾಡಿ ಕಾಮಗಾರಿ, ಗ್ರಾಮೀಣ ಉದ್ಯಾನವನ, ಶಾಲಾ ಕಾಂಪೌಂಡ್,ಸಿಸಿ ಚರಂಡಿ, ಕೃಷಿ ಹೊಂಡ,ವಸತಿ ಯೋಜನೆ. ಗೋಕಟ್ಟೆ ,ಕೊಟ್ಟಿಗೆ. ಸೋಕ್ ಪಿಟ್, ಕಿಚನ್ ಗಾರ್ಡನ್, ಇತರೆ ಕಾಮಗಾರಿಗಳ ಮಾಹಿತಿ ಪಡೆದರು
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಮುರುಡಯ್ಯ, ಸಹಾಯಕ ನಿರ್ದೇಶಕಿ ಸಿ.ಗೀತಾಮಣಿ ಹಾಗೂ ರಾಜಘಟ್ಟ, ಮೆಳೇಕೋಟೆ ಗ್ರಾಮಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಾದ ಸೋಮಮೂರ್ತಿ,ರಮಿತ,ತಾಂತ್ರಿಕ ಅಧಿಕಾರಿಗಳಾದ ಶ್ಯಾಮಸುಂದರ್, ಅರುಣ್ ಕುಮಾರ್ ಮತ್ತಿತರಿದ್ದರು.