ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಇಂದು ಏಳು ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು 281 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಗುರುವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 5 ಮಂದಿ ಗಂಡು ಹಾಗೂ ಇಬ್ಬರು ಮಹಿಳೆಯರು ಸೇರಿ ಏಳು ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ. ಮುತ್ಯಾಲಮ್ಮ ದೇವಸ್ಥಾನದ ರಸ್ತೆಯಲ್ಲಿ ಎರಡು, ಖಾಸ್ ಬಾಗ್, ಗಂಗಾಧರಪುರ, ಚೈತನ್ಯನಗರ, ತೇರಿನ ಬೀದಿ ಹಾಗೂ ತಳಗವಾರದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 588 ಮಂದಿಗೆ ಸೋಂಕು ತಗುಲಿದ್ದು, 281 ಮಂದಿ ಗುಣಮುಖರಾಗಿದ್ದರೆ 16 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 32 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 259 ಮಂದಿಯನ್ನು ದೇವನಹಳ್ಳಿ/ಹಜ್ ಭವನ/ಖಾಸಗಿ ಆಸ್ಪತ್ರೆ /ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.