ದೊಡ್ಡಬಳ್ಳಾಪುರ: 2019-20 ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು,ಕೆಲ ಮನೆಗಳಲ್ಲಿ ಸಂಭ್ರಮ.ಮತ್ತೆ,ಕೆಲ ಮನೆಗಳಲ್ಲಿ ಕುರುಕ್ಷೇತ್ರ ನಡೆದಿರುವ ವರದಿ ಬೆನ್ನೆಲ್ಲೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ದೇವರಿಗೆ ಶರಣಾಗಿದ್ದಾರೆ.
ಕರೊನಾ ಸೋಂಕಿನ ಹಾವಳಿ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದು ಅಗ್ನಿ ಪರೀಕ್ಷೆಯೇ ಎನ್ನುವಂತಹ ಸಂಧರ್ಭದಲ್ಲಿ.ಆಡಳಿತ, ವಿರೋಧ ಪಕ್ಷ ಸೇರಿದಂತೆ ಸಾರ್ವಜನಿಕರ ಆಕ್ಷೇಪದ ನಡುವೆಯೂ ಯಶಸ್ವಿಯಾಗಿ ಪರೀಕ್ಷೆ ನಡೆಸಿ ಸೈ ಎನಿಸಿಕೊಂಡಿದ್ದರು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್.
ಪರೀಕ್ಷೆಯ ಸುಸೂತ್ರವಾಗಿ ನಡೆಯಲೆಂದು ಕುರುಡುಮಲೆ ವಿನಾಯಕನ ಮೊರೆ ಹೊಗಿದ್ದರೆನಿಸುತ್ತೆ..! ಕಾರಣ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ಶಿಕ್ಷಣ ಸಚಿವರು ಕುರುಡುಮಲೆ ವಿನಾಯಕನಿಗೆ ಶರಣಾಗಿದ್ದಾರೆ.
ಈ ಕುರಿತು ಸಚಿವ ಎಸ್.ಸುರೇಶ್ ಕುಮಾರ್ ವಿಷಯ ಬಹಿರಂಗಪಡಿಸಿದ್ದು ಈ ಕೆಳಕಂಡಂತಿದೆ.
ಬಹು ನಿರೀಕ್ಷಿತ SSLC ಫಲಿತಾಂಶ ಇಂದು ಪ್ರಕಟವಾಯಿತು.
ನನ್ನ ಮನಸ್ಸು ನಿರಾಳವಾಯಿತು.
ಮುಳಬಾಗಿಲ ಬಳಿಯ ಕುರುಡುಮಲೆ ವಿನಾಯಕನ ಮಂದಿರಕ್ಕೆ ಹೋಗಿ ಭಗವಂತನಿಗೆ ಶರಣಾದೆ.