ಹುಬ್ಬಳ್ಳಿ: ಶ್ರೀ ರಾಮ ಮಂದಿರ ಭೂಮಿ ಪೂಜೆ ನಡೆದ ಇಂದಿನ ದಿನ ಹಿಂದೂ ಸಮಾಜಕ್ಕೆ ಸಿಕ್ಕ ಸಾಂಸ್ಕೃತಿಕ ಸ್ವಾತಂತ್ರದ ದಿನ ಎಂದು ರಾಷ್ಟ್ರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅಶೋಕ್ ಅಣವೇಕರ ತಿಳಿಸಿದರು.
ಹುಬ್ಬಳ್ಳಿಯ ರಾಷ್ಟ್ರ ರಕ್ಷಣಾ ವೇದಿಕೆ ಕಚೇರಿಯಲ್ಲಿ ಶ್ರೀ ರಾಮಮಂದಿರ ಭೂಮಿ ಪೂಜೆಯನ್ನು,ಸಾಂಸ್ಕೃತಿಕ ಸ್ವಾತಂತ್ರದ ದಿನವೆಂದು ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಸುಧೀರ್ಘ ಹೋರಾಟ ತ್ಯಾಗ ಬಲಿದಾನದ ನಂತರ ಸಂದ ಜಯದ ಈ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವೆಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಶಿವಾನಂದ ವಡ್ಡಟ್ಟಿ,ಶ್ರೇಣಿಕ ಅಂತನ್ನವರ, ವಿಕೆ ಹಿರೇಮಠ ಮತ್ತಿತರಿದ್ದರು.