Site icon Harithalekhani

ರೈಲಿಗೆ ಸಿಲುಕಿ ವೃದ್ದೆ ಆತ್ಮಹತ್ಯೆ..?

ದೊಡ್ಡಬಳ್ಳಾಪುರ: ಸುಮಾರು 65 ವರ್ಷದ ವೃದ್ದೆಯೋರ್ವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ / ರಾಜನುಕುಂಟೆ ನಡುವೆ ನಡೆದಿದೆ.

ಮೃತರನ್ನು ಸುಮಾರು 65 ವರ್ಷದ ವೃದ್ದೆ ಎಂದು ಗುರುತಿಸಲಾಗಿದೆ.ಕುತ್ತಿಗೆಯಲ್ಲಿ ಸಿಲುಬೆ ಹಾಗೂ ಬಲಗೈ ಮೇಲೆ ಸಿಲುಬೆ ಹಚ್ಚೆ ಗುರುತಿದೆ.

ಘಟನೆ ಕುರಿತು ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೆ‌.

ಮೃತರ ವಾರಸುದಾರರಿದ್ದಲ್ಲಿ ಮೊಬೈಲ್ ಸಂಖ್ಯೆ: 9480802143 ಗೆ ಕರೆ ಮಾಡಲು ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಕೋರಿದ್ದಾರೆ.

Exit mobile version