ದೊಡ್ಡಬಳ್ಳಾಪುರ: ಡಿ.ಸಿ.ಶಶಿಧರ್ ರಾಜಿನಾಮೆಯಿಂದ ತೆರವಾಗಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಹೆಚ್.ಪಿ.ಜಯರಾಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ರತ್ನಮ್ಮ ಹೆಚ್.ಪಿ.ಜಯರಾಂ ಹಾಗೂ ಕಣಿವೇಪುರ ಸುನೀಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದು,ಅಂತಿಮ ಕ್ಷಣದಲ್ಲಿ ಸುನೀಲ್ ಕುಮಾರ್ ನಾಮಪತ್ರ ಹಿಂಪಡೆದ ಕಾರಣ ರತ್ನಮ್ಮ ಹೆಚ್.ಪಿ.ಜಯರಾಂ ಅವಿರೋಧವಾಗಿ ಆಯ್ಕೆಯಾದರು.
22 ಸದಸ್ಯರ ಬಲದ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿಗೆ,2016 – 21ರ ಆಡಳಿತ ಅವಧಿಯಲ್ಲಿ ಶ್ರೀವತ್ಸ ಹಾಗೂ ಡಿ.ಸಿ.ಶಶಿಧರ್ ನಂತರ ಮೂರನೆ ಅಧ್ಯಕ್ಷರಾಗಿ ರತ್ನಮ್ಮ ಹೆಚ್.ಪಿ.ಜಯರಾಂ ಆಯ್ಕೆಯಾಗಿದ್ದಾರೆ.
ಐದು ತಿಂಗಳ ಅಧ್ಯಕ್ಷ ಸ್ಥಾನ..?
ಹರಿತಲೇಖನಿಗೆ ದೊರೆತ ಉನ್ನತ ಮೂಲಗಳ ಮಾಹಿತಿ ಪ್ರಕಾರ.ಮುಂದಿನ 11ತಿಂಗಳ ಅವಧಿಯಲ್ಲಿ,5ತಿಂಗಳ ಅವಧಿ ಮಾತ್ರ ರತ್ನಮ್ಮ ಹೆಚ್.ಪಿ.ಜಯರಾಂ ಅಧ್ಯಕ್ಷೆಯಾಗಿರಲಿದ್ದು
ನಂತರ ಕೊನಘಟ್ಟ ನಾರಾಯಣಗೌಡ ಅಥವಾ ಹುಲಿಕುಂಟೆ ಮಂಜುನಾಥ್ ಅಧ್ಯಕ್ಷರನ್ನಾಗಿಸಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.
ಅಧ್ಯಕ್ಷೆಯಾಗಿ ಆಯ್ಕೆಯಾದ ರತ್ನಮ್ಮ ಹೆಚ್.ಪಿ.ಜಯರಾಂ ಅವರನ್ನು ಶಾಸಕ ಟಿ.ವೆಂಕಟರಮಣಯ್ಯ,ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್,ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಅಭಿನಂದನೆ ಸಲ್ಲಿಸಿದ್ದಾರೆ.
ಹೆಚ್ಚಿನ ವರದಿಗಳಿಗೆ ಫೇಜ್ ಲೈಕ್ ಮಾಡಿ,ಫಾಲೋ ಮಾಡಿ..
https://www.facebook.com/harithalekhani5/