ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮಂಗಳವಾರ ಹದಿನೇಳು ಮಂದಿಗೆ ಕರೊನಾ ಸೊಂಕು ದೃಡಪಟ್ಟಿದ್ದು,ಬೆಂಗಳೂರಿನಲ್ಲಿ ಚಿಕಿತ್ಸೆ ದಾಖಲಾಗಿದ್ದ ವನ್ನಿಗರಪೇಟೆಯ 80ವರ್ಷದ ಮಹಿಳೆಗೆ ಸೋಂಕು ದೃಢಪಟ್ಟ ಬೆನ್ನಲ್ಲೆ ಸಾವನ್ನಪ್ಪಿದ್ದು,ತಾಲೂಕಿನಲ್ಲಿ ಕರೊನಾ ಸೋಂಕಿತರ ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ.ಮಂಗಳವಾರ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 14 ಪುರುಷ ಹಾಗೂ ಮೂವರು ಮಹಿಳೆಯರು ಸೇರಿ ಹದಿನೇಳು ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ.ಕೊಂಗಾಡಿಯಪ್ಪ ರಸ್ತೆ ಹಾಗೂ ಮುತ್ತೂರಿನಲ್ಲಿ ತಲಾ ಎರಡು ಪ್ರಕರಣ, ವರದನಹಳ್ಳಿ,ದರ್ಜಿಪೇಟೆ, ಖಾಸ್ ಬಾಗ್, ವನ್ನಿಗರಪೇಟೆ,ಮಾರುತಿ ನಗರ, ಕರಗ ದೇವಸ್ಥಾನದ ಹಿಂದಿನ ರಸ್ತೆ,ಕಾಲೇಜ್ ರಸ್ತೆ, ತಾಲೂಕು ಕಚೇರಿ ರಸ್ತೆ, ಕಲ್ಲುಪೇಟೆ, ರಘುನಾಥಪುರ, ಬಾಶೆಟ್ಟಿಹಳ್ಳಿ, ತ್ಯಾಗರಾಜನಗರ, ಪ್ರಿಯದರ್ಶಿನಿ ಬಡಾವಣೆಯಲ್ಲಿ ತಲಾ ಒಂದು ಪ್ರಕರಣ ದೃಡಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 669 ಮಂದಿಗೆ ಸೋಂಕು ತಗುಲಿದ್ದು,376 ಮಂದಿ ಗುಣಮುಖರಾಗಿದ್ದರೆ 18 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 30 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 245 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.