ದೊಡ್ಡಬಳ್ಳಾಪುರ: ನಗರದ ಸ್ವಾಮಿ ವಿವೇಕಾನಂದ ಶಾಲಾ ಮಕ್ಕಳಿಗೆ ಸರ್ಕಾರ ದಿಂದ ಉಚಿತವಾಗಿ ನೀಡಲಾದ ಪಠ್ಯಪುಸ್ತಕ ಮತ್ತು ಅಕ್ಷರ ದಾಸೋಹ ದಿನಸಿ.ಮತ್ತು ರಾಮಾಯಣ ಮತ್ತು ಮಹಾಭಾರತ ಕಥೆಗಳ ಪುಸ್ತಕಗಳನ್ನು ಶಾಲೆಯ ಮುಖ್ಯಶಿಕ್ಷಕ ಹೆಚ್.ಕೆ.ನಟರಾಜ್ ವಿತರಿಸಿದರು.
ಈ ವೇಳೆ ಹರಿತಲೇಖನಿಗೆ ಮಾಹಿತಿ ನೀಡಿದ ಅವರು,ಅನುದಾನಿತ ಶಾಲೆಯಲ್ಲಿ ಸರ್ಕಾರ ದಿಂದ ಉಚಿತವಾಗಿ ನೀಡಲಾದ ಪಠ್ಯಪುಸ್ತಕ ಮತ್ತು ಅಕ್ಷರ ದಾಸೋಹ ದಿನಸಿ.ಮತ್ತು ಪ್ರತಿ ವರ್ಷದಂತೆ ದಾನಿಗಳಾದ ಹುಂಗಿ ಈಶ್ವರ್ ಅವರು ಉಚಿತವಾಗಿ ನೀಡಿದ ಭಾರತೀಯ ಸಂಸ್ಕೃತಿಯನ್ನು ನಿರೂಪಿಸುವ ರಾಮಾಯಣ ಮತ್ತು ಮಹಾಭಾರತ ಕಥೆಗಳ ಪುಸ್ತಕಗಳು ಮತ್ತು ನೀತಿ ಭೋದನೆ ತಿಳಿಸುವ ಪುಸ್ತಕಗಳನ್ನು ಮತ್ತು ಬೆಂಗಳೂರಿನ ಗೋವು ಸಂರಕ್ಷಕರಾದ ಹಾಗೂ ಶಿಕ್ಷಣ ಪ್ರೇಮಿಯಾದ ಮಹೇಂದ್ರ ಮನೋತ್ ಅವರು ಉಚಿತವಾಗಿ ನೀಡಿದ ನೋಟ್ಸ್. ಪುಸ್ತಕಗಳನ್ನು ಶಾಲೆಯ 243ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.