ದೊಡ್ಡಬಳ್ಳಾಪುರ: ಹೊಲದಲ್ಲಿ ಮೇವನ್ನು ತಿನ್ನುತ್ತಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿರುವ ಹಿನ್ನೆಲೆ,ಹಸು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ತಾಲೂಕಿನ ಸಾಸಲು ಹೋಬಳಿಯ ತಮ್ಮಗಾನಹಳ್ಳಿ ಸಮೀಪದ ಜಮೀನಿನಲ್ಲಿ ನಡೆದಿದೆ.
ತಮ್ಮಗಾನಹಳ್ಳಿ ರೈತ ದೊಡ್ಡಕೆಂಪಯ್ಯ ಎನ್ನುವವರು ಹಸುವನ್ನು ಮೇಸಲು ತಮ್ಮ ಜಮೀನಿಗೆ ಕರೆದೊಯ್ದಿದ್ದ ವೇಳೆ ಘಟನೆ ನಡೆದಿದೆ,ದೊಡ್ಡಕೆಂಪಯ್ಯರ ಜಮೀನುಅರಣ್ಯ ಪ್ರದೇಶಕ್ಕೆ ಹೊಂದಿದ್ದು,ಚಿರತೆ ಹಠಾತ್ ದಾಳಿ ನಡೆಸಿದೆ.ಹಸುವನ್ನು ರಕ್ಷಿಸಲು ದೊಡ್ಡಕೆಂಪಯ್ಯ ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಹರಿತಲೇಖನಿಗೆ ತಿಳಿಸಿದ್ದಾರೆ.